April 27, 2024

Kannada

Live News Updates ಲೈವ್ ಸುದ್ದಿ ನವೀಕರಣಗಳು

  • ಕಲ್ಯಾಣ ಕರ್ನಾಟಕ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಲು ರಣತಂತ್ರ! ಡಿಕೆಶಿ ಮಾಸ್ಟರ್ ಪ್ಲ್ಯಾನ್‌ ಏನು?
    on April 27, 2024 at 5:58 am

    ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ (Lok Sabha Elections 2024) ಮೊದಲ ಹಂತ ಮುಗಿದಿದೆ. ಈಗ ಕಾಂಗ್ರೆಸ್(Congress) ಪಾಲಿಗೆ ಎರಡನೇ ಹಂತ ಅತ್ಯಂತ ನಿರ್ಣಾಯಕವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ನಿರೀಕ್ಷೆ ಇದೆ. ಮೊದಲಾರ್ಧ ಮುಗಿದಿರುವ ಕಾರಣ ನಾಯಕರ ಪೂರ್ಣ ಪ್ರಮಾಣದ ಬಳಕೆಗೆ ಕಾಂಗ್ರೆಸ್‌ ಮುಂದಾಗಿದೆ. ಬಾಕಿ ಉಳಿದಿರುವ 14 ಕ್ಷೇತ್ರಗಳ ಜವಾಬ್ದಾರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar) ಹಂಚಿಕೆ ಮಾಡಿದ್ದಾರೆ. ಅದರಂತೆ 14 ಲೋಕಸಭಾ ಕ್ಷೇತ್ರಗಳಿಗೆ(14 Lok Sabha Constituencies) 14 ಸಚಿವರ ನಿಯೋಜನೆ ಮಾಡಲಾಗಿದ್ದು,  ಈಗಿರುವ ಉಸ್ತುವಾರಿಗಳ ಜೊತೆಗೆ ಮತ್ತೊಬ್ಬ ಸಚಿವರನ್ನ ಡಿಕೆಶಿ ನೇಮಕ ಮಾಡಿದ್ದಾರೆ. ಅದರಂತೆ ನಾಳೆಯಿಂದಲೇ ಬಾಕಿ ಉಳಿದಿರುವ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದ ತಂತ್ರಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಅಲ್ಲದೆ ಈಗ ಮುಕ್ತಾಯ ಆಗಿರುವ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೈ ಶಾಸಕರಿಗೂ ಈ ಜವಾಬ್ದಾರಿ ನೀಡಲಾಗಿದೆ. ಇದರ ಜೊತೆಗೆ ಸಮುದಾಯವಾರು, ಪ್ರಭಾವಿ ನಾಯಕರನ್ನೂ ಸಹ ಮತ ಸೆಳೆಯಲು ಬಳಕೆ ಮಾಡಿಕೊಳ್ಳಲಾಗಿದೆ. ಆಯಾ ಸಮುದಾಯಗಳ ಮತ ಸೆಳೆಯಲು ಅದೇ ಸಮುದಾಯ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಈ ಮೂಲಕ ಬಾಕಿ ಉಳಿದಿರುವ 14 ಲೋಕಸಭಾ ಕ್ಷೇತ್ರದಲ್ಲಿ ರಣತಂತ್ರ ರೂಪಿಸಲಾಗಿದೆ. ಇದನ್ನೂ ವೀಕ್ಷಿಸಿ:  Lok Sabha elections 2024: 14 ಲೋಕಸಭಾ ಕ್ಷೇತ್ರದಲ್ಲಿನ ಮತದಾನ ಅಂತ್ಯ, ಮತಯಂತ್ರಗಳಲ್ಲಿ 247 ಅಭ್ಯರ್ಥಿಗಳ ಭವಿಷ್ಯ ಭದ್ರ!

  • ಬಾಹ್ಯಾಕಾಶದ ಗಡಿಗಳಾಚೆ: ಭಾರತದ 2047ರ ಮುನ್ನೋಟ
    on April 27, 2024 at 5:51 am

    ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ) ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಆಗಸ್ಟ್ 23, 2023ರಂದು ಇಳಿದ ಬಳಿಕ, ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಹೆಚ್ಚಿನ ಮಹತ್ವ ಲಭಿಸಿತು. 75 ಮಿಲಿಯನ್ ಡಾಲರ್ ಮೌಲ್ಯದಲ್ಲಿ ಕೈಗೊಳ್ಳಲಾದ ಚಂದ್ರಯಾನ-3, ರಾಕೆಟ್ ಉಡಾವಣೆಯಿಂದ ಪ್ರೊಪಲ್ಷನ್ ವ್ಯವಸ್ಥೆ, ಚಂದ್ರನ ಮೇಲೆ ಲ್ಯಾಂಡರ್ ಇಳಿಯುವಿಕೆ ಮತ್ತು ರೋವರ್ ಚಲನೆಗಳನ್ನು ಒಳಗೊಂಡ ಸಂಪೂರ್ಣ ಯೋಜನೆಯಾಗಿತ್ತು. ಕಡಿಮೆ ವೆಚ್ಚದಲ್ಲಿ ಭಾರತ ಕೈಗೊಂಡ ಚಂದ್ರಯಾನ-3, ಇತರ ರಾಷ್ಟ್ರಗಳಿಗೂ ತಮ್ಮದೇ ಆದ ಸುಸ್ಥಿರ ಬಾಹ್ಯಾಕಾಶ ಯೋಜನೆಗಳನ್ನು ಕೈಗೊಳ್ಳುವ ಇಚ್ಛೆ ಮೂಡಿಸಿದೆ. ಚಂದ್ರಯಾನ 4, 5, 6, 7: ಚಂದ್ರಯಾನ-3 ಯೋಜನೆಯ ಯಶಸ್ಸಿನ ಬಳಿಕ, ಭಾರತ ತನ್ನ ಮುಂದಿನ ಚಂದ್ರಯಾನ-4 ಯೋಜನೆಯನ್ನು ಘೋಷಿಸಿದೆ. ಇದರಲ್ಲಿ ಚಂದ್ರನ ದೂರದ ಬದಿಯಲ್ಲಿ ಲ್ಯಾಂಡರ್ ಇಳಿಸಿ, ಚಂದ್ರನ ಮೇಲ್ಮೈ ಮಾದರಿಗಳನ್ನು ಸಂಗ್ರಹಿಸಿ, ಭೂಮಿಗೆ ಮರಳಲಾಗುತ್ತದೆ. ಇದರ ಬಳಿಕ ನಡೆಯಲಿರುವ ಚಂದ್ರಯಾನ-5, 6 ಮತ್ತು 7 ಯೋಜನೆಗಳು ಚಂದ್ರ ಅನ್ವೇಷಣೆಯನ್ನು ಇನ್ನಷ್ಟು ವಿಸ್ತರಿಸಲಿವೆ. ಚಂದ್ರಯಾನ-6 ಯೋಜನೆಯ ಮೂಲಕ, ಭಾರತ ಚಂದ್ರನ ಮೇಲೆ ಮಾನವ ನೆಲೆಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಚಂದ್ರಯಾನ-7 ಯೋಜನೆಯಂತೂ ಚಂದ್ರನ ಮೇಲೆ ಮೂಲಭೂತ ವ್ಯವಸ್ಥೆಗಳ ನಿರ್ಮಾಣ ಕಾರ್ಯ ನಡೆಸಲು ಉದ್ದೇಶಿತ ಯೋಜನೆಯಾಗಿದೆ. ಬಾಹ್ಯಾಕಾಶದಿಂದ ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟ ಇಸ್ರೋ! ಭಾರತದ ಮೊದಲ ಸೌರ ಅನ್ವೇಷಣಾ ಯೋಜನೆಯಾದ ಆದಿತ್ಯ ಎಲ್-1, ಸೂರ್ಯನ ಕೊರೊನಾವನ್ನು ಗಮನಿಸಲು ಉದ್ದೇಶಿಸಿದ್ದು, ಸೆಪ್ಟೆಂಬರ್ 2, 2023ರಂದು ಉಡಾವಣೆಗೊಂಡಿತು. ಬಳಿಕ, 127 ದಿನಗಳ ಪ್ರಯಾಣ ನಡೆಸಿ, ಜನವರಿ 6ರಂದು ತನ್ನ ಗುರಿಯಾದ ಲ್ಯಾಗ್ರೇಂಜ್ ಬಿಂದುವನ್ನು ತಲುಪಿತು. ಭಾರತ ಪ್ರಸ್ತುತ ತನ್ನ ಮಾನವ ಸಹಿತ ಬಾಹ್ಯಾಕಾಶ ಯಾತ್ರೆಯ ಯೋಜನೆಯಾದ ಗಗನಯಾನಕ್ಕೆ ಸೂಕ್ತವಾದ ಉಡಾವಣಾ ವಾಹನ ನಿರ್ಮಾಣದ ಕುರಿತು ಕಾರ್ಯಾಚರಿಸುತ್ತಿದೆ. ಈ ಉಡಾವಣಾ ವಾಹನದಲ್ಲಿ, ಜೀವ ಬೆಂಬಲ ವ್ಯವಸ್ಥೆಗಳು ಮತ್ತು ಸಿಬ್ಬಂದಿ ತರಬೇತಿ ವ್ಯವಸ್ಥೆಗಳು ಸೇರಿವೆ. ಡಿಸೆಂಬರ್ 13ರಂದು, ಇಸ್ರೋ ಮುಖ್ಯಸ್ಥರಾದ ಸೋಮನಾಥ್ ಅವರು ಭಾರತ ತನ್ನದೇ ಆದ ಎನ್ವಿರಾನ್ಮೆಂಟಲ್ ಕಂಟ್ರೋಲ್ ಆ್ಯಂಡ್ ಲೈಫ್ ಸಪೋರ್ಟ್ ಸಿಸ್ಟಮ್ (ಇಸಿಎಲ್ಎಸ್ಎಸ್) ಅನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದಿದ್ದರು. ಅದರೊಡನೆ, ಮಂಗಳ ಗ್ರಹದ ವಾತಾವರಣವನ್ನು ಅಧ್ಯಯನ ನಡೆಸುವ ಉದ್ದೇಶದಿಂದ, ಭಾರತದ ಎರಡನೇ ಮಂಗಳ ಗ್ರಹ ಅನ್ವೇಷಣಾ ಯೋಜನೆ 2030ರಲ್ಲಿ ಕಾರ್ಯಗತಗೊಳ್ಳುವ ನಿರೀಕ್ಷೆಗಳಿವೆ. 2023ರ ಡಿಸೆಂಬರ್‌ನಲ್ಲಿ, ಭಾರತ ತನ್ನ ಅಧಿಕೃತ ಬಾಹ್ಯಾಕಾಶ ನೀತಿಯಾದ ‘ಸ್ಪೇಸ್ ವಿಷನ್ – 2047’ ಅನ್ನು ಅನಾವರಣಗೊಳಿಸಿತು. ಇದು ಭಾರತದ ವಾಣಿಜ್ಯಿಕ ಬಾಹ್ಯಾಕಾಶ ವಲಯವನ್ನು ಅಭಿವೃದ್ಧಿ ಪಡಿಸುವ ಉದ್ದೇಶ ಹೊಂದಿದ್ದು, ತನ್ನ ಖಾಸಗಿ ಬಾಹ್ಯಾಕಾಶ ಉದ್ಯಮವನ್ನು ನಿರ್ವಹಿಸಬಲ್ಲ ಮುಖ್ಯ ಸಂಸ್ಥೆಗಳನ್ನು ಗುರುತಿಸುತ್ತಿದೆ. ಅದರೊಡನೆ, ಬಾಹ್ಯಾಕಾಶ ಸಂಪನ್ಮೂಲಗಳನ್ನು ಬಳಸುವ ಮತ್ತು ಮಾಲಿಕತ್ವ ಹೊಂದುವ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡುತ್ತದೆ. ಪ್ರಧಾನ ಮಂತ್ರಿಗಳ ಕಾರ್ಯಾಲಯ (ಪಿಎಂಒ) ಈಗಾಗಲೇ ಭಾರತದ ಬಾಹ್ಯಾಕಾಶ ಯೋಜನೆಗಳ ನೀಲಿ ನಕಾಶೆಯನ್ನು ಸಿದ್ಧಪಡಿಸಿದೆ. ಇದರ ಪ್ರಕಾರ, ಚಂದ್ರಯಾನ-4 ಯೋಜನೆಯ ಪರಿಕಲ್ಪನಾ ಹಂತ ಆರಂಭಗೊಂಡಿದ್ದು, ಉಡಾವಣೆ 2028ರ ವೇಳೆಗೆ ನಡೆಯುವ ಸಾಧ್ಯತೆಗಳಿವೆ. ಇನ್ನು ಭೂಮಿಯಿಂದ 120-140 ಕಿಲೋಮೀಟರ್ ಎತ್ತರದಲ್ಲಿರುವ ಭೂಮಿಯ ಕೆಳ ಕಕ್ಷೆಯಲ್ಲಿ (ಎಲ್ಇಒ) ಸ್ಥಾಪಿಸಲಾಗುವ ಭಾರತೀಯ ಬಾಹ್ಯಾಕಾಶ ನಿಲ್ದಾಣ 2035ರ ವೇಳೆಗೆ ಸಿದ್ಧವಾಗಲಿದೆ. ಭಾರತ 2040ರಲ್ಲಿ ಗಗನಯಾತ್ರಿಗಳನ್ನು ಚಂದ್ರನ ಮೇಲ್ಮೈಗೆ ಕಳುಹಿಸುವ ಗುರಿ ಹಾಕಿಕೊಂಡಿದೆ. ಭಾರತೀಯ ವಾಯುಪಡೆ ತನ್ನ ಹೆಸರನ್ನು ಇಂಡಿಯನ್ ಏರ್ ಫೋರ್ಸ್‌ನಿಂದ (ಐಎಎಫ್) ಇಂಡಿಯನ್ ಏರ್ ಆ್ಯಂಡ್ ಸ್ಪೇಸ್ ಫೋರ್ಸಸ್ (ಐಎಎಸ್ಎಫ್) ಎಂದು ಬದಲಿಸುವ ಪ್ರಸ್ತಾವನೆ ಸಲ್ಲಿಸಿದೆ. ಈ ಬದಲಾವಣೆ, ಭಾರತದ ಕಾರ್ಯತಂತ್ರದಲ್ಲಿನ ಬದಲಾವಣೆಗಳನ್ನು ಪ್ರದರ್ಶಿಸಿ, ರಾಷ್ಟ್ರೀಯ ಭದ್ರತೆಯಲ್ಲಿ ಬಾಹ್ಯಾಕಾಶದ ಮಹತ್ವವನ್ನೂ ವಿವರಿಸುತ್ತದೆ. ಇದು ಬ್ರಿಟಿಷ್ ಆಡಳಿತದಿಂದ ಭಾರತ 1947ರಲ್ಲಿ ಸ್ವಾತಂತ್ರ್ಯ ಪಡೆದುದರ ನೂರನೇ ವರ್ಷಾಚರಣೆಯನ್ನು ಸಂಭ್ರಮಿಸುವ ನಿಟ್ಟಿನಲ್ಲಿ, ಭಾರತದ ಅಧಿಕೃತ ಬಾಹ್ಯಾಕಾಶ ನೀತಿಯ ಭಾಗವಾಗಿದೆ. ಈ ಅಂಕಣದಲ್ಲಿ ನಾವು ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ವರ್ತಮಾನ ಮತ್ತು ಭವಿಷ್ಯದ ದಿಕ್ಕುಗಳನ್ನು ಸೂಚಿಸುವ ನಾಲ್ಕು ಪ್ರಮುಖ ಅಂಶಗಳನ್ನು ಗಮನಿಸೋಣ. ಈ ಅಂಶಗಳು ನಾಗರಿಕ ಮತ್ತು ಮಿಲಿಟರಿ ಎರಡೂ ಉದ್ದೇಶಗಳಿಗೆ ಮತ್ತು ಭವಿಷ್ಯದ ಬಾಹ್ಯಾಕಾಶ ನೀತಿಗಳಿಗೆ ಅವಶ್ಯಕವಾದ ನಿಯಮಾವಳಿಗಳು ಮತ್ತು ಸಾಂಸ್ಥಿಕ ಚೌಕಟ್ಟುಗಳಾಗಿವೆ. ನೀತಿ ಮತ್ತು ಸಾಂಸ್ಥಿಕ ಅಂಶ (ನಾಗರಿಕ ಮತ್ತು ಮಿಲಿಟರಿ): 2019ರಲ್ಲಿ, ಭಾರತ ಡಿಫೆನ್ಸ್ ಸ್ಪೇಸ್ ಏಜೆನ್ಸಿಯನ್ನು ಸ್ಥಾಪಿಸಿತು. ಇದು ಡಿಫೆನ್ಸ್ ಸ್ಪೇಸ್ ರಿಸರ್ಚ್ ಆರ್ಗನೈಸೇಶನ್ ಜೊತೆಗೆ ಒಂದು ರೀತಿ ಬಾಹ್ಯಾಕಾಶ ಸೇನೆಯಂತೆಯೂ ಕಾರ್ಯಾಚರಿಸುತ್ತದೆ. 2019ರಲ್ಲಿ ಸ್ಥಾಪಿಸಲಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ ಬಾಹ್ಯಾಕಾಶ ತಂತ್ರಜ್ಞಾನಗಳು ಮತ್ತು ಸಾರ್ವಜನಿಕ ಹಣದಿಂದ ನಿರ್ಮಿಸಿರುವ ವ್ಯವಸ್ಥೆಗಳ ವಾಣಿಜ್ಯೀಕರಣ ನಡೆಸುವ ಜವಾಬ್ದಾರಿ ಹೊಂದಿದೆ. ಇಂಡಿಯನ್ ನ್ಯಾಷನಲ್ ಸ್ಪೇಸ್ ಪ್ರೊಮೋಷನ್ ಆ್ಯಂಡ್ ಆಥರೈಸೇಷನ್ ಸೆಂಟರ್ (IN-SPACe) ಸರ್ಕಾರಿ ಮತ್ತು ಖಾಸಗಿ ವಲಯಗಳ ಬಾಹ್ಯಾಕಾಶ ಚಟುವಟಿಕೆಗಳಿಗೆ ಜವಾಬ್ದಾರವಾಗಿದೆ. ಭಾರತ ತನ್ನ ವಾಣಿಜ್ಯಿಕ ಬಾಹ್ಯಾಕಾಶ ವಲಯವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಈಡೇರಿಸುವ ಸಲುವಾಗಿ, ಪ್ರತ್ಯೇಕವಾದ ಬಾಹ್ಯಾಕಾಶ ಇಲಾಖೆಯನ್ನು (DoS) ಸ್ಥಾಪಿಸಿದೆ. ಇದು ಪ್ರಧಾನ ಮಂತ್ರಿಗಳ ಕಾರ್ಯಾಲಯದಡಿ ಕಾರ್ಯ ನಿರ್ವಹಿಸುತ್ತಾ, ಬಾಹ್ಯಾಕಾಶ ನೀತಿಗಳನ್ನು ಜಾರಿಗೆ ತರುತ್ತದೆ. ಇದೇ ಸಂದರ್ಭದಲ್ಲಿ, ಇಸ್ರೋ ಸಂಶೋಧನೆ ಮತ್ತು ಅಭಿವೃದ್ಧಿಯ ಕುರಿತು ಗಮನ ಹರಿಸುತ್ತದೆ. ಸಮರ್ಥ ವಾಯು ಶಕ್ತಿಯಾಗಿರುವ ಭಾರತೀಯ ವಾಯುಪಡೆ, ಭವಿಷ್ಯದಲ್ಲಿ ಸಮರ್ಥ ಏರೋಸ್ಪೇಸ್ ಶಕ್ತಿಯಾಗುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ವಾಯುಪಡೆ ಇಸ್ರೋ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ), ಇನ್-ಸ್ಪೇಸ್ ಮತ್ತು ಇತರ ಭಾರತೀಯ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳ ಜೊತೆಗೆ ಸಹಯೋಗ ಸಾಧಿಸಲು ಬಯಸುತ್ತಿದೆ. ಐಎಎಫ್ 2023ರಲ್ಲಿ ತನ್ನ ಹೆಸರನ್ನು ಐಎಎಸ್ಎಫ್ ಎಂದು ಬದಲಾಯಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಬಾಹ್ಯಾಕಾಶ ದಟ್ಟಣೆ ನಿಯಂತ್ರಣ, ಬಾಹ್ಯಾಕಾಶ ಪರಿಸ್ಥಿತಿಯ ಅರಿವು ಮತ್ತು ಬಾಹ್ಯಾಕಾಶ ಹವಾಮಾನ ಮುನ್ಸೂಚನೆ ನಿರ್ವಹಣಾ ಸಾಮರ್ಥ್ಯ ಗಳಿಸಲು ಪ್ರಯತ್ನಿಸುತ್ತಿದೆ. ಈ ಕ್ರಮ ಅಕ್ಟೋಬರ್ 2022ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಘೋಷಿಸಿದ ‘ಮಿಷನ್ ಡಿಫ್‌ಸ್ಪೇಸ್’ಗೆ ಪೂರಕವಾಗಿದೆ. ಮಿಷನ್ ಡಿಫ್‌ಸ್ಪೇಸ್ ಅಡಿಯಲ್ಲಿ ಖಾಸಗಿ ಬಾಹ್ಯಾಕಾಶ ಸಂಸ್ಥೆಗಳಿಗೆ 75 ರಕ್ಷಣಾ ಸಂಬಂಧಿ ಬಾಹ್ಯಾಕಾಶ ಸವಾಲುಗಳನ್ನು ನಿರ್ವಹಿಸಿ, ಸ್ಥಳೀಯ ಅಭಿವೃದ್ಧಿ ಸಾಧಿಸಲು ನೆರವಾಗುವಂತೆ ಆಹ್ವಾನಿಸಲಾಗಿತ್ತು. ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಭಾರತ ಭವಿಷ್ಯದ ನೋಟ: ಭಾರತ 2025ರಿಂದ 2047ರ ತನಕ ಆರ್ಥಿಕ ಮಾರ್ಗಸೂಚಿಯೊಂದನ್ನು ಹಾಕಿಕೊಂಡಿದೆ. ಪ್ರಸ್ತುತ ಮಾರ್ಗಸೂಚಿ ಬಾಹ್ಯಾಕಾಶ ಪ್ರವಾಸೋದ್ಯಮವನ್ನು ಉತ್ತೇಜಿಸಿ, ಜಾಗತಿಕ ಬಾಹ್ಯಾಕಾಶ ಮಾಹಿತಿಗಳನ್ನು ಒದಗಿಸಿ, ಭಾರತವನ್ನು ಪ್ರಮುಖ ಬಾಹ್ಯಾಕಾಶ ಸಂಬಂಧಿ ಉತ್ಪಾದನಾ ತಾಣವಾಗಿ ರೂಪಿಸಲು ಪ್ರಯತ್ನಿಸುತ್ತದೆ. ಭಾರತದ ದೃಷ್ಟಿಕೋನ ಬಾಹ್ಯಾಕಾಶವನ್ನು ಎಲ್ಲರಿಗೂ ಲಭ್ಯವಾಗುವಂತೆ ಮಾಡುವುದಾಗಿದ್ದು, ಬಾಹ್ಯಾಕಾಶವನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಂಡು, ತನ್ನ ಉತ್ಪಾದನಾ ಸಾಮರ್ಥ್ಯವನ್ನು ಜಗತ್ತಿನಾದ್ಯಂತ ಬಾಹ್ಯಾಕಾಶ ಉದ್ಯಮದ ನೆರವಿಗೆ ಬಳಸುವಂತೆ ಮಾಡುತ್ತದೆ. ಈ ಬೆಳವಣಿಗೆಗಳಿಂದಾಗಿ ಮುಂದೆ ಮಹತ್ತರ ಬದಲಾವಣೆಗಳು ಉಂಟಾಗಿ, ಬಾಹ್ಯಾಕಾಶ ವಲಯದಲ್ಲಿ ಹೆಚ್ಚುತ್ತಿರುವ ಭಾರತದ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸಲಿವೆ. 2023ರಲ್ಲಿ ಪ್ರಧಾನಿಗಳ ಕಾರ್ಯಾಲಯ ಬಾಹ್ಯಾಕಾಶದಲ್ಲಿ ಭಾರತದ ಭವಿಷ್ಯದ ಯೋಜನೆಗಳನ್ನು ವಿಸ್ತೃತವಾಗಿ ವಿವರಿಸಿದೆ. ಸ್ಪೇಸ್ ವಿಷನ್ 2047 ಎಂಬ ಮಾರ್ಗಸೂಚಿ, ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮಹತ್ವದ ಗುರಿಗಳು ಮತ್ತು ಮೈಲಿಗಲ್ಲುಗಳನ್ನು ಸೂಚಿಸಿದೆ. ಭಾರತದ ಗುರಿಗಳಲ್ಲಿ, 2025ರ ವೇಳೆಗೆ ಸಂವಹನ ಉಪಗ್ರಹಗಳ ಉಡಾವಣೆ, 2030ರ ವೇಳೆಗೆ ಕ್ವಾಂಟಮ್ ಮತ್ತು ಆಪ್ಟಿಕಲ್ ಸಂವಹನದ ಅಭಿವೃದ್ಧಿ, 2030ರಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾನ, ಮರುಬಳಕೆ ಮಾಡಬಲ್ಲ ಭಾರೀ ಉಡಾಯಕಗಳ ನಿರ್ಮಾಣ, 2035ರಿಂದ 2040ರೊಳಗೆ ಟು ಸ್ಟೇಜ್ ಟು ಆರ್ಬಿಟ್ (ಟಿಎಸ್‌ಟಿಒ) ಪೂರ್ಣ ಮರುಬಳಕೆ ಮಾಡಬಲ್ಲ ಬಾಹ್ಯಾಕಾಶ ವಾಹನ ಅಭಿವೃದ್ಧಿ, 2040ರ ವೇಳೆಗೆ ಬಾಹ್ಯಾಕಾಶ ಆಧಾರಿತ ಕಾರ್ಯತಂತ್ರದ ರಕ್ಷಣಾ ವ್ಯವಸ್ಥೆ, ಅದೇ ವರ್ಷದಲ್ಲಿ ಮಾನವ ಸಹಿತ ಚಂದ್ರಯಾನ, 2047ರ ವೇಳೆಗೆ ಅಂತರಗ್ರಹ ಸಂಪರ್ಕ ಜಾಲ ಸ್ಥಾಪನೆ ಮತ್ತು ಭವಿಷ್ಯದಲ್ಲಿ ಬಾಹ್ಯಾಕಾಶ ಗಣಿಗಾರಿಕೆಗಳು ಸೇರಿವೆ. ಮೋದಿ ಬೆಂಬಲ: ದಕ್ಷಿಣ ಚೀನಾ ಸಮುದ್ರದ ಬಿಕ್ಕಟ್ಟಿನ ನಡುವೆಯೂ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ಬಲ! ಭಾರತದ 2047ರ ಬಾಹ್ಯಾಕಾಶ ಮಾರ್ಗಸೂಚಿ ಚೀನಾದ 2049ರ ಬಾಹ್ಯಾಕಾಶ ಕಾರ್ಯತಂತ್ರವನ್ನು ಹೋಲುತ್ತದೆ. ಆದರೆ, ಚೀನಾಗೆ ಹೋಲಿಸಿದರೆ ಭಾರತದ ಮುಂದೆ ಮಹತ್ತರವಾದ ಸವಾಲುಗಳಿವೆ. ಗಮನಾರ್ಹವಾಗಿ, ಭಾರತ ಇನ್ನೂ ಸ್ಪೇಸ್ ಎಕ್ಸ್‌ನ ಸ್ಟಾರ್ ಶಿಪ್ ಅಥವಾ ಚೀನಾದ ಲಾಂಗ್ ಮಾರ್ಚ್ 9 ರೀತಿಯ ಭಾರೀ ಪ್ರಮಾಣದ ತೂಕ ಎತ್ತಬಲ್ಲ ರಾಕೆಟ್ ಅನ್ನು ಅಭಿವೃದ್ಧಿ ಪಡಿಸಿಲ್ಲ. ಈಗಿನ್ನೂ ಭಾರತದ ಬಳಿ ಮಾನವ ಸಹಿತ ಗಗನಯಾತ್ರೆ ನಡೆಸುವ ಸಾಮರ್ಥ್ಯವಿಲ್ಲ ಅಥವಾ ಭಾರೀ ಬಾಹ್ಯಾಕಾಶ ರಚನೆಗಳನ್ನು ನಿರ್ಮಿಸಲು, ಹಾಗೂ ನಿರ್ವಹಿಸಲು ಸಾಧ್ಯವಿಲ್ಲ. ಅದರೊಡನೆ, ಚೀನಾ ಇತ್ತೀಚೆಗೆ ಪ್ರದರ್ಶಿಸಿರುವ ಮರುಬಳಕೆ ಮಾಡಬಲ್ಲ ಬಾಹ್ಯಾಕಾಶ ವಿಮಾನ ತಂತ್ರಜ್ಞಾನವನ್ನು ಭಾರತ ಅಭಿವೃದ್ಧಿ ಪಡಿಸಿಲ್ಲ. ಬಾಹ್ಯಾಕಾಶ ಆಧಾರಿತ ಸೌರ ಶಕ್ತಿಗಾಗಿ ರಾಷ್ಟ್ರಾದ್ಯಂತ ಕಾರ್ಯಕ್ರಮವನ್ನು ಭಾರತವಿನ್ನೂ ಸ್ಥಾಪಿಸಿಲ್ಲ. ಇಂತಹ ಹಿನ್ನಡೆಗಳು, ಭಾರತ ಇನ್ನೂ ಸಾಕಷ್ಟು ಪ್ರಗತಿ ಸಾಧಿಸುವುದಿದೆ ಎಂಬುದನ್ನು ಸೂಚಿಸುತ್ತವೆ. ಕಳೆದ ಒಂದು ದಶಕದ ಅವಧಿಯಲ್ಲಿ, ಚೀನಾ ಬಾಹ್ಯಾಕಾಶ ಸಾಮರ್ಥ್ಯದಲ್ಲಿ ಅಮೆರಿಕಾದೊಡನೆ ತನಗಿದ್ದ ಅಂತರವನ್ನು ಸಾಕಷ್ಟು ತಗ್ಗಿಸಿದೆ. ಚೀನಾದ ಆರ್ಥಿಕ ಸವಾಲುಗಳನ್ನು ಪರಿಗಣಿಸಿದರೆ, 2040ರ ದಶಕದಲ್ಲಿ ಭಾರತ ತನಗಿರುವ ಜನಸಂಖ್ಯಾ ಅನುಕೂಲತೆಗಳು ಮತ್ತು ಪ್ರತಿಭೆಗಳನ್ನು ಬಳಸಿಕೊಂಡು, ಕ್ಷಿಪ್ರವಾಗಿ ಚೀನಾದ ಮಟ್ಟವನ್ನು ತಲುಪಬಹುದು. 2040ರ ವೇಳೆಗೆ ಯಾವ ರಾಷ್ಟ್ರ ಪ್ರಮುಖ ಬಾಹ್ಯಾಕಾಶ ಶಕ್ತಿಯಾಗಲಿದೆ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ. ಯಾವ ರಾಷ್ಟ್ರ ನಿರಂತರವಾಗಿ ದೀರ್ಘಾವಧಿಯ ನೀತಿಗಳ ಮೇಲೆ ಗಮನ ಹರಿಸಿ, ಹೂಡಿಕೆಗಳನ್ನು ಹೊಂದಿ, ಶಿಕ್ಷಣ, ತರಬೇತಿಯ ಮೇಲೆ ವೆಚ್ಚ ಮಾಡಿ, ದೂರದೃಷ್ಟಿಯ ಯೋಜನೆಗಳನ್ನು ರೂಪಿಸುತ್ತದೋ, ಆ ರಾಷ್ಟ್ರ ಕಾರ್ಯತಂತ್ರದ ಮೇಲುಗೈ ಸಾಧಿಸಲು ಸಾಧ್ಯವಾಗಲಿದೆ.

  • ವಾತ್ಸಾಯನ ಕಾಮಸೂತ್ರ: ಪುರುಷನ ಪ್ರೇಮವನ್ನು ಸ್ತ್ರೀ ತಿರಸ್ಕರಿಸುವುದು ಯಾಕೆ?
    on April 27, 2024 at 5:39 am

    ವಾತ್ಸಾಯನನನ್ನು ಭಾರತೀಯ ಇತಿಹಾಸದ ಕಾಮಶಾಸ್ತ್ರ ಪಂಡಿತನೆಂದು ವಿಶ್ಲೇಷಿಸಲಾಗುತ್ತದೆ. ಕಾಮಕ್ಕೆ ಸಂಬಂಧಿಸಿದಂತೆ ವಾತ್ಸಾಯನ ಕಾಮಸೂತ್ರವೆಂಬ ಗ್ರಂಥವನ್ನು ರಚಿಸಿದ್ದಾನೆ. ಕಾಮಸೂತ್ರದಲ್ಲಿ ಗಂಡು- ಹೆಣ್ಣಿನ ಸಂಬಂಧ, ಮೋಹ, ರಾಗಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಗಂಡು ಹೆಣ್ಣಿನ ವೈವಿಧ್ಯ ವೈಖರಿಗಳು, ಗಂಡು- ಹೆಣ್ಣು ಪರಸ್ಪರರನ್ನು ಒಲಿಸಿಕೊಳ್ಳುವ ಬಗೆ ಇತ್ಯಾದಿಗಳ ಬಗ್ಗೆಯೂ ವಿಸ್ತಾರವಾಗಿ ಹೇಳಿದ್ದಾನೆ. ಆದರೆ ಪ್ರಪೋಸ್‌ ಮಾಡುವ ಎಲ್ಲ ಗಂಡಸರೂ ಸ್ತ್ರೀಯ ಒಲುಮೆಯನ್ನು ಪಡೆಯಲು ಯಶಸ್ವಿಯಾಗುವುದಿಲ್ಲ. ಹಾಗಿದ್ದರೆ ಒಬ್ಬ ಮಹಿಳೆ, ಪುರುಷನೊಬ್ಬನನ್ನು ತಿರಸ್ಕರಿಸುವುದು ಯಾಕೆ? ಮಹಿಳೆಯು ಪುರುಷನ ಪ್ರೇಮಕಾಮಗಳನ್ನು ತಿರಸ್ಕರಿಸುವ ಕಾರಣಗಳು ಈ ಕೆಳಗಿನಂತಿವೆ ಎಂದು ಕಾಮಸೂತ್ರ ಹೇಳುತ್ತದೆ: – ಇನ್ನಷ್ಟು ಅವಕಾಶ ಬೇಕಿದೆ. ಗಂಡಸು ಅವಸರ ಮಾಡುತ್ತಾನೆ. ಹೆಂಗಸು ಕಾಲ ತೆಗೆದುಕೊಳ್ಳುತ್ತಾಳೆ. ಒಂದು ಮಗ್ನತೆ ಬರದೇ ಹೆಣ್ಣಿಗೆ ಮುಂದುವರಿಯುವುದು ಕಷ್ಟ. – ತುಂಬಾ ಪರಿಚಿತ ವ್ಯಕ್ತಿಯಾದರೆ ನಿರ್ಲಕ್ಷ್ಯ ಕಾರಣವಾಗಬಹುದು. Sexual Health : ಸೆಕ್ಸ್ ನಂತ್ರ ಧಮ್ ಎಳೆಯೋರಿಗೆ ಕ್ಯಾನ್ಸರ್ ಬೆನ್ನು ಹತ್ತುತ್ತೆ ಹುಷಾರ್! – ಪುರುಷ ಹಾಗೂ ಸ್ತ್ರೀಯ ಜೀವನದ ಮಟ್ಟದಲ್ಲಿ ವ್ಯತ್ಯಾಸವಿದ್ದರೂ ಗಂಡಿನ ಪ್ರೇಮವನ್ನು ಆಕೆ ತಿರಸ್ಕರಿಸಬಹುದು. – ಪುರುಷ ಕೇಡಿಗನಾದರೆ, ಕಳ್ಳನಾದರೆ, ಅವಮಾನ ಮಾಡುವವನಾದರೆ ಒಲ್ಲೆ ಎನ್ನಬಹುದು. – ಈತ ತನ್ನನ್ನು ಸಾಕಲಾರ, ತನಗೆ ಬೇಕಾದುದನ್ನು ತೆಗೆಸಿ ಕೊಡಬಲ್ಲಷ್ಟು ಶ್ರೀಮಂತನಲ್ಲ ಎಂದು ತಿಳಿದರೆ ಆಕೆಗೆ ಆತನ ಸಂಗ ಬೇಡವಾಗಬಹುದು. – ಪುರುಷ ಹೆಚ್ಚಾಗಿ ಪ್ರಯಾಣದಲ್ಲಿರುವವನಾದರೆ, ಆತ ತನಗೆ ಸಿಗುವುದಿಲ್ಲ ಎಂಬ ಆತಂಕ – ಗಂಡಸು ಇನ್ನೊಬ್ಬ ಸ್ತ್ರೀಯೊಂದಿಗೆ ಸಲಿಗೆಯಿಂದ ಇದ್ದರೆ. – ಈ ವ್ಯಕ್ತಿ ತನ್ನ ಉದ್ದೇಶವನ್ನು ರಹಸ್ಯವಾಗಿಡುವುದಿಲ್ಲ ಎಂಬ ಭಯ – ಗಂಡು ತನ್ನ ಸ್ನೇಹಿತರಿಗೆ ತುಂಬಾ ನಿಷ್ಠನಾಗಿರುತ್ತಾನೆ ಮತ್ತು ಅವರ ಬಗ್ಗೆ ತುಂಬಾ ಗೌರವವನ್ನು ಹೊಂದಿದ್ದಾನೆ. ಹೀಗಾಗಿ ತನ್ನನ್ನು ಕಡೆಗಣಿಸಬಹುದು ಎಂಬ ಭಯ. – ಅವನು ಈ ಸಂಬಂಧದಲ್ಲಿ ಗಂಭೀರವಾಗಿಲ್ಲ (Not serious in Relationship) ಎಂಬ ಆತಂಕ. – ಅವನೊಬ್ಬ ಸುಪ್ರಸಿದ್ಧ ವ್ಯಕ್ತಿ ಎಂಬ ಕಾರಣಕ್ಕೆ ನಾಚಿಕೆ. – ಅವನು ಸಿಕ್ಕಾಪಟ್ಟೆ ಶಕ್ತಿಯುತ, ಆಕ್ರಮಣಕಾರಿ ಅಥವಾ ತುಂಬಾ ಪ್ರಚೋದಕ ಉತ್ಸಾಹವನ್ನು ಹೊಂದಿರುವ ಕಾರಣ ಭಯ. – ಅವನು ತುಂಬಾ ಬುದ್ಧಿವಂತನಾಗಿರುವ ಕಾರಣದಿಂದ ನಾಚಿಕೆ. ಮಗಳಿಗೆ ಲವ್ ಮಾಡೋದ್ಹೇಗೆಂದು ಹೇಳಿ ಕೊಟ್ಟ ಬಾಲಿವುಡ್ ನಟಿ ರವೀನಾ ಟಂಡನ್ – ಅವನು ತನಗಿಂತ ಕಡಿಮೆ ಯೋಗ್ಯತೆ ಹೊಂದಿದವನಾಗಿದ್ದರೆ. – ಅವನು ದುರ್ಬಲ, ಭಾವೋದ್ರೇಕದ ವ್ಯಕ್ತಿ ಎಂಬ ಆಲೋಚನೆ. – ತನ್ನಿಂದಾಗಿ ಅವನಿಗೆ ಏನಾದರೂ ಸಂಭವಿಸಬಾರದು ಎಂದು ಸಹಾನುಭೂತಿ. – ಅವಳ ಸ್ವಂತ ಅಪೂರ್ಣತೆಗಳ ಬಗ್ಗೆ ಹತಾಶೆ. – ಅವನ ಬೂದು ಕೂದಲು ಅಥವಾ ಕಳಪೆ ನೋಟವನ್ನು ನೋಡಿದ ಭ್ರಮನಿರಸನ. ವಾತ್ಸಾಯನನ ಪ್ರಕಾರ, ಮಹಿಳೆ ಸಾಮಾನ್ಯವಾಗಿ ಸುಂದರ ಪುರುಷನತ್ತ ಆಕರ್ಷಿತಳಾಗುತ್ತಾಳೆ. ಪುರುಷ ಸಹ ಪ್ರತಿ ಸುಂದರ ಮಹಿಳೆಯೊಂದಿಗೆ ಸುಲಭವಾಗಿ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಹಲವಾರು ನಿರ್ಬಂಧಗಳಿಂದ ಅವರು ಮುಂದಿನ ಹೆಜ್ಜೆಗಳನ್ನು ಮುಂದಿಡುವುದಿಲ್ಲ. ಮಹಿಳೆ ಯಾರನ್ನಾದರೂ ಪ್ರೀತಿಸಿದಾಗ ಕೆಲವೊಮ್ಮೆ ಸರಿ-ತಪ್ಪುಗಳನ್ನು ನೋಡದೆ ಪ್ರೀತಿಸುತ್ತಾಳೆ. ಆದರೆ ಅವಳು ಎಂದಿಗೂ ಪುರುಷನನ್ನು ಗೆಲ್ಲಲು ಮೊದಲ ಹೆಜ್ಜೆ ಇಡಲು ಪ್ರಯತ್ನಿಸುವುದಿಲ್ಲ ಅಥವಾ ಪುರುಷನು ಅದನ್ನು ಪ್ರಯತ್ನಿಸಿದಾಗ ಅವಳು ಸಮ್ಮಿಲನವನ್ನು ಬಯಸಿದರೂ ಅವನಿಂದ ದೂರ ಸರಿಯಲು ಪ್ರಯತ್ನಿಸುತ್ತಾಳೆ. ಆದರೆ ಪ್ರಕ್ರಿಯೆಯು ಮತ್ತೆ ಮತ್ತೆ ಪುನರಾವರ್ತನೆಯಾದಾಗ ಅವಳು ತನ್ನ ಒಪ್ಪಿಗೆಯನ್ನು ನೀಡುತ್ತಾಳೆ.  

  • Breaking ರಾಜ್ಯ ಸರ್ಕಾರದ ಹೋರಾಟಕ್ಕೆ ಜಯ, ಕೇಂದ್ರದಿಂದ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ
    on April 27, 2024 at 5:32 am

    ನವದೆಹಲಿ (ಏ.27): ರಾಜ್ಯ ಸರ್ಕಾರದ ಹೋರಾಟಕ್ಕೆ ಜಯಕ್ಕೆ ಜಯ ಸಿಕ್ಕಿದೆ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ  3455 ಕೋಟಿ ರೂಪಾಯಿಗಳ ಬರ ಪರಿಹಾರ ಬಿಡುಗಡೆ ಮಾಡಿದೆ.  ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಹಿನ್ನೆಲೆಯಲ್ಲಿ ಈಗ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ. ಬರ ಕುರಿತು ಪರಿಶೀಲನೆ ನಡೆಸಿದ ರಾಜ್ಯ ಸರ್ಕಾರ 18,174 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಕೆ ಮಾಡಿತ್ತು.  ಸದ್ಯ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3455 ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ: ಗೃಹ ಸಚಿವ ಪರಮೇಶ್ವರ್ ಬರ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ತಾರಕಕ್ಕೇರಿ ರಾಜ್ಯಕ್ಕೆ ಬರ ಪರಿಹಾರ ನೀಡುವಲ್ಲಿ ಮೋದಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿ ಡಿಸಿಎಂ, ಮಂತ್ರಿಗಳು ಸೇರಿ ಕಾಂಗ್ರೆಸ್‌ ಪಕ್ಷದ ಮುಖಂಡರು, ಕಾರ್ಯಕರ್ತರು ಧರಣಿ ನಡೆಸಿದ್ದರು. ಬರ ಪರಿಹಾರ ಸಿಗದಿದ್ದಾಗ ರಾಜ್ಯ ಸರ್ಕಾರ ದೆಹಲಿಯಲ್ಲಿ ಕೂಡ ಪ್ರತಿಭಟನೆ ಮಾಡಿತ್ತು.  ಬರ ಪರಿಹಾರದ ಬದಲು ರಾಜ್ಯಕ್ಕೆ ಮೋದಿ ಕೊಟ್ಟದ್ದು ಖಾಲಿ ಚೊಂಬು: ರಾಹುಲ್‌ ಗಾಂಧಿ ಬರ ಪರಿಹಾರಕ್ಕೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿ 7 ತಿಂಗಳಾಗಿತ್ತು. 18,172 ಕೋಟಿ ರು.ಗಳನ್ನು ಎನ್.ಡಿ.ಆರ್.ಎಫ್ ನಿಂದ ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಒತ್ತಾಯ  ಮಾಡಿತ್ತು. ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಸರ್ಕಾರ ದಾವೆ ಹೂಡಿ ಪ್ರಶ್ನಿಸಿತ್ತು. ಸಂವಿಧಾನಬದ್ದವಾಗಿ ಕರ್ನಾಟಕಕ್ಕೆ ಬಿಡುಗಡೆ ಮಾಡಬೇಕಿದ್ದ ಬರ ಪರಿಹಾರವನ್ನು ಬಿಡುಗಡೆ ಮಾಡದೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ತೀವ್ರ ಬರದಿಂದ ಕಂಗೆಟ್ಟಿರುವ ಕರ್ನಾಟಕದ ರೈತರು ಕಂಗಾಲಾಗಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಸುಪ್ರೀಂ ರಾಷ್ಟ್ರೀಯ ಪ್ರಾಕೃತಿಕ ವಿಕೋಪ ನಿಧಿಯಿಂದ ಕರ್ನಾಟಕಕ್ಕೆ ತಕ್ಷಣ ಹಣ ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಕೇಂದ್ರದ  ಮುಂದಿನ ಸೋಮವಾರದೊಳಗೆ ಪರಿಹಾರ ಸಂಬಂಧ ಕ್ರಮ ಕೈಗೊಳ್ಳುತ್ತೇವೆ ಎಂದು ಸುಪ್ರೀಂ ನಲ್ಲಿ ಭರವಸೆ ನೀಡಿತ್ತು. ಸದ್ಯ ಪ್ರಕರಣದ ವಿಚಾರಣೆ ಏ.29ಕ್ಕೆ ನಡೆಯಲಿದೆ. ಕರ್ನಾಟಕದ ಜೊತೆಗೆ ಕೇರಳ ಮತ್ತು ತಮಿಳುನಾಡು ರಾಜ್ಯಗಳು ಕೂಡ ಪರಿಹಾರಕ್ಕಾಗಿ ಸುಪ್ರೀಂ ಮೆಟ್ಟಲೇರಿತ್ತು. ಪ್ರಕೃತಿ ವಿಕೋಪದಲ್ಲಾದ ಪರಿಹಾರವಾಗಿ ತಮಿಳುನಾಡಿಗೆ 276 ಕೋಟಿ ಬಿಡುಗಡೆ ಮಾಡಿದೆ.

  • ಸಕ್ಸಸ್ ಅಂದ್ರೆ ಇದು! 2 ಕೋಟಿ ಮೌಲ್ಯದ ಚಿನ್ನ ಧರಿಸೋ ಪಾನ್‌ವಾಲಾ!
    on April 27, 2024 at 5:30 am

    ಟೀ ಮಾರಿ ಶ್ರೀಮಂತರಾದೋರ ಬಗ್ಗೆ ಕೇಳಿರ್ತೀರಿ, ಪಾನಿಪೂರಿ ಮಾರಿ ಮಹಡಿ ಮನೆ ಕಟ್ಟಿಸಿದೋರನ್ನ ನೋಡಿರ್ತೀರಿ.. ಬೀಡಾ ಮಾರಿ ಬಂಗಾರದ ಮನುಷ್ಯ ಆದೋರನ್ನು ನೋಡಿದೀರಾ? ಇಲ್ಲಿದ್ದಾರೆ ನೋಡಿ ಫೂಲ್ ಚಂದ್.  ಪುಟ್ಟ ಬೀಡಾ ಶಾಪ್ ಇಟ್ಟುಕೊಂಡು, ಅಂಗಡಿಯಷ್ಟಗಲಕ್ಕೇ ಕಾಲು ಮಡಚಿ ಕೂತು ಬೀಡಾ ಕಟ್ಟಿಕೊಡ್ತಾ ಇದ್ರೆ, ಅಂಗಡಿಗೆ ಬರೋರ ಕಣ್ಣೆಲ್ಲ ಅವರ ಕತ್ತು, ಕೈ, ಕಿವಿ ಮೇಲೆ ಓಡಾಡುತ್ತಿರುತ್ತದೆ. ಏಕೆಂದರೆ ಅಂಗೈಯಗಲದ ಬಂಗಾರದ ಸರ, ಮುಷ್ಠಿ ಗಾತ್ರದ ಕಿವಿಯೋಲೆ, ದಪ್ಪನೆಯ ಕಡಗ ಎಲ್ಲವೂ ಈ ದೊಡ್ಡ ಆಳಿನ ದೊಡ್ಡ ಯಶಸ್ಸಿನ ಕತೆ ಹೇಳುತ್ತಿರುತ್ತವೆ. ಅದರೊಂದಿಗೆ ಈ ವ್ಯಕ್ತಿಯ ತಲೆಯ ಮೇಲಿನ ಜುಟ್ಟು, ಊರಗಲ ಮೀಸೆ ಕೂಡಾ ಬಂದವರನ್ನು ಆಕರ್ಷಿಸುತ್ತವೆ.  ರಾಜಸ್ಥಾನದ ಬಿಕಾನೇರ್‌ನ ಬೀದಿಯಲ್ಲಿರುವ ಸತ್ತಾ ಬಜಾರ್‌ನ ಹೃದಯಭಾಗದಲ್ಲಿ, ಮುಲ್ಸಾ ಫುಲ್ಸಾ ಪಾನ್ ಅಂಗಡಿಯಲ್ಲಿ ಈ ವಿಜಯೋತ್ಸವದ ಗಮನಾರ್ಹ ಕಥೆ ತೆರೆದುಕೊಳ್ಳುತ್ತದೆ. ತನ್ನ ಯಶಸ್ಸನ್ನು ಹೇರಿಕೊಂಡ ಬಂಗಾರದ ಮೂಲಕ ಸ್ಥಳೀಯರು ಮತ್ತು ಪ್ರವಾಸಿಗರೇ ಸಾರುತ್ತಾ ಅಲ್ಲಿ ಕುಳಿತಿರುತ್ತಾರೆ ಫೂಲ್‌ಚಂದ್.  ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್‌ಗಳು ಪತ್ತೆ!   2 ಕೋಟಿ ರೂಪಾಯಿ ಮೌಲ್ಯದ ಅತಿರಂಜಿತ ಚಿನ್ನಾಭರಣದಲ್ಲಿ ಅಲಂಕೃತಗೊಂಡ ಫೂಲ್‌ಚಂದ್, ಮಾರುಕಟ್ಟೆಯ ಗದ್ದಲದ ನಡುವೆ ಎದ್ದು ಕಾಣುತ್ತಾರೆ. ಹಲವಾರು ನೆಕ್ಲೇಸ್‌ಗಳು, ಬಳೆಗಳು ಮತ್ತು ಕಿವಿಯೋಲೆಗಳಿಂದ ಅಲಂಕರಿಸಲ್ಪಟ್ಟ ಇವರು, ತಮ್ಮ ಹೆಸರಾಂತ ಪಾನ್ ಅನ್ನು ಕೌಶಲ್ಯದಿಂದ ತಯಾರಿಸಿ ಮಾರಾಟ ಮಾಡುತ್ತಾರೆ.  2 ಕೆಜಿಗೂ ಅಧಿಕ ಚಿನ್ನ ಎರಡು ಕಿಲೋಗ್ರಾಂಗೂ ಹೆಚ್ಚು ಚಿನ್ನಾಭರಣಗಳನ್ನು ಧರಿಸಿರುವುದಾಗಿ ಅವರೇ ಹೇಳಿದ್ದಾರೆ. ಆ ಎಲ್ಲಾ ಆಭರಣಗಳಿದ್ದರೂ ಸಹ, ಅವರು ತಮ್ಮ ಅಂಗಡಿಯನ್ನು ತೆರೆದು ಜನರಿಗೆ ಪಾನ್ ಮಾಡಿಕೊಡುತ್ತಾರೆ. ಅವರ ಅಂಗಡಿಯಲ್ಲಿ ಯಾವಾಗಲೂ ಜನಸಂದಣಿ ಇರುತ್ತದೆ. ಡಾ ರಾಜ್‌ ನನಗೆ ಜಡೆ ಹಾಕಿಕೊಟ್ಟಿದ್ದರು, ಹುಬ್ಬಿನ ಗೆರೆ ತೀಡಿದ್ದರು;ಹಿಂಗಂದ್ರು ನಟಿ ಜಯಮಾಲಾ!   ಅವರು ಪಾನ್ ಮಾರಾಟಗಾರರ ಕುಟುಂಬದಿಂದ ಬಂದವರು ಮತ್ತು ಅವರ ತಂದೆ ಮತ್ತು ಚಿಕ್ಕಪ್ಪನಿಂದ 93 ವರ್ಷ ವಯಸ್ಸಿನ ಪಾನ್ ಅಂಗಡಿಯನ್ನು ವಹಿಸಿಕೊಂಡರು. ಅಂಗಡಿಯನ್ನು ಮೂಲಚಂದ್ ಮತ್ತು ಫೂಲ್‌ಚಂದ್ ಎಂಬ ಸಹೋದರರು ನಡೆಸುತ್ತಿದ್ದರು, ಆದರೆ ಈಗ ಫೂಲ್‌ಚಂದ್ ಮತ್ತು ಮೂಲಚಂದ್ ಅವರ ಮಗ ಅದನ್ನು ನಡೆಸುತ್ತಿದ್ದಾರೆ. ವೈವಿಧ್ಯಮಯ ಪಾನ್‌ಗಳಿಗೆ ಹೆಸರುವಾಸಿಯಾದ ಈ ಅಂಗಡಿಯು ದೂರದ ಗ್ರಾಹಕರನ್ನು ಆಕರ್ಷಿಸುತ್ತದೆ. ಪಾನ್ ಬೆಲೆ ಹದಿನೈದರಿಂದ ಇಪ್ಪತ್ತು ರೂಪಾಯಿಗಳವರೆಗೆ ಇರುತ್ತದೆ, ಇದು ಕೈಗೆಟುಕುವಂತೆ ಮಾಡುತ್ತದೆ. ಆದಾಗ್ಯೂ, ನಿಜವಾಗಿಯೂ ಅವರನ್ನು ಎದ್ದು ಕಾಣುವಂತೆ ಮಾಡುವುದು ಆಭರಣಗಳ ಮೇಲಿನ ಪ್ರೀತಿ.

  • Lok Sabha elections 2024: 14 ಲೋಕಸಭಾ ಕ್ಷೇತ್ರದಲ್ಲಿನ ಮತದಾನ ಅಂತ್ಯ, ಮತಯಂತ್ರಗಳಲ್ಲಿ 247 ಅಭ್ಯರ್ಥಿಗಳ ಭವಿಷ್ಯ ಭದ್ರ!
    on April 27, 2024 at 5:29 am

    ಲೋಕಸಭಾ ಚುನಾವಣೆ 2024 (Lok Sabha Elections 2024) ಹಿನ್ನೆಲೆ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನ(Voting) ಅಂತ್ಯವಾಗಿದ್ದು, 247 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಈ ಮೂಲಕ ಮೊದಲ ಹಂತದ ಕರ್ನಾಟಕ(Karnataka) ಮತಯುದ್ಧಕ್ಕೆ ತೆರೆ ಎಳೆಯಲಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ 14 ಕ್ಷೇತ್ರಗಳಲ್ಲೂ ಸಹ ಶಾಂತಿಯುತವಾಗಿ ಮತದಾನ ನಡೆದಿದೆ. ಹಾಗೆಯೇ ರಾಜ್ಯದಲ್ಲಿ ಒಟ್ಟು ಶೇಕಡಾ 69 ರಷ್ಟು ಮತದಾನ ನಡೆದಿದ್ದು, ಸ್ಟ್ರಾಂಗ್ ರೂಮ್‌ಗಳಲ್ಲಿ ಮತದಾರನ ನಿರ್ಧಾರ ಭದ್ರವಾಗಿದೆ. ಮೊದಲ ಹಂತದ ಮತದಾನದ ಬಳಿಕ ಅಭ್ಯರ್ಥಿಗಳು ನಿರಾಳರಾಗಿದ್ದು, ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸೋಲು-ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ. ಅಲ್ಲದೆ ಬೂತ್ ಏಜೆಂಟ್‌ಗಳ ಮೂಲಕ ಮತದಾನದ ಮಾಹಿತಿ ಸಂಗ್ರಹಣೆ ಸಹ ಮಾಡಲಾಗುತ್ತಿದೆ. ಹಾಗೆಯೇ  14 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆಯವರೆಗೆ ಶೇಕಡಾ 69ರಷ್ಟು ಮತದಾನ ಆಗಿದ್ದು, 201 9ರಲ್ಲಿ 14 ಲೋಕಸಭಾ ಕ್ಷೇತ್ರದಲ್ಲಿ ಶೇ.70.4ರಷ್ಟು ಮತದಾನ ಆಗಿತ್ತು. ಮೇ7ಕ್ಕೆ 2ನೇ ಹಂತದ ಮತದಾನ ನಡೆಯಲಿದ್ದು, ಜೂನ್ 4 ಕ್ಕೆ ಫಲಿತಾಂಶ ಹೊರಬೀಳಲಿದೆ. ಇದನ್ನೂ ವೀಕ್ಷಿಸಿ:  Narendra Modi: ಕರುನಾಡಲ್ಲಿ 2ನೇ ಹಂತದಲ್ಲಿ ಮೋದಿ ಕ್ಯಾಂಪೇನ್ ಕಿಕ್: ಇಂದು ಕುಂದಾನಗರಿಗೆ ಪ್ರಧಾನಿ ಮೋದಿ ಗ್ರ್ಯಾಂಡ್ ಎಂಟ್ರಿ

  • IPL 2024 ರಾಜಸ್ಥಾನ ರಾಯಲ್ಸ್ ಸವಾಲಿಗೆ ಲಖನೌ ಸೂಪರ್ ಜೈಂಟ್ಸ್
    on April 27, 2024 at 5:27 am

    ಲಖನೌ(ಏ.27): ಈ ಆವೃತ್ತಿ ಐಪಿಎಲ್‌ನ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ರಾಜಸ್ಥಾನ ಪ್ಲೇ-ಆಫ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದು, ಶನಿವಾರ ಲಖನೌ ವಿರುದ್ದ ಸೆಣಸಾಡಲಿದೆ. ಇಂದು ನಡೆಯಲಿರುವ ಪಂದ್ಯದಲ್ಲಿ ಲಖನೌ ಎದುರು ರಾಜಸ್ಥಾನ ರಾಯಲ್ಸ್ ತಂಡವು ಗೆಲುವು ಸಾಧಿಸಿದರೆ ಬಹುತೇಕ ಮೊದಲ ತಂಡವಾಗಿ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ. ರಾಜಸ್ಥಾನ ರಾಯಲ್ಸ್ ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಗೆದ್ದು ಅಗ್ರಸ್ಥಾನದಲ್ಲಿದೆ. ಒಂದಿಬ್ಬರನ್ನು ನೆಚ್ಚಿಕೊಳ್ಳದೆ ಸಂಘಟಿತ ಪ್ರದರ್ಶನ ತೋರುತ್ತಿರುವುದು ತಂಡದ ಪ್ಲಸ್ ಪಾಯಿಂಟ್. ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್, ನಾಯಕ ಸಂಜು ಸ್ಯಾಮ್ಸನ್ ಅಬ್ಬರಿಸುತ್ತಿದ್ದು, ವೇಗಿಗಳಾದ ಸಂದೀಪ್ ಶರ್ಮಾ, ಟ್ರೆಂಟ್ ಬೌಲ್ಟ್, ಆವೇಶ್ ಖಾನ್ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಲ್ ಎದುರಾಳಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದ್ದಾರೆ.  IPL 2024: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ನಿರ್ಣಾಯಕ ಫೈಟ್..! ಇನ್ನೊಂದೆಡೆ ಲಖನೌ ಸೂಪರ್ ಜೈಂಟ್ಸ್ ಕೂಡಾ ಆಲ್ರೌಂಡ್ ಆಟದಿಂದ ಗಮನ ಸೆಳೆಯುತ್ತಿದ್ದು, ಆಡಿರುವ 8ರಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ರಾಜಸ್ಥಾನ ವಿರುದ್ಧ ಸೋಲುವ ಮೂಲಕ ಟೂರ್ನಿಗೆ ಕಾಲಿರಿಸಿದ್ದ ತಂಡ ಈಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಐಪಿಎಲ್ ಇತಿಹಾಸದಲ್ಲಿ ಲಖನೌ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಒಟ್ಟು 4 ಬಾರಿ ಮುಖಾಮುಖಿಯಾಗಿದ್ದು ಈ ಪೈಕಿ ರಾಜಸ್ಥಾನ ರಾಯಲ್ಸ್ ತಂಡವು 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇನ್ನೊಂದೆಡೆ ಲಖನೌ ತಂಡವು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಗೆಲುವಿನ ರುಚಿ ಕಂಡಿದೆ. ಈ ನಾಲ್ಕು ಪಂದ್ಯದಲ್ಲೂ ಮೊದಲು ಬ್ಯಾಟ್ ಮಾಡಿದ ತಂಡವೇ ಗೆಲುವಿನ ನಗೆ ಬೀರಿದೆ. ಕೆಕೆಆರ್ ಎದುರು 262 ರನ್‌ ಚೇಸ್‌: ಪಂಜಾಬ್ ಟಿ20 ವಿಶ್ವದಾಖಲೆ! ಸಂಭವನೀಯ ಆಟಗಾರರ ಪಟ್ಟಿ ರಾಜಸ್ಥಾನ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ), ರಿಯಾನ್ ಪರಾಗ್, ಧೃವ್ ಜುರೆಲ್, ಶಿಮ್ರೊನ್ ಹೆಟ್ಮೇಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಸಂದೀಪ್ ಶರ್ಮಾ, ಯುಜುವೇಂದ್ರ ಚಹಲ್. ಲಖನೌ ಸೂಪರ್ ಜೈಂಟ್ಸ್: ಕ್ವಿಂಟನ್ ಡಿ ಕಾಕ್, ಕೆ ಎಲ್ ರಾಹುಲ್(ನಾಯಕ), ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ಮ್ಯಾಟ್ ಹೆನ್ರಿ, ರವಿ ಬಿಷ್ಣೋಯಿ, ಮೊಹ್ಸಿನ್ ಖಾನ್, ಯಶ್ ಠಾಕೂರ್. ಪಂದ್ಯ ಆರಂಭ: ಸಂಜೆ 7.30ಕ್ಕೆ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌, ಜಿಯೋ ಸಿನಿಮಾ   

  • ಮತದಾರರಿಗೆ ಹಣ, ಗಿಫ್ಟ್ ಕೊಡುವವರೇ ರಣಹೇಡಿಗಳು: ಡಿಕೆಶಿ ವಿರುದ್ಧ ಗುಡುಗಿದ ಎಚ್‌ಡಿಕೆ
    on April 27, 2024 at 5:22 am

    ರಾಮನಗರ(ಏ.27):  ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ QR ಕೋಡ್ ಗಿಫ್ಟ್ ಕೂಪನ್, ಹಣ ಹಂಚಿಕೆ ಮಾಡುವವರು ರಣಹೇಡಿಗಳು ಎಂದು ತಮ್ಮನ್ನು ರಣಹೇಡಿ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಬಿಡದಿ ಸಮೀಪದ ಕೇತಿಗಾನಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಣಹೇಡಿ ನಾನಲ್ಲ, ರಣಹೇಡಿಗಳು ಅವರು, ಕುತಂತ್ರದ ರಾಜಕಾರಣಿಗಳು ಅವರು. ಯಾರು ರಣಹೇಡಿ ಎಂದು ಮುಂದೆ ಚರ್ಚೆ ಮಾಡೋಣ. ರಣಹೇಡಿ ಸಂಸ್ಕೃತಿ ಡಿ.ಕೆ.ಶಿವಕುಮಾರ್ ಅವರದ್ದು. ನಾವು ನೇರವಾಗಿಯೇ ಚುನಾವಣೆ ಮಾಡುತ್ತಿದ್ದೇವೆ ಎಂದು ಗುಡುಗಿದರು. ರಾತ್ರೋರಾತ್ರಿ ಹೋಗಿ ಕಳ್ಳಕಳ್ಳವಾಗಿ ಜನರಿಗೆ ಕ್ಯೂ ಆರ್ ಕೋಡ್ ಇರುವ ಗಿಫ್ಟ್ ಕೂಪನ್ ಗಳನ್ನು ಹಂಚಿಕೆ ಮಾಡಿದ ವ್ಯಕ್ತಿ ರಣಹೇಡಿತನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕುಟುಕಿದರು. ಸಿಎಂ ಆಗುವ ಆಸೆ ಮತ್ತೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ್..! ಆಯೋಗಕ್ಕೆ ದೂರು ಕೊಟ್ಟರೆ ಉಪಯೋಗ ಇಲ್ಲ: ಗಿಫ್ಟ್ ಕೂಪನ್ ಬಗ್ಗೆ ಚುನಾವಣಾ ಆಯೋಗಕ್ಕೆ ಈಗ ದೂರು ಕೊಟ್ಟರೂ ಏನು ಪ್ರಯೋಜನ ಇಲ್ಲ. ಹಿಂದೆ ಹಲವು ಬಾರಿ ದೂರು ಕೊಟ್ಟರೂ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ದೂರು ಕೊಟ್ಟರೆ ಏನು ಉಪಯೋಗ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮುಕ್ತವಾಗಿ ಗಿಫ್ಟ್, ಹಣ ಹಂಚುವ ವ್ಯವಸ್ಥೆಯನ್ನೇ ತನ್ನಿ: ನಾನು ಚುನಾವಣಾ ಆಯೋಗಕ್ಕೆ ಕೇಳುತ್ತೇನೆ. ಈ ರೀತಿ ಚುನಾವಣೆ ಮಾಡುವ ಬದಲು ನೇರವಾಗಿ, ಮುಕ್ತವಾಗಿ ಗಿಫ್ಟ್, ಹಣ ಹಂಚುವ ವ್ಯವಸ್ಥೆಯನ್ನೇ ತನ್ನಿ. ಅವರವರ ಶಕ್ತಿ ಅನುಸಾರ ಹಣ ಹಂಚಿ ವೋಟು ಪಡೆಯುವ ವ್ಯವಸ್ಥೆ ಜಾರಿಗೆ ತನ್ನಿ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಈ ರೀತಿಯ ವ್ಯವಸ್ಥೆ ಬಂದರೆ ಕಾಂಗ್ರೆಸ್‌ನವರಿಗೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಅವರು ವ್ಯಂಗ್ಯವಾಡಿದರು. ಇದನ್ನು ಚುನಾವಣೆ ಎಂದು ಕರೆಯಬೇಕಾ? ಇದನ್ನು ಚುನಾವಣಾ ಅಂತ ಪರಿಗಣಿಸಲು ಸಾಧ್ಯವಾ? ಪ್ರಜಾಪ್ರಭುತ್ವದ ಹಬ್ಬ ಎಂದು ಇದನ್ನು ಕರೆಯಲು ಆಗುತ್ತದೆಯೇ? ದುಡ್ಡು ಇರುವವರಿಗೆ ಲೂಟಿ ಮಾಡುವವರಿಗೆ ಇದು ಹಬ್ಬವೇ ಹೊರತು ಜನಸಾಮಾನ್ಯರಿಗೆ ಅಲ್ಲ. ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳುವುದು ಒಳ್ಳೆಯದು. ಚುನಾವಣಾ ಆಯೋಗ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಳ್ಳೋದು ಉತ್ತಮ ಎಂದು ಮಾಜಿ ಮುಖ್ಯಮಂತ್ರಿ ಅವರು ವಾಗ್ದಾಳಿ ನಡೆಸಿದರು. ಈ ರೀತಿ ಅಡ್ಡದಾರಿಯಲ್ಲಿ, ವಾಮಮಾರ್ಗದಲ್ಲಿ ಮತ ಪಡೆಯುವ ಮಹಾನುಭಾವರು ಜನರಿಗೆ ಬುದ್ದಿ ಹೇಳಿದ್ದೇ ಹೇಳಿದ್ದು. ಈ ಮಹಾನುಭಾವ ಇಲ್ಲಿ ಇದ್ದಾರಲ್ಲ, ದೇಶದ ಬಗ್ಗೆ ಚರ್ಚೆ ಮಾಡ್ತಾರಲ್ಲ ಈ ಇಬ್ಬರು ಮಹಾನುಭಾವರು.. ಇವರ ಬಗ್ಗೆ ಚುನಾವಣಾ ಆಯೋಗ ಏನು ಮಾಡುತ್ತಿದೆ? ಎಂದು ಡಿಕೆಶಿ ಸಹೋದರರ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಹರಿಹಾಯ್ದರು. ಲೋಕಸಭಾ ಚುನಾವಣೆ 2024: ಕುಟುಂಬದವರಿಗಾಗಿ ಗೌಡರಿಂದ ನಾಟಕದ ಕಣ್ಣೀರು, ಡಿ.ಕೆ.ಶಿವಕುಮಾರ್ ಜ್ಯೋತಿಷಿ ಅಣತಿಯಂತೆ ಹಣ, ಮಲೆಮಹದೇಶ್ವರ ದೇವರ ಲಾಡು!: ಜೋತಿಷಿಯೊಬ್ಬರು ಹೇಳಿದಂತೆ ಇವರು ಕನಕಪುರದಲ್ಲಿ ಹಣ, ಗಿಫ್ಟ್ ಕೂಪನ್ ಹಂಚಿದ್ದಾರೆ. ಅವರು ಹೇಳಿದರು ಎಂದು 505 ರೂ, ಹಣ, ಮಲೆಮಹದೇಶ್ವರ ದೇವಾಲಯದ ಲಾಡು ಮತ್ತು ಈ ಗ್ಯಾರಂಟಿ ಕಾರ್ಡ್ ಗಳನ್ನ ರಾತ್ರಿಯೆಲ್ಲಾ ಹಂಚಿದ್ದಾರೆ. ಕಾರ್ಡು ಹಂಚಿಕೆ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ನಮ್ಮ ಎರಡೂ ಪಕ್ಷಗಳ ಕಾರ್ಯಕರ್ತರು ತಡೆದಿದ್ದಾರೆ. ಜಿಲ್ಲಾಧಿಕಾರಿ ಮತ್ತು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮುಕ್ತ, ನ್ಯಾಯ ಸಮ್ಮತ ಚುನಾವಣೆ ನಡೆಯುತ್ತಿಲ್ಲ. ಸೋಲಿನ ಭೀತಿಯಿಂದ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಅವರು ಆರೋಪಿಸಿದರು. ಅಕ್ರಮ ನಡೆಸಿ ಚುನಾವಣೆ ಗೆಲ್ಲುತ್ತೇವೆ ಎಂದು ಇವರು ಹೊರಟಿದ್ದಾರೆ. ಜನರು ಇವರ ಕುತಂತ್ರಕ್ಕೆ ಬಲಿಯಾಗದೆ ನಿರ್ಭೀತಿಯಿಂದ ಮಾಡಿದ್ದಾರೆ. ಇವರ ಆಟ ಎಲ್ಲಾ ಕಡೆ ನಡೆದಿಲ್ಲ ಎಂದರು. ಸಖೀ ಮತಗಟ್ಟೆಯಲ್ಲಿ ಎಚ್ಡಿ ಕೆ ಮತದಾನ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ಕುಟುಂಬದ ಎಲ್ಲಾ ಸದಸ್ಯರ ಜತೆ ಆಗಮಿಸಿ ಬಿಡದಿ ಸಮೀಪದ ಕೇತಿಗಾನಹಳ್ಳಿ ಗ್ರಾಮದ ಸಖೀ ಮತಗಟ್ಟೆ (ಪಿಂಕ್ ಬೂತ್) ಯಲ್ಲಿ ಮತದಾನ ಮಾಡಿದ್ದರು. ತಮ್ಮ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಅವರೊಂದಿಗೆ ಮತಗಟ್ಟೆಗೆ ಬಂದು ಮತದಾನ ಮಾಡಿದರು.

  • Narendra Modi: ಕರುನಾಡಲ್ಲಿ 2ನೇ ಹಂತದಲ್ಲಿ ಮೋದಿ ಕ್ಯಾಂಪೇನ್ ಕಿಕ್: ಇಂದು ಕುಂದಾನಗರಿಗೆ ಪ್ರಧಾನಿ ಮೋದಿ ಗ್ರ್ಯಾಂಡ್ ಎಂಟ್ರಿ
    on April 27, 2024 at 5:21 am

    ಇಂದಿನಿಂದ ರಾಜ್ಯದಲ್ಲಿ ಎರಡು ದಿನ ಪ್ರಧಾನಿ ನರೇಂದ್ರ ಮೋದಿ(Narendra Modi) ಪ್ರಚಾರ ಮಾಡಲಿದ್ದಾರೆ. ಇಂದು ಸಂಜೆ ಬೆಳಗಾವಿಗೆ(Belagavi) ಆಗಮಿಸಲಿರುವ ಪ್ರಧಾನಿ ಮೋದಿ, ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ಬೆಳಗಾವಿ, ಚಿಕ್ಕೋಡಿ, ಕ್ಷೇತ್ರಗಳನ್ನು ಒಳಗೊಂಡು ಸಮಾವೇಶ ನಡೆಸಲಿದ್ದಾರೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್(Jagadish Shettar) ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬೆಳಗಾವಿ 18 ವಿಧಾನಸಭೆ ಕ್ಷೇತ್ರ ಒಳಗೊಂಡಿರುವ ದೊಡ್ಡ ಲೋಕಸಭಾ ಕ್ಷೇತ್ರವಾಗಿದೆ. ಜಗದೀಶ್ ಶೆಟ್ಟರ್‌ ವಿರುದ್ಧವಾಗಿ ಕಾಂಗ್ರೆಸ್‌ನಿಂದ(Congress) ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಸ್ಪರ್ಧೆ ಮಾಡಿದ್ದಾರೆ. ಭದ್ರತೆ ದೃಷ್ಟಿಯಿಂದ ಡ್ರೋನ್ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ಡ್ರೋನ್ ಹಾರಾಟ ನಿಷೇಧಿಸಿ  ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ. 27-4-24 ರ ಮುಂಜಾನೆ 6 ಗಂಟೆಯಿಂದ 28-4-24 ರ ಸಂಜೆ 6 ಗಂಟೆಯವರಗೆ ನಿಷೇಧ ಹೇರಲಾಗಿದೆ. ನೋ ಪ್ಲೈ ಜೋನ್ ಎಂದು ಘೋಷಿಸಿ ಡ್ರೋನ್ ಹಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ಇದನ್ನೂ ವೀಕ್ಷಿಸಿ:  Sandalwood: ಮತ ಚಲಾಯಿಸಿದ ಸ್ಯಾಂಡಲ್‌ವುಡ್ ಸೆಲೆಬ್ರೆಟೀಸ್: ಸದಾಶಿವನಗರದಲ್ಲಿ ಡಾ.ರಾಜ್ ಫ್ಯಾಮಿಲಿಯಿಂದ ಮತದಾನ

  • ಮೃತ ಪತಿಯ ಆಸ್ತಿಯ ಮೇಲೆ ವಿಧವೆಯಾಗಿರುವ ಪತ್ನಿಗೆ ಸಂಪೂರ್ಣ ಹಕ್ಕು ಇಲ್ಲ; ಹೈಕೋರ್ಟ್
    on April 27, 2024 at 5:16 am

    ನವದೆಹಲಿ: ಮೃತ ಪತಿಯ ಆಸ್ತಿಯ ಮೇಲೆ ವಿಧವೆಯಾಗಿರುವ ಹಿಂದೂ ಪತ್ನಿಗೆ ಸಂಪೂರ್ಣ ಹಕ್ಕು ಇಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಯಾವುದೇ ಆದಾಯವಿಲ್ಲದ ಹಿಂದೂ ಮಹಿಳೆಯು ತನ್ನ ಮೃತ ಪತಿಯ ಸ್ವಯಾರ್ಜಿತ ಆಸ್ತಿಯನ್ನು ತನ್ನ ಜೀವಿತಾವಧಿಯಲ್ಲಿ ಅನುಭವಿಸುವ ಹಕ್ಕನ್ನು ಹೊಂದಿರುತ್ತಾಳೆ. ಆದರೆ ಮಕ್ಕಳು ಸೇರಿದಂತೆ ಇತರ ಕಾನೂನು ಉತ್ತರಾಧಿಕಾರಿಗಳಿಂದ ಸ್ಪರ್ಧಾತ್ಮಕ ಹಕ್ಕುಗಳಿದ್ದಾಗ ಆಸ್ತಿಯನ್ನು ಮಾರಾಟ ಮಾಡಲು ಅಥವಾ ವರ್ಗಾಯಿಸಲು ಆಕೆಗೆ ಸಂಪೂರ್ಣ ಹಕ್ಕು ಇರುವುದಿಲ್ಲ ಎಂದು ನ್ಯಾಯಾಲಯವು ಇತ್ತೀಚಿನ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಪತ್ನಿಗಿಂತ ಮುಂಚೆಯೇ ಮರಣ ಹೊಂದಿದ ಪತಿಯು ತನ್ನ ಹೆಂಡತಿಗೆ ಆಕೆಯ ಮರಣದ ತನಕ ಆಸ್ತಿಯನ್ನು ಅನುಭವಿಸುವ ಹಕ್ಕನ್ನು ನೀಡುವಂತೆ ವಿವರವಾದ ವಿಲ್ ಮಾಡಿದ ಮತ್ತು ನಂತರ ಆಸ್ತಿಯು ಹೇಗೆ ಆನುವಂಶಿಕವಾಗಿ ಪಡೆಯುತ್ತದೆ ಎಂಬುದನ್ನು ನಿರ್ದಿಷ್ಟಪಡಿಸಿದ ಪ್ರಕರಣವನ್ನು ನ್ಯಾಯಾಲಯವು ಉದ್ದೇಶಿಸಿತ್ತು. ವಿಧವೆ ದೇಗುಲ ಪ್ರವೇಶಕ್ಕೆ ಮದ್ರಾಸ್‌ ಹೈಕೋರ್ಟ್‌ ಅಸ್ತು: ನಿರ್ಬಂಧ ಹೇರಿದ್ದ ದೇಗುಲ ಆಡಳಿತಕ್ಕೆ ಕ್ಲಾಸು ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್ ಮಾತನಾಡಿ, ‘ಸ್ವಂತ ಆದಾಯ ಇಲ್ಲದಿರುವ ಹಿಂದೂ ಮಹಿಳೆಯರು ಪತಿಯ ಮರಣದ ನಂತರ ಅವರ ಪತಿಯಿಂದ ಆಸ್ತಿಯನ್ನು ಪಡೆಯುವುದು ಜೀವಿತಾವಧಿಯಲ್ಲಿ ಅವರ ಆರ್ಥಿಕ ಭದ್ರತೆಗೆ ಅತ್ಯಗತ್ಯ. ಗಂಡನ ಮರಣದ ನಂತರ ಮಹಿಳೆ ತನ್ನ ಮಕ್ಕಳ ಮೇಲೆ ಅವಲಂಬಿತವಾಗಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅಂತಹ ಭದ್ರತೆಯು ನಿರ್ಣಾಯಕವಾಗಿದೆ. ಅಂತಹ ಸಂದರ್ಭಗಳಲ್ಲಿ, ಹೆಂಡತಿ ತನ್ನ ಜೀವಿತಾವಧಿಯಲ್ಲಿ ಆಸ್ತಿಯನ್ನು ಆನಂದಿಸಲು ಸಂಪೂರ್ಣ ಹಕ್ಕುಗಳನ್ನು ಹೊಂದಿದ್ದಾಳೆ ಮತ್ತು ಅದರಿಂದ ಬರುವ ಆದಾಯವನ್ನು ಸಹ ಆನಂದಿಸಬಹುದು. ಆದರೆ, ಇದು ತನ್ನ ಗಂಡನ ಮರಣದ ನಂತರ ಆಸ್ತಿಯ ಮೇಲೆ ಹೆಂಡತಿಗೆ ಸಂಪೂರ್ಣ ಹಕ್ಕನ್ನು ನೀಡುವುದಿಲ್ಲ’ ಎಂದು ತಿಳಿಸಿದರು. ಆಸ್ತಿ ವಿವಾದದ ಕುರಿತು ಮಾತನಾಡಿದ ನ್ಯಾಯಾಲಯವು ಮರಣದ ಮೊದಲು ಪತಿಯಿಂದ ವಿಲ್ ಇದ್ದುದರಿಂದ, ಹೆಂಡತಿ 23 ವರ್ಷಗಳ ಕಾಲ ಅಲ್ಲಿ ವಾಸಿಸುತ್ತಿದ್ದರಿಂದ ಅವನ ಆಸ್ತಿಯ ಸಂಪೂರ್ಣ ಮಾಲೀಕಳಾಗಿದ್ದಾಳೆ ಎಂದು ತೀರ್ಪು ನೀಡಿತು. ಈ ತೀರ್ಪನ್ನು ಮೃತ ವ್ಯಕ್ತಿಯ ಆರು ಮಕ್ಕಳು ಮತ್ತು ಮೊಮ್ಮಗಳು ಆಸ್ತಿಯ ಮೇಲೆ ಬಹು ಹಕ್ಕುಗಳ ಮೂಲಕ ಪ್ರಶ್ನಿಸಿದರು. ಒಂಟಿಯಾಗಿರುವ ವಿಧುರ, ಅವಿವಾಹಿತ ಗಂಡಸರಿಗೆ ಮಾಸಿಕ 2750 ರು. ಭತ್ಯೆ ‘ಹೆಂಡತಿಗೆ ಆಸ್ತಿಯನ್ನು ಮಾರಾಟ ಮಾಡಲು, ಪರಕೀಯಗೊಳಿಸಲು ಅಥವಾ ವರ್ಗಾಯಿಸಲು ಯಾವುದೇ ಹಕ್ಕಿಲ್ಲ ಎಂದು ವಿಲ್ ಸ್ಪಷ್ಟವಾಗಿ ಹೇಳುತ್ತದೆ. ಆದ್ದರಿಂದ, ತನ್ನ ಗಂಡನ ಮರಣದ ನಂತರ ಅವಳು ಆಸ್ತಿಯ ಸಂಪೂರ್ಣ ಮಾಲೀಕಳಾಗಿದ್ದಾಳೆ ಮತ್ತು ಅದನ್ನು ಮಾರಾಟ ಮಾಡಬಹುದೆಂದು ಹೇಳಿಕೊಳ್ಳುವುದು ವಿಲ್ ಮತ್ತು ಮೃತನ ಉದ್ದೇಶದ ಸ್ಪಷ್ಟ ಉದ್ದೇಶವನ್ನು ವಿರೋಧಿಸುತ್ತದೆ’ ಎಂದು ನ್ಯಾಯಾಲಯವು ಗಮನಿಸಿತು. ಪತಿಯ ಮರಣದ ಮೊದಲು ಪತ್ನಿ ಆಸ್ತಿಯಲ್ಲಿ ಯಾವುದೇ ಹಕ್ಕುಗಳನ್ನು ಹೊಂದಿರಲಿಲ್ಲ ಮತ್ತು ಅವುಗಳನ್ನು ವಿಲ್ ಮೂಲಕ ಮಾತ್ರ ಸ್ವಾಧೀನಪಡಿಸಿಕೊಂಡರು ಎಂದು ನ್ಯಾಯಾಲಯವು ಸ್ಪಷ್ಟಪಡಿಸಿತು.

  • ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯ: ಗೃಹ ಸಚಿವ ಪರಮೇಶ್ವರ್
    on April 27, 2024 at 5:16 am

    ತುಮಕೂರು (ಏ.27): ದೇಶದ ಭವಿಷ್ಯನ್ನು ನಿರ್ಧರಿಸುವ ಚುನಾವಣೆ ಇದಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಲಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು. ನಗರದ ಹೊರವಲಯದ ಗೊಲ್ಲಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ತಮ್ಮ ಪತ್ನಿ ಕನ್ನಿಕಾ ಪರಮೇಶ್ವರ್ ಅವರೊಂದಿಗೆ ತೆರಳಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ. ಈ ಮೂಲಕ ಕೇಂದ್ರದಲ್ಲೂ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಅಚಲ ವಿಶ್ವಾಸ ಇದೆ ಎಂದರು. ತುಮಕೂರು ಲೋಕಸಭಾ ಕ್ಷೇತ್ರದಲ್ಲೂ ಕೈ ಅಭ್ಯರ್ಥಿ ಮುದ್ದಹನುಮೇಗೌಡರು ಆಯ್ಕೆಯಾಗುವ ವಿಶ್ವಾಸವಿದೆ. ಇಡೀ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದೇನೆ. ಮುದ್ದಹನುಮೇಗೌಡರ ಪರ ಜನರು ಒಲವು ತೋರಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾವು ಕೊಟ್ಟ ಭರವಸೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ಆದ್ದರಿಂದ ಬಡವರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಕೇಂದ್ರದಲ್ಲಿ ಒಳ್ಳೆಯ ಸರ್ಕಾರ ಅಧಿಕಾರಕ್ಕೆ ಬರಬೇಕು. ಯಾವುದೇ ಧರ್ಮ, ಪ್ರಾಂತ್ಯ ಆಧಾರಿತ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿರಬಾರದು. ತಾರತಮ್ಯ ಮಾಡುವುದನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚು ನೋಡಿದ್ದೇನೆ. ಕೇಂದ್ರದಿಂದ ಪ್ರಕೃತಿ ವಿಕೋಪವಾದಾಗ ಪರಿಹಾರ ಬರಲಿಲ್ಲ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಇದನ್ನು ನಾವು ಜನರಿಗೆ ತೋರಿಸುವ ಕೆಲಸ ಮಾಡಿದ್ದೇವೆ. ಮಾಧ್ಯಮಗಳು ಕೂಡ ಅದನ್ನೇ ತೋರಿಸಿವೆ ಎಂದರು. ಗ್ಯಾರಂಟಿ, ಮಹಿಳೆಯರ ಬಗ್ಗೆ ಎಚ್‌ಡಿಕೆ ಲಘು ಮಾತು: ಸಚಿವ ಚಲುವರಾಯಸ್ವಾಮಿ ಇವಿಎಂ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಗೃಹ ಸಚಿವ: ಇವಿಎಂ ಯಂತ್ರಗಳ ಬಗ್ಗೆ ಅನುಮಾನ ಇರುವ ಬಗ್ಗೆ ಬಗ್ಗೆ ಉತ್ತರಿಸಿದ ಅವರು, ಆ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ನಾವು ವೋಟ್ ಹಾಕಿದಾಗ ಎಲ್ಲ ಸರಿಯಾಗಿ ತೋರಿಸಿದೆ. ಆದರೆ ಒಳಗೆ ಏನಾಗುತ್ತದೆ ಎನ್ನುವುದು ಗೊತ್ತಿಲ್ಲ. ಕಾಸರಗೋಡಿನಲ್ಲಿ ಯಾವುದೇ ಬಟನ್ ಒತ್ತದೆ ಒಂದೇ ಪಕ್ಷಕ್ಕೆ ಮತ ಹೋಗುತ್ತದೆ ಎನ್ನುವುದನ್ನು ತೋರಿಸಿಕೊಡಲಾಗಿದೆ. ಇದನ್ನು ನೋಡಿದ ಮೇಲೆ ಹಾಗೆಯೇ ಆಗುತ್ತದೆ ಅಂತ ಆಯ್ತಲ್ಲ ಎಂದು ಇವಿಎಂ ವಿರುದ್ಧ ಅಸಮಾಧಾನ ಹೊರ ಹಾಕಿದರು. ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಕಿಚ್ಚಾವಾಡಿ ಗ್ರಾಮದಲ್ಲಿ ವಾಟರ್ ಮನ್ ಸಾವನ್ನಪ್ಪಿರುವ ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆ. ಮೊದಲು ಪೊಲೀಸರ ಮೇಲೆ ನಂಬಿಕೆ ಇಡಬೇಕು ಎಂದರು.

  • ಪೇಮೆಂಟ್ ಬರಲಿಲ್ಲ, ದಿಂಗಾಲೇಶ್ವರ ಶ್ರೀ ನಾಮಪತ್ರ ವಾಪಸ್: ಶಾಸಕ ಯತ್ನಾಳ
    on April 27, 2024 at 5:04 am

    ಹುಬ್ಬಳ್ಳಿ(ಏ.27):  ಫಕೀರ ದಿಂಗಾಲೇಶ್ವರ ಶ್ರೀಗಳಿಗೆ ಪೇಮೆಂಟ್ ಬಂದಿಲ್ಲ, ಹೀಗಾಗಿ ನಾಮ ಪತ್ರವನ್ನು ವಾಪಾಸ್ ಪಡೆದು ಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು. ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ಹಣ ಪಡೆದಿಲ್ಲ ಎನ್ನುವುದಕ್ಕೆ ಅವರೇ ಸಾಕ್ಷಿ ಹೇಳಬೇಕು. ಅವರು ಹಣ ಪಡೆಯದೇ ಹೋಗಿದ್ದರೆ ನಾಮಪತ್ರ ಏಕೆ ವಾಪಸ್ ಪಡೆಯಬೇಕಿತ್ತು ಎಂದು ಪ್ರಶ್ನಿಸಿದರು. ಹಿರಿಯ ಶ್ರೀಗಳ ಆದೇಶದಂತೆ ಲೋಕಸಭಾ ಚುನಾ‍ವಣಾ ಕಣದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ ತಪ್ಪು ಗ್ರಹಿಕೆಯಾಗಿದೆ:  ಇದೇ ವೇಳೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪರವಾಗಿ ಮಾತನಾಡಿದ ಯತ್ನಾಳ, ಈ ಹಿಂದೆ ಅವರು ಹೈಕಮಾಂಡ್ ನಿರ್ದೇಶನದ ಮೇರೆಗೆ ಒಂದೇ ಮಾತಿಗೆ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದರು. ಈ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಪಕ್ಷವು ಪರಿಗಣಿಸಬೇಕಿತ್ತು. ಆದರೆ, ಹಾಗಾ ಗಲಿಲ್ಲ. ಏನೋ ತಪ್ಪು ಗ್ರಹಿಕೆಯಾಗಿದೆ. ಈ ಚುನಾವಣೆ ಮುಗಿದ ಬಳಿಕ ಎಲ್ಲವೂ ಸರಿಯಾಗಲಿದೆ ಎಂದರು. 

  • ಈ ರಾಶಿಯವರು ಟ್ರೆಂಡ್‌ಸೆಟರ್‌ಗಳು, ಅವರಿಗೆ ಇದೆ ಕ್ರೇಜಿ ಫಾಲೋಯಿಂಗ್
    on April 27, 2024 at 5:00 am

    ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನಾಲ್ಕು ರಾಶಿಚಕ್ರದ ಚಿಹ್ನೆಗಳು ಹೊಸ ಟ್ರೆಂಡ್ ಅನ್ನು ಹೊಂದಿಸುವ ಮನಸ್ಥಿತಿಯನ್ನು ಹೊಂದಿವೆ. ಎಷ್ಟೇ ಬ್ಯುಸಿ ಇದ್ದರೂ ಕೆಲಸದ ಬಗ್ಗೆ ಅಪಾರ ಒಲವು ತೋರುತ್ತಾರೆ. ಮೇಷ ರಾಶಿಯ ಜನರು ತುಂಬಾ ಧೈರ್ಯಶಾಲಿಗಳು ಮತ್ತು ಯಾವಾಗಲೂ ಆತ್ಮವಿಶ್ವಾಸದಿಂದ ಕಾಣಿಸಿಕೊಳ್ಳುತ್ತಾರೆ. ಅವರು ಯಾವಾಗಲೂ ಹೊಸ ಆಲೋಚನೆಗಳನ್ನು ಸ್ವಾಗತಿಸುತ್ತಾರೆ ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಮುಂದೆ ಬರುತ್ತಾರೆ. ಕೆಲಸದಲ್ಲಿ ಇನ್ನೋವೇಶನ್ ಮಾಡುತ್ತಾರೆ. ಸಹೋದ್ಯೋಗಿಗಳು ಹೊಸ ಪರಿಕಲ್ಪನೆಗಳನ್ನು ರಚಿಸಲು ಮತ್ತು ಮುಕ್ತವಾಗಿ ತಮ್ಮ ಯೋಜನೆಗಳನ್ನು ಅನ್ವೇಷಿಸಲು ಸ್ವಾತಂತ್ರ್ಯವನ್ನು ಪಡೆಯುತ್ತಾರೆ.ಕೆಲಸ-ಜೀವನದ ಸಮತೋಲನದ ಸಾಂಪ್ರದಾಯಿಕ ಕಲ್ಪನೆಯನ್ನು ಸವಾಲು ಮಾಡಲು ಹೆದರುವುದಿಲ್ಲ, ಬದಲಿಗೆ ಕೆಲಸ-ಜೀವನದ ಸಮಗ್ರತೆಯನ್ನು ಉತ್ತೇಜಿಸುತ್ತಾರೆ.   ಮಿಥುನ ರಾಶಿಯವರು ಬುದ್ಧಿವಂತರು ಮತ್ತು ಹೊಸ ಆಲೋಚನೆಗಳನ್ನು ಇಷ್ಟಪಡುತ್ತಾರೆ. ತಪ್ಪುಗಳನ್ನು ಮಾಡುವುದು ಮತ್ತು ಅದರಿಂದ ಕಲಿಯುವುದು ಸರಿ ಎಂದು ಅವರು ನಂಬುತ್ತಾರೆ. ಅವರು ತಮ್ಮ ತಂಡದಲ್ಲಿ ಉತ್ಸಾಹವನ್ನು ತುಂಬುತ್ತಾರೆ. ಹೊಸ ಆಲೋಚನೆಗಳನ್ನು ಸ್ವಾಗತಿಸುತ್ತದೆ ಮತ್ತು ಹೊಸ ವಿಷಯಗಳನ್ನು ಪ್ರಯತ್ನಿಸಲು ಸಹೋದ್ಯೋಗಿಗಳನ್ನು ಪ್ರೋತ್ಸಾಹಿಸುತ್ತಾರೆ. ಅವರು ಬಹಳ ಬುದ್ಧಿವಂತ ಮತ್ತು ವಾಗ್ಮಿ ಜನರು. ಒಳ್ಳೆಯ ನಾಯಕರು ಕೂಡ. ಹಿಂದಿನ ವೈಫಲ್ಯಗಳು ಹೇಗೆ ಯಶಸ್ಸಿಗೆ ಕಾರಣವಾಯಿತು ಎಂಬುದನ್ನು ಹಂಚಿಕೊಳ್ಳುವ ಮೂಲಕ ಇತರರಲ್ಲಿ ನಂಬಿಕೆಯನ್ನು ಬೆಳೆಸುತ್ತಾರೆ.   ಧನು ರಾಶಿಯವರು ತುಂಬಾ ಧನಾತ್ಮಕ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅವರು ಯಾವಾಗಲೂ ಹೊಸ ಅವಕಾಶಗಳನ್ನು ಅನ್ವೇಷಿಸಲು ಸಿದ್ಧರಾಗಿದ್ದಾರೆ. ವಿವಿಧ ಕ್ಷೇತ್ರಗಳ ಜನರನ್ನು ಒಟ್ಟುಗೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ. ಆದ್ದರಿಂದ ಅವರು ನಿರಂತರವಾಗಿ ಆವಿಷ್ಕಾರ, ಸ್ಫೂರ್ತಿ ಹೊಂದಿರುತ್ತಾರೆ. ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಿಂದ ಕಛೇರಿಯಲ್ಲಿ ಮಾರ್ಗದರ್ಶನ ಕಾರ್ಯಕ್ರಮಗಳವರೆಗೆ, ಸಹೋದ್ಯೋಗಿಗಳ ನಡುವೆ ತಿಳುವಳಿಕೆ ಮತ್ತು ಸಹಕಾರವನ್ನು ಬೆಳೆಸಲು ಪ್ರಯತ್ನಗಳನ್ನು ಮಾಡಲಾಗುತ್ತದೆ. ಇದು ಸಿಬ್ಬಂದಿಯಲ್ಲಿ ಉತ್ತಮ ತಂಡದ ಮನೋಭಾವವನ್ನು ನಿರ್ಮಿಸುವಲ್ಲಿ ಮುಂದಾಳತ್ವ ವಹಿಸುವ ಅತ್ಯುತ್ತಮ ನಾಯಕರನ್ನಾಗಿ ಮಾಡುತ್ತದೆ. ಕುಂಭ ರಾಶಿಯವರು ಸ್ವಲ್ಪ ವಿಭಿನ್ನವಾಗಿ ಯೋಚಿಸುತ್ತಾರೆ. ಹೊಸ ಆಲೋಚನೆಗಳು ಮತ್ತು ಅನಿರೀಕ್ಷಿತ ಪರಿಹಾರಗಳೊಂದಿಗೆ ಬರುವ ಅಪರೂಪದ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ.ಈ ರಾಶಿಚಕ್ರ ಚಿಹ್ನೆಯ ದೃಷ್ಟಿಯಲ್ಲಿ, ಒಟ್ಟಾಗಿ ಕೆಲಸ ಮಾಡುವ ಉತ್ಸಾಹವನ್ನು ಹೆಚ್ಚಿಸುತ್ತಾ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತಾರೆ. ಈ ಮೂಲಕ ಹೊಸ ಆಲೋಚನೆಗಳು ಹುಟ್ಟುತ್ತವೆ ಮತ್ತು ತಂಡದ ಕಾರ್ಯಕ್ಷಮತೆ ಸುಧಾರಿಸುತ್ತದೆ. ಇದಲ್ಲದೆ, ಕೆಲವು ಕುಂಭ ರಾಶಿಯವರು ಕೆಲಸದ ಸ್ಥಳದಲ್ಲಿ ಜವಾಬ್ದಾರಿಯನ್ನು ಉತ್ತೇಜಿಸುವಲ್ಲಿ ಮುಂದಾಳತ್ವವನ್ನು ವಹಿಸುತ್ತಾರೆ. ಅವರು ಉದ್ಯೋಗಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಯೋಜಿಸುತ್ತಾರೆ. ಹಾಗಾಗಿಯೇ ಅವರು ಕಚೇರಿಯಲ್ಲಿ ಟ್ರೆಂಡ್‌ಸೆಟರ್‌ಗಳಾಗಿ ನಿಲ್ಲುತ್ತಾರೆ.  

  • 2025-26 ರಿಂದ ವರ್ಷಕ್ಕೆ ಎರಡು CBSE ಬೋರ್ಡ್ ಪರೀಕ್ಷೆ, ಪರಿಶೀಲಿಸಲು ಸೂಚನೆ
    on April 27, 2024 at 4:54 am

    ಬೆಂಗಳೂರು (ಏ.27): 2025-26 ರಿಂದ ವರ್ಷಕ್ಕೆ ಎರಡು ಬಾರಿ CBSE ಬೋರ್ಡ್  ಪರೀಕ್ಷೆಗಳನ್ನು ನಡೆಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸುವಂತೆ ಶಿಕ್ಷಣ ಸಚಿವಾಲವು ಕೇಂದ್ರೀಯ ಮಾಧ್ಯಮಿಕ ಪ್ರೌಢ ಶಿಕ್ಷಣ ಮಂಡಳಿಗೆ (ಸಿಬಿಎಸ್‌ಇ) ಸೂಚಿಸಿದೆ. ಆದರೆ ಸಿಬಿಎಸ್‌ಇಗೆ ಸೆಮಿಸ್ಟರ್ ವ್ಯವಸ್ಥೆಯನ್ನು ಜಾರಿಗೊಳಿಸುವ ಯೋಜನೆ ಸಮಂಜಸವಲ್ಲ ಎಂದು ಈಗಾಗಲೇ ತಳ್ಳಿಹಾಕಿದೆ. 2025-26ನೇ ಶೈಕ್ಷಣಿಕ ಸಾಲಿನಿಂದ ವರ್ಷಕ್ಕೆ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಸಾಧ್ಯತೆಗಳ ಕುರಿತು ಮೇ ತಿಂಗಳಲ್ಲಿ ಸಿಬಿಎಸ್‌ಇ ಹಾಗೂ ಶಿಕ್ಷಣ ಸಚಿವಾಲಯವು ಜಂಟಿಯಾಗಿ ಶಾಲಾ ಪ್ರಾಂಶುಪಾಲರ ಜೊತೆ ಮಾತುಕತೆಗಳನ್ನು ನಡೆಸಲಿದೆಯೆಂದು ವರದಿ ತಿಳಿಸಿದೆ. ಪಿಯು ಪರೀಕ್ಷೆ 2: ನೋಂದಾಯಿಸಿದ ವಿಷಯಕ್ಕೆ ಮಾತ್ರ ಹಾಜರಾದರೆ ಸಾಕು ಪದವಿ ಶಿಕ್ಷಣ ಪ್ರವೇಶಾತಿಯ ವೇಳಾಪಟ್ಟಿಯ ಮೇಲೆ ಯಾವುದೇ ಪರಿಣಾಮವಾಗದಂತೆ ಮಂಡಳಿ ಪರೀಕ್ಷೆಗಳನ್ನು ನಡೆಸುವುದಕ್ಕೆ ಪೂರಕವಾಗುವ ರೀತಿಯಲ್ಲಿ ಶೈಕ್ಷಣಿಕ ಕ್ಯಾಲೆಂಡರ್ ಅನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಸಿಬಿಎಸ್‌ಸಿ ತೊಡಗಿದೆ ಎಂದು ವರದಿಯಾಗಿದೆ. ಕಳೆದ ವರ್ಷ 2024-25ನೇ ಸಾಲಿನಿಂದಲೇ ಶಿಕ್ಷಣ ಸಚಿವಾಲಯವು ನೂತನ ಪಠ್ಯಕ್ರಮ  ಘೋಷಿಸಿತ್ತು. ಈ   ಪ್ರಕಾರವಾಗಿ ಮಂಡಳಿ ಪರೀಕ್ಷೆಗಳನ್ನು ವರ್ಷದಲ್ಲಿ ಎರಡು ಬಾರಿ ನಡೆಸಬೇಕಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಕಷ್ಟು ಸಮಯವಕಾಶ ಹಾಗೂ ಪರೀಕ್ಷೆಯಲ್ಲಿ ಉತ್ತಮ ನಿರ್ವಹಣೆಯನ್ನು ಪ್ರದರ್ಶಿಸುವುದಕ್ಕೆ ಹಾಗೂ ಹೆಚ್ಚು ಅಂಕಗಳನ್ನು ಪಡೆಯಲು ಅವಕಾಶ ದೊರೆಯಲಿದೆ ಎಂಬುದು ಶಿಕ್ಷಣ ಇಲಾಖೆಯ ನಿಲುವಾಗಿದೆ. ಆದರೆ ಅದನ್ನು ಒಂದು ವರ್ಷ ಮುಂದೂಡಲಾಗಿದೆ. ಮೇ 4 ರಂದು ನಿಗದಿಯಾಗಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-2 ಮುಂದೂಡಿಕೆ, ಡೀಟೆಲ್ಸ್ ಇಲ್ಲಿದೆ ಕಳೆದ ಅಕ್ಟೋಬರ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ‘ವರ್ಷಕ್ಕೆ ಎರಡು ಬಾರಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸಲಾಗುವುದು. ಆದರೆ ಇದು ವಿದ್ಯಾರ್ಥಿಗಳಿಗೆ ಕಡ್ಡಾಯವಲ್ಲ. ಸಂಪೂರ್ಣ ಐಚ್ಛಿಕವಾದದ್ದು. ಎಂಜಿನಿಯರಿಂಗ್‌ ಪ್ರವೇಶಕ್ಕೆ ನಡೆಯುವ ಜೆಇಇ ಪರೀಕ್ಷೆಯಂತೆ 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬೋರ್ಡ್‌ ಪರೀಕ್ಷೆಗಳಿಗೆ ಹಾಜರಾಗುವ ಆಯ್ಕೆ ಇರಲಿದೆ. ಅವುಗಳಲ್ಲಿನ ಉತ್ತಮ ಅಂಕಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದರು.

  • ಬಿಜೆಪಿ ಸಾಮಾಜಿಕ ನ್ಯಾಯ, ಬಡವರ, ಮೀಸಲಾತಿ ವಿರೋಧಿ: ಸಿಎಂ ಸಿದ್ದರಾಮಯ್ಯ
    on April 27, 2024 at 4:53 am

    ಕಲಬುರಗಿ(ಏ.27):  ಎಂಪಿ ಎಲೆಕ್ಷನ್ ನಂತರ ರಾಜ್ಯದಲ್ಲಿ ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ನಿಲ್ಲಿಸ್ತಾರೆ ಅಂತ ಬಿಜೆಪಿ ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋವರೆಗೂ ಯಾವ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಲಬುರಗಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ 11 ತಿಂಗಳಲ್ಲೇ 80 ಭರವಸೆ ಈಡೇರಿಸಿದ್ದಿವಿ, 5 ಗ್ಯಾರಂಟಿ ಯೋಜನೆ ಅದಾಗಲೇ ಅನುಷ್ಠಾನ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ದಿನವೆ 5 ಗ್ಯಾರಂಟಿ ಜಾರಿ ಸಂಕಲ್ಪ ಮಾಡಿ ಆದೇಶ ಹೊರಡಿಸಿದೆವು. ಗ್ಯಾರಂಟಿ ಯೋಜನೆಗೆ ಬಿಜೆಪಿ ಟೀಕೆ ಮಾಡಿತು, ರಾಜ್ಯ ದಿವಾಳಿ ಆಗ್ತದೆ ಅಂದ್ರು. ಅದನ್ನು ಸವಾಲಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದರು. ಅನ್ನ ಕೊಟ್ಟ ಕಾಂಗ್ರೆಸ್ ಬೇಕಾ? ಬಡವರ ಹೊಟ್ಟೆ ಮೇಲೆ ಹೊಡೆದ ಬಿಜೆಪಿ ಬೇಕಾ? : ಸಿದ್ದರಾಮಯ್ಯ ಬಿಜೆಪಿ ಸಾಮಾಜಿಕ ನ್ಯಾಯ, ಬಡವರ, ಮೀಸಲಾತಿ ವಿರೋಧಿ ಎಂದು ಟೀಕಿಸಿದ ಅವರು, ಬಿಜೆಪಿಗೆ ಮತ ಹಾಕಿ ಗೆಲ್ಲಿಸಬೇಡಿ ಎಂದು ಕರೆ ನೀಡಿದರು. ಮೋದಿ ಗ್ಯಾರಂಟಿ ಅಂತಾರೆ ಎಂದು ಅಣುಕಿಸಿದ ಸಿದ್ದರಾಮಯ್ಯ ನಮ್ಮದೇ ಜನಪರ ಗ್ಯಾರಂಟಿ ಎಂದರು. ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಜನರು ಕೇಳುವ ಪ್ರಶ್ನೆಗಳಿಗೆ ಜಾಧವ್ ಉತ್ತರಿಸಲಿ. ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ಧ ಅವರದೇ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಗೋ ಬ್ಯಾಕ್ ಅಭಿಯಾನ ನಡೆಸಿದ್ದಾರೆ. ಹತ್ತು ವರ್ಷ ಮೋದಿ ಆಡಳಿತ ಹಾಗೂ ಐದು ವರ್ಷದ ಅವರ ಅವಧಿಯ ಅಭಿವೃದ್ದಿ ಲೆಕ್ಕ ಕೇಳಿದ್ದಾರೆ. ಮೊದಲು ಜಾಧವ್ ಜನರ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಆಗ್ರಹಿಸಿದರು. ಈ ಹಿಂದಿನ ಎಲ್ಲ ಮೋದಿ ಗ್ಯಾರಂಟಿಗಳೆಲ್ಲ ಏನಾದವು? ಮೇಕ್ ಇನ್ ಇಂಡಿಯಾ, ವರ್ಷಕ್ಕೆ 2 ಕೋಟಿ ಉದ್ಯೋಗ ಸೇರಿದಂತೆ ಎಲ್ಲ ಘೋಷಿತ ಯೋಜನೆಗಳು ಜಾರಿಯಾಗಲಿಲ್ಲ. ಕಲಬುರಗಿ ಗೆ ಮಂಜೂರಾಗಿದ್ದ ರೇಲ್ವೆ ವಲಯ, ಜವಳಿ ಪಾರ್ಕ್, ನಿಮ್ಝ ನಂತಹ ಯೋಜನೆಗಳು ವಾಪಸ್ ಹೋಗಿವೆ. ಇದಕ್ಕೆ ಉತ್ತರ ಕೊಡಿ ಜಾಧವ್ ಎಂದು ಅಬ್ಬರಿಸಿದರು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನಿಜವಾದ ಕಲ್ಯಾಣ ಮಾಡುತ್ತೇವೆ ಎಂದು ಭರವಸೆ ನೀಡಿದ ಖರ್ಗೆ, ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾತನಾಡಿ, ಈ ಚುನಾವಣೆ ನ್ಯಾಯ ಅನ್ಯಾಯ, ಸತ್ಯ ಅಸತ್ಯದ ನಡುವೆ ನಡೆಯುವ ಚುನಾವಣೆಯಾಗಿದೆ‌. ಸಿಎಂ ಕಾಂಗ್ರೆಸ್ ಪಕ್ಷವನ್ನು ನಂಬಿ ಆಶೀರ್ವಾದ ಮಾಡಿದ್ದಾರೆ ಇದಕ್ಕೆ ಕಾರಣ‌ಈ ಹಿಂದೆ ನೀಡಿದ 161 ಭರವಸೆಗಳಲ್ಲಿ 159 ಭರವಸೆ ಈಡೇರಿಸಿದ್ದೇವೆ. ಈ ಸಲ ಅಧಿಕಾರಕ್ಕೆ ಬಂದಾಗ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ತಲುಪಿಸಿದ್ದೇವೆ. ಕಾಂಗ್ರೆಸ್ ಪಕ್ಷ ಯುವಕರಿಗೆ,ರೈತರಿಗೆ,‌ಮಹಿಳೆಯರಿಗೆ ಅನುಕೂಲವಾಗುವಂತೆ ಯೋಜನೆಗಳ ಭರವಸೆ ನೀಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಹಾಗಾಗಿ ನೀವೆಲ್ಲ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲಿಸಿ ಎಂದು ಮನವಿ ಮಾಡಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್ ಮಾತನಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನಪರವಾಗಿ ಕೆಲಸ ಮಾಡಲಿದೆ ಎಂದರು. ಎಂಎಲ್‌ಸಿ ತಿಪ್ಪಣ್ಣಪ್ಪ ಕಮನೂರು ಮಾತನಾಡಿ, ಸಿಎಂ ಇಂದು ಕಲಬುರಗಿ ಗೆ ಬಂದಿದ್ದಾರೆ. ಅವರು ಎರಡನೆಯ ಬಸವಣ್ಣ ನವರಿದ್ದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಾರೆ, ರಾಧಾಕೃಷ್ಣ ಅವರು 1.50 ಲಕ್ಷ ಮತಗಳಿಂದ ಗೆಲ್ಲಿಸಿ ಎಂದು ನಿಮಗೆ ಮನವಿ ಮಾಡಲು ಬಂದಿದ್ದಾರೆ. ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ನಯಾಪೈಸೆ ಲಾಭವಾಗಿಲ್ಲ ಎಂದು ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು. ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ನಯಾ ಪೈಸೆ ಲಾಭವಾಗಿಲ್ಲ. ಮೋದಿ ಬರೀ ಉದ್ರಿ ಭಾಷಣ ಮಾಡಿಕೊಂಡೇ ಇದ್ದಾರೆ. ಉದ್ರಿ ಭಾಷಣದಿಂದ ಯಾರ ಹೊಟ್ಟೆ ತುಂಬಲ್ಲ. ಆದರೆ ನಮ್ಮ ಸರ್ಕಾರದ ಗ್ಯಾರಂಟಿಗಳು ಪಕ್ಕಾ ಗ್ಯಾರಂಟಿಗಳಾಗಿವೆ, ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಹೇಳಿದರು. ಕಲಬುರಗಿ ಭಾಗದ ಪ್ರಗತಿಗೆ ಮೋದಿ ಜಾಣ ಕಿವುಡು ಧೋರಣೆ: ಅಜಯ್‌ ಸಿಂಗ್‌ ಈ ದೇಶದ ಕಟ್ಟ ಕಡೆಯ ವ್ಯಕ್ತಿಗೆ ಸ್ವಾಭಿಮಾನದ ಬದುಕು ರೂಪಿಸುವುದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಆದರೆ ಬಿಜೆಪಿಯದು ಭ್ರಷ್ಟಾಚಾರವೇ ಸಿದ್ದಾಂತವಾಗಿದೆ. ಹಾಗಾಗಿ 40% ಭ್ರಷ್ಟ ಸರ್ಕಾರವನ್ನು ಜನರೇ ಕಿತ್ತು ಹಾಕಿದ್ದಾರೆ. ಸರ್ಕಾರಿ ಮೆಡಿಕಲ್ ಆಸ್ಪತ್ರೆ, ತಾಯಿ ಮಗು ಆಸ್ಪತ್ರೆ, ಕಿದ್ವಾಯಿ, ಜಯದೇವ, ಟ್ರಾಮಾ ಕೇರ್ ಸೆಂಟರ್ ಈ ಎಲ್ಲ ಯೋಜನೆಗಳನ್ನು ಕಲಬುರಗಿಗೆ ತಂದಿದ್ದೇವೆ. ಇದು ನಮ್ಮ ಅಭಿವೃದ್ದಿ ಪಟ್ಟಿ ಹಾಗೂ ಬದ್ದತೆ. ಬಿಜೆಪಿಗರು ಏನು ಮಾಡಿದ್ದಾರೆ. ಮೋದಿ ಮುಖ ನೋಡಿ ಓಟು ಹಾಕಿ ಅಂತ ಹೇಳುತ್ತಾರೆ. ಎರಡು ಬಾರಿ ಅವರ ಮುಖ ನೋಡಿ ಓಟು ಹಾಕಿದ ಜನರು ಎರಡೂ ಕೈಯಿಂದ ಉಂಡಿದ್ದಾರೆ ಎಂದು‌ ಟೀಕಿಸಿದರು. ವೇದಿಕೆಯ ಮೇಲೆ ಸಚಿವರಾದ ರಹೀಂ ಖಾನ್, ಶಾಸಕರಾದ ಕನೀಜ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಫಾತಿಮಾ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಖಾಜಾ‌ ಬಂದನವಾಜ್ ದರ್ಗಾದ ಪೀಠಾಧಿಪತಿ ಡಾ ಮುಸ್ತಫಾ ಅಲ್ ಹುಸೇನ್ ಖುಸ್ರೋ, ಮಜರ್ ಖಾನ್, ದೇವೆಂದ್ರಪ್ಪ ಮರತೂರು, ದೇವೆಂದ್ರಪ್ಪ ಮರತೂರು, ಭಾಗನಗೌಡ ಸಂಕನೂರು, ಶರಣು ಮೋದಿ, ಚಂದ್ರಿಕಾ ಪರಮೇಶ್ವರ, ಡಾ ಕಿರಣ್ ದೇಶಮುಖ್, ನೀಲಕಂಠರಾವ್ ಮೂಲಗೆ, ಡಿ.ಜಿ.ಸಾಗರ್, ಫಾರೂಖ್, ಪ್ರವೀಣ ಹರವಾಳ ಸೇರಿದಂತೆ ಮತ್ತಿತರಿದ್ದರು.

  • ಗ್ಯಾರಂಟಿ, ಮಹಿಳೆಯರ ಬಗ್ಗೆ ಎಚ್‌ಡಿಕೆ ಲಘು ಮಾತು: ಸಚಿವ ಚಲುವರಾಯಸ್ವಾಮಿ
    on April 27, 2024 at 4:51 am

    ನಾಗಮಂಗಲ (ಏ.27): ಗ್ಯಾರಂಟಿ ಯೋಜನೆಗಳು ಮತ್ತು ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಜನರು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ತಾಲೂಕಿನ ಇಜ್ಜಲಘಟ್ಟ ಗ್ರಾಮದಲ್ಲಿ ಕುಟುಂಬದವರೊಂದಿಗೆ ಮತ ಚಲಾಯಿಸಿದ ಬಳಿಕ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಮೇಲೆ ಜನರಿಗೆ ವಿಶ್ವಾಸ ಇದೆ. ಕುಮಾರಸ್ವಾಮಿ ಅವರು ಗ್ಯಾರಂಟಿ ನಿಲ್ಲಿಸುವ ಬಗ್ಗೆ ಹೇಳಿದ್ದಾರೆ. ಗ್ಯಾರಂಟಿ ಕೊಡುವುದು ತಪ್ಪು, ಮಹಿಳೆಯರು ದಾರಿ ತಪ್ಪಿದ್ದಾರೆ ಎಂದೆಲ್ಲಾ ಲಘುವಾಗಿ ಮಾತನಾಡಿದ್ದಾರೆ.  ಅಂತಹವರನ್ನು ಜಿಲ್ಲೆಯ ಜನರು ಹೇಗೆ ಒಪ್ಪಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ. ಮಂಡ್ಯ ಜಿಲ್ಲೆಗೆ ಒಂದು ಶಾಶ್ವತ ಯೋಜನೆ ಕೊಟ್ಟಿಲ್ಲ. ಅವರ ತಂದೆ ಕೂಡ ಸಿಎಂ, ಪಿಎಂ ಆಗಿದ್ದರೂ ಏನೂ ಮಾಡಿಲ್ಲ. ಹಾಸನ ಜಿಲ್ಲೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಿದರು. ಮಂಡ್ಯ, ತುಮಕೂರಿನ ಬಗ್ಗೆ ಕಾಳಜಿ ತೋರಲಿಲ್ಲವೆಂದು ದೂರಿದರು. ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡುತ್ತಾರೆ ಅಷ್ಟೇ. ವೈಯಕ್ತಿಕವಾಗಿ ಕುಮಾರಸ್ವಾಮಿ ಕೊಡುಗೆ ಮಂಡ್ಯ ಜಿಲ್ಲೆಗೆ ಶೂನ್ಯ.  ಒಕ್ಕಲಿಗರ ನಾಯಕ ನಾನೇ ಎಂದು ಹೇಳಿಕೊಳ್ಳುವವರು ಒಕ್ಕಲಿಗರಿಗೋಸ್ಕರ ಏನೂ ಮಾಡಲಿಲ್ಲ. ರಾಜ್ಯಸಭೆ, ವಿಧಾನಪರಿಷತ್‌ಗೆ ಒಕ್ಕಲಿಗರೊಬ್ಬರನ್ನು ಆರಿಸಿ ಕಳುಹಿಸಲಿಲ್ಲ. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಿಲ್ಲ ಎಂದು ಟೀಕಿಸಿದರು. ಪುಟ್ಟರಾಜು ಕುಮಾರಸ್ವಾಮಿ ಹೇಳಿದಂತೆ ಕೇಳಿದರೆ, ಕುಮಾರಸ್ವಾಮಿ ದೇವೇಗೌಡರು ಹೇಳಿದಂತೆ ಕೇಳುತ್ತಾರೆ. ಜೆಡಿಎಸ್ನ್‌ವರು ನೀರಾವರಿ ಯೋಜನೆಗೆ ಒತ್ತು ಕೊಟ್ಟಿಲ್ಲ. ನಾವು ಕೃಷಿ ವಿವಿ ಮಾಡಿದ್ದೇವೆ. ಮೆಡಿಕಲ್ ಕಾಲೇಜು ತಂದಿದ್ದೇವೆ ಎಂದು ಹೆಮ್ಮೆಯಿಂದ ಹೇಳಿದರು. ಕುಮಾರಸ್ವಾಮಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸುವುದಾಗಿ ಹೇಳಿರುವುದನ್ನು ನೋಡಿದರೆ ಬೇಸರವಾಗುವ ಜೊತೆಗೆ ಇಷ್ಟೊಂದು ಸುಳ್ಳು ಹೇಳ್ತಾರೆಂತ ನೋವಾಗುತ್ತದೆ.  ಸಿಎಂ ಸಿದ್ದರಾಮಯ್ಯ ಮಾತು ನೋವು ತಂದಿದೆ: ಕೆ.ಎಸ್‌.ಈಶ್ವರಪ್ಪ ಕಾವೇರಿ ವಿಷಯದಲ್ಲಿ ದೇವೇಗೌಡರು ಪ್ರಯತ್ನ ಮಾಡಿದ್ದಾರೆ. ಆದರೆ, ನ್ಯಾಯ ಸಿಕ್ಕಿಲ್ಲ. ಎಲ್ಲಾ ಮುಗಿದು ಪ್ರಾಧಿಕಾರ ರಚನೆಯಾಗಿ ಹೋಗಿದೆ. ಅಂತಿಮ ತೀರ್ಪೂ ಹೊರಬಿದ್ದಿದೆ. ಎಲ್ಲಾ ಕಾನೂನು ವ್ಯಾಪ್ತಿಯಲ್ಲಿರುವಾಗ ನಾನು ಸಂಸದನಾಗಿ ಪರಿಹಾರ ಸೂಚಿಸುತ್ತೇನೆಂದರೆ ಏನರ್ಥ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪರವಾಗಿ ಮಹಿಳೆಯರ ಮತ ಹೆಚ್ಚಿದೆ. ಹಾಗಾಗಿ ನಾವು ಗೆಲುವಿನ ವಿಶ್ವಾಸದಲ್ಲಿದ್ದೇವೆ. ನೂರಕ್ಕೆ ನೂರರಷ್ಟು ನಾವೇ ಗೆಲ್ಲುತ್ತೇವೆ. ಅಂತರ ನಿರ್ಧಾರ ಮಾಡುವವರು ಜನರು, ಎಲ್ಲವನ್ನೂ ಅವರಿಗೇ ಬಿಟ್ಟಿದ್ದೇವೆ ಎಂದು ಮಾತು ಮುಗಿಸಿದರು.

  • ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿ 527 ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಕೆಮಿಕಲ್‌ಗಳು ಪತ್ತೆ!
    on April 27, 2024 at 4:48 am

    ಜನಪ್ರಿಯ ಬ್ರ್ಯಾಂಡ್‌ಗಳೆಂದ ಕೂಡಲೇ ನಂಬಿಕೆಯಿಂದ ಅವುಗಳ ಉತ್ಪನ್ನ ಖರೀದಿಸುತ್ತಾರೆ ಗ್ರಾಹಕರು. ಆದರೆ, ಜನಪ್ರಿಯವಾಗಿರುವ ಕಾರಣ ಇಂಥ ಕಂಪನಿಗಳು ಜನರ ಆರೋಗ್ಯವನ್ನು ಅಸಡ್ಡೆ ಮಾಡಬಹುದೇ? ಎಂಡಿಎಚ್, ಎವರೆಸ್ಟ್ ಮಸಾಲೆ ಸೇರಿದಂತೆ ಜನಪ್ರಿಯ ಕಂಪನಿಗಳ ಆಹಾರ ಪದಾರ್ಥಗಳಲ್ಲಿ ಕ್ಯಾನ್ಸರ್‌ಕಾರಕ ಎಥಿಲೀನ್ ಆಕ್ಸೈಡ್ ಹೆಚ್ಚಿನ ಮಟ್ಟದಲ್ಲಿರುವುದನ್ನು ಯುರೋಪಿಯನ್ ಯೂನಿಯನ್ ಆಹಾರ ಸುರಕ್ಷತಾ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದೇ ಕಾರಣದಿಂದ ಮೇಲೆ ತಿಳಿಸಲಾದ ಎರಡು ಕಂಪನಿಗಳ ಉತ್ಪನ್ನಗಳನ್ನು ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ನಿಷೇಧಿಸಲಾಗಿದೆ.  ಸೆಪ್ಟೆಂಬರ್ 2020 ಮತ್ತು ಏಪ್ರಿಲ್ 2024 ರ ನಡುವೆ ಭಾರತಕ್ಕೆ ಲಿಂಕ್ ಮಾಡಿದ 527 ಉತ್ಪನ್ನಗಳಲ್ಲಿ ಅಂತಾರಾಷ್ಟ್ರೀಯ ಆಹಾರ ಸುರಕ್ಷತಾ ಅಧಿಕಾರಿಗಳು ಎಥಿಲೀನ್ ಆಕ್ಸೈಡ್ ಇರುವುದನ್ನು ಕಂಡುಕೊಂಡಿದ್ದಾರೆ. ಈ ಕಾರಣದಿಂದ 527 ಉತ್ಪನ್ನಗಳಲ್ಲಿ, 87 ಪದಾರ್ಥಗಳ ರಫ್ತನ್ನು ಗಡಿಯಲ್ಲಿ ತಿರಸ್ಕರಿಸಲಾಗಿದೆ.  ಈ ಬ್ಯೂಟಿ ವಯಸ್ಸು 60 ಅಂದ್ರೆ ನಂಬೋಕಾಗುತ್ತಾ? ಇಳಿವಯಸ್ಸಲ್ಲಿ ಸೌಂದರ್ಯ ಸ್ಪರ್ಧೆ ಗೆದ್ದ ಅರ್ಜೆಂಟೀನಾ ಚೆಲುವೆ   ಈ ಮಾಲಿನ್ಯವು ಪ್ರಾಥಮಿಕವಾಗಿ ಎಳ್ಳು ಬೀಜಗಳು, ಗಿಡಮೂಲಿಕೆಗಳು, ಮಸಾಲೆಗಳು ಮತ್ತು ಇತರ ಆಹಾರ ಪದಾರ್ಥಗಳ ಜೊತೆಗೆ ಸೇರಿವೆ. ಈ 527 ಪದಾರ್ಥಗಳಲ್ಲಿ ಭಾರತವು 332 ರ ಮೂಲ ದೇಶವೆಂದು ಗುರುತಿಸಲ್ಪಟ್ಟರೆ, ರಾಸಾಯನಿಕವು ಕಂಡುಬಂದ ಉಳಿದ ಪ್ರಕರಣಗಳಲ್ಲಿ ಇತರ ದೇಶಗಳೂ ಭಾಗಿಯಾಗಿದ್ದವು. ಎಥಿಲೀನ್ ಆಕ್ಸೈಡ್ ಎಥಿಲೀನ್ ಆಕ್ಸೈಡ್ ಅನ್ನು ಮೂಲತಃ ವೈದ್ಯಕೀಯ ಸಾಧನಗಳನ್ನು ಕ್ರಿಮಿನಾಶಕಗೊಳಿಸಲು ಉದ್ದೇಶಿಸಲಾಗಿದೆ, ಈಗ ಇದನ್ನು ಕೀಟನಾಶಕ ಮತ್ತು ಕ್ರಿಮಿನಾಶಕ ಏಜೆಂಟ್ ಆಗಿ ಬಳಸಲಾಗುತ್ತದೆ. ಈ ರಾಸಾಯನಿಕಕ್ಕೆ ಒಡ್ಡಿಕೊಳ್ಳುವುದರಿಂದ ಲಿಂಫೋಮಾ ಮತ್ತು ಲ್ಯುಕೇಮಿಯಾ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳು ಬರಬಹುದು. ರಾಮಯ್ಯ ಅಡ್ವಾನ್ಸ್ಡ್ ಟೆಸ್ಟಿಂಗ್ ಲ್ಯಾಬ್ಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಜುಬಿನ್ ಜಾರ್ಜ್ ಜೋಸೆಫ್, ಎಥಿಲೀನ್ ಆಕ್ಸೈಡ್‌ನ ಉಪಉತ್ಪನ್ನವಾದ ಎಥಿಲೀನ್ ಗ್ಲೈಕೋಲ್‌ನಿಂದ ಉಂಟಾಗುವ ಅಪಾಯಗಳನ್ನು ಎತ್ತಿ ತೋರಿಸಿದರು. ಇದು ಈ ಹಿಂದೆ ಕೆಮ್ಮಿನ ಸಿರಪ್‌ಗಳಲ್ಲಿ ಅದರ ಉಪಸ್ಥಿತಿಯಿಂದಾಗಿ ಆಫ್ರಿಕಾದಲ್ಲಿ ಸಾವಿಗೆ ಕಾರಣವಾಯಿತು. ಸ್ವಿಮ್ಮಿಂಗ್ ಪೂಲ್‌ಗೆ ಜಿಗಿದು ‘ಅಂಕಲ್‌.. ಅಂಕಲ್‌..’ ಕೂಗಿದ್ದ ನಟಿ ಮಂಜುಳಾ; ಡಾ ರಾಜ್‌ಕುಮಾರ್ ಮಾಡಿದ್ದೇನು?   ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಂತಹ ಸರ್ಕಾರಿ ಸಂಸ್ಥೆಗಳು ಆಹಾರ ಪದಾರ್ಥಗಳ ಸುರಕ್ಷತೆ ಬಗ್ಗೆ ಹೆಚ್ಚು ಅಧ್ಯಯನಗಳಲ್ಲಿ ತೊಡಗಬೇಕಿದೆ ಎಂಬುದನ್ನು ಇದು ಒತ್ತಿ ಹೇಳುತ್ತದೆ.  ಹಾಂಗ್‌ಕಾಂಗ್ ಮತ್ತು ಸಿಂಗಾಪುರದ ವರದಿಗಳ ನಂತರ, ಭಾರತೀಯ ಆಹಾರ ಅಧಿಕಾರಿಗಳು ದೇಶದಲ್ಲಿ ಎಂಡಿಹೆಚ್ ಮತ್ತು ಎವರೆಸ್ಟ್ ಮಸಾಲೆಗಳ ಗುಣಮಟ್ಟದ ತಪಾಸಣೆಗೆ ಆದೇಶಿಸಿದ್ದಾರೆ.

  • ಕಾಂಗ್ರೆಸ್‌ನಲ್ಲಿ ಎಲ್ಲರಿಗೂ ಸಮಾನ ಅವಕಾಶ: ಸಚಿವ ಈಶ್ವರ ಖಂಡ್ರೆ
    on April 27, 2024 at 4:43 am

    ಭಾಲ್ಕಿ(ಏ.27):  ಎಲ್ಲ ಜಾತಿ, ಮತ, ಜನಾಂಗದವನ್ನು ಸಮಾನವಾಗಿ ಕಾಣುವ ಮತ್ತು ಸಮಾನ ಅವಕಾಶ ನೀಡುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ನುಡಿದರು. ಭಾಲ್ಕಿಯಲ್ಲಿಂದು ವೀರಶೈವ, ಲಿಂಗಾಯತ ಮುಖಂಡರ ಸಭೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ನಿಜಲಿಂಗಪ್ಪವರು ಕಾಂಗ್ರೆಸ್‌ನಿಂದಲೇ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದರು. ವೀರೇಂದ್ರ ಪಾಟೀಲರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಬಿ.ಡಿ. ಜತ್ತಿ ಅವರು ಉಪರಾಷ್ಟ್ರಪತಿ ಆಗಿದ್ದರು. ಆದಾಗೂ ಕಾಂಗ್ರೆಸ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂದು ತಿಳಿಸಿದರು. ಬೀದರ್‌ ಲೋಕಸಭಾ ಕ್ಷೇತ್ರ: ಗ್ಯಾರಂಟಿ ಪಕ್ಕಾ ಎಂಬುದು ಜನರ ನಂಬಿಕೆ, ಸಾಗರ ಖಂಡ್ರೆ ಸರ್ವರಿಗೂ ಲೇಸನ್ನು ಬಯಸುವುದು ನಮ್ಮ ಸಮಾಜದ ಮೂಲ ತತ್ವ, ವರ್ಗ ರಹಿತ, ಶ್ರೇಣಿ ರಹಿತ, ಅಸಮಾನತೆಯಿಲ್ಲದ ಸಮ ಸಮಾಜದ ನಿರ್ಮಾಣ ಬಸವಾದಿ ಪ್ರಮಥರ ಕನಸಾಗಿತ್ತು. ಕಾಂಗ್ರೆಸ್‌ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಧ್ಯೇಯದೊಂದಿಗೆ ಹಾಗೂ 5 ಗ್ಯಾರಂಟಿಗಳ ಮೂಲಕ ಇದನ್ನು ಸಾಕಾರಗೊಳಿಸುತ್ತಿದೆ ಎಂದರು. ಬೀದರ್, ಭಾಲ್ಕಿಯ ಸುಪುತ್ರನಿಗೆ ದೆಹಲಿಗೆ ಹೋಗುವ ಅವಕಾಶ ನೀಡಿ: ತಮ್ಮ ಪುತ್ರ ಬೀದರ್ ಜಿಲ್ಲೆಯ ಸುಪುತ್ರ ಹಾಗೂ ರಾಜ್ಯದಲ್ಲೇ ಏಕೆ ಬಹುತೇಕ ರಾಷ್ಟ್ರದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಲೋಕಸಭಾ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆಗೆ ಗೆಲ್ಲಿಸುವ ಮೂಲಕ ಭಾಲ್ಕಿ ಮತ್ತು ಬೀದರ್ ಕೀರ್ತಿ ದೂರದ ದೆಹಲಿಯಲ್ಲೂ ಮಾರ್ಧನಿಸುವಂತೆ ಮಾಡಿ. ಇದಕ್ಕಾಗಿ ಮೇ 7ರಂದು ಎಲ್ಲರೂ ಕಾಂಗ್ರೆಸ್‌ಗೆ ಮತ ನೀಡಿ ಎಂದು ಮನವಿ ಮಾಡಿದರು. ಡಿಸಿಸಿ ಮೇಲೆ ರೇಡ್‌ ನಿಮ್ಮ ಕರ್ಮಕಾಂಡದ ಫಲ: ಖೂಬಾ ವಿಧಾನಸಭಾ ಚುನಾವಣೆಯಲ್ಲಿ ನೀವೆಲ್ಲರೂ ನನಗೆ ಬೆಂಬಲ ನೀಡಿದ್ದೀರಿ. ಲೋಕಸಭಾ ಚುನಾವಣೆಯಲ್ಲೂ ಸಾಗರ್ ಖಂಡ್ರೆಗೆ ಆಶೀರ್ವಾದ ಮಾಡಿ. ಸಾಗರ್ ಗೆದ್ದು ಸಂಸದರಾದರೆ ವಾರದ 7 ದಿನ, ದಿನದ 24 ಗಂಟೆ ಜನತೆಗೆ ಸೇವೆಗೆ ಬದ್ಧರಾಗಿರುತ್ತಾರೆ. ಹಾಲಿ ಸಂಸತ್ ಸದಸ್ಯರಂತೆ ಕಾಣೆಯಾಗುವುದಿಲ್ಲ ಎಂದು ತಿಳಿಸಿದರು. ಸಭೆಯಲ್ಲಿ ಭಾಲ್ಕಿಯ ವೀರಶೈವ, ಲಿಂಗಾಯತ ಸಮುದಾಯದ ಮುಖಂಡರಾದ ಬಸವರಾಜ್ ವಂಕೆ, ಸೋಮನಾಥಪ್ಪ ಅಷ್ಟುರೆ, ಪ್ರಕಾಶ್ ಮಾಶೆಟ್ಟಿ, ಸುಭಾಷ್ ಕಾರಮುಂಗೆ, ದಿಲೀಪ್ ಸುಂಟೆ, ರಮೇಶ್ ಲೋಖಂಡೆ, ದತ್ತು ಹೊನ್ನ, ಅನಿಲ್ ಲೋಖಂಡೆ, ಮಹದೇವ ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಸಮಾಜದವರು ಸಾಗರ್ ಖಂಡ್ರೆಗೆ ಜೈಕಾರ ಮಾಡುವ ಮೂಲಕ ತಮ್ಮ ಬೆಂಬಲ ಸೂಚಿಸಿದರು.

  • ಸಂದೇಶ್‌ಖಾಲಿ: ಶೇಖ್‌ ಆಪ್ತನ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ
    on April 27, 2024 at 4:33 am

    ಕೋಲ್ಕತಾ(ಏ.27):  ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲೆ ಉಚ್ಚಾಟಿತ ಟಿಎಂಸಿ ಮುಖಂಡ ಶೇಖ್ ಶಾಜಹಾನ್ ಆಪ್ತರು ನಡೆಸಿದ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ, ಶುಕ್ರವಾರ ಇಲ್ಲಿಟಿಎಂಸಿ ಕಾರ್ಯಕರ್ತನೊಬ್ಬನ ಮನೆ ಮೇಲೆ ದಾಳಿ ಮಾಡಿ ವಿದೇಶಿ ಪಿಸ್ತೂಲುಗಳು ಸೇರಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಪಡಿಸಿ ಕೊಂಡಿದೆ. ಈ ದಾಳಿಗೆ ಸಿಬಿಐ ಅಧಿಕಾರಿಗಳ ಜೊತೆಗೆ ಎನ್‌ಐಎ, ಎನ್‌ಎಸ್‌ಜಿ ಮತ್ತು ಸ್ಥಳೀಯ ಪೊಲೀಸರೂ ಸಾಥ್ ನೀಡಿದ್ದಾರೆ. ಜೊತೆಗೆ ನೆಲದಾಳದಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಬಹುದಾದ ಶಂಕೆ ಮೇಲೆ ಅದನ್ನು ಪರಿಶೀಲಿಸಲು ರೋಬೋಟ್‌ಗಳ ನೆರವನ್ನೂ ಪಡೆದುಕೊಳ್ಳಲಾಗಿದೆ. ಇ.ಡಿ. ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದ ಪ್ರಮುಖ ಆರೋಪಿ ಶಜಹಾನ್‌ನ ಆಪ್ತ ಅಬು ತಲೇಬ್ ಮೊಲ್ಲಾ ಎಂಬಾತನ ಮನೆಯಲ್ಲಿ ಶಸ್ತ್ರಾಸ್ತ್ರ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು. ಈ ವೇಳೆ ಬಾಕ್ಸ್‌ಗಳಲ್ಲಿ ಸಂಗ್ರಹಿಸಲಾಗಿದ್ದ 12 ಬಂದೂಕು, 1 ಪೊಲೀಸ್ ರಿವಾಲ್ವರ್, 4 ವಿದೇಶಿ ಪಿಸ್ತೂಲ್, ಸ್ಫೋಟಕಗಳು. ಶಂಕಿತ ಸ್ವದೇಶಿ ನಿರ್ಮಿತ ಬಾಂಬ್ ಸೇರಿದಂತೆ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಪತ್ತೆಯಾಗಿದೆ. ಶಾಜಹಾನ್ ಗೆ ಸಂಬಂಧಿಸಿದ ಕೆಲವು ಶಂಕಾಸ್ಪದ ದಾಖಲೆ ಗಳನ್ನು ವಶಪಡಿಕೊಳ್ಳಲಾಗಿದೆ. ಮನೆಯಲ್ಲಿ ಇಷ್ಟು ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಯಾಕಾಗಿ ಸಂಗ್ರಹಿಸಲಾಗಿತ್ತು ಎಂಬುದು ತಿಳಿದುಬಂದಿಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಂಡ್ತಿ ಮಗಳನ್ನು ನೋಡಿ ಮಗುವಿನಂತೆ ಅತ್ತ ಸಂದೇಶ್‌ಖಾಲಿ ಗಲಭೆ ಪ್ರಕರಣದ ಆರೋಪಿ ಶೇಖ್ ಶಹಜಾಹಾನ್ ಸಂದೇಶ್‌ಖಾಲಿ ದ್ವೀಪದ ಹಿಂದೂಗಳು, ಆದಿವಾಸಿಗಳ ಮೇಲೆ ಟಿಎಂಸಿ ನಾಯಕ ಶಹಜಹಾನ್ ಮತ್ತು ಆತನ ಬೆಂಬಲಿಗರು ಲೈಂಗಿಕ ದೌರ್ಜನ್ಯ ನಡೆಸಿದ್ದೂ ಅಲ್ಲದೆ ಅವರ ಆಸ್ತಿಯನ್ನು ಬಲವಂತವಾಗಿ ಕಬಳಿಸಿದ್ದ. ಈ ಪ್ರಕರಣದ ಕುರಿತು ತನಿಖೆಗೆ ತೆರಳಿದ್ದ ಇ.ಡಿ. ತಂಡದ ಮೇಲೆ ಕಳೆದ ಜ.5ರಂದು. ಆತನ ಆಪ್ತರು ಹಿಂಸಾತ್ಮಕ ದಾಳಿ ಮಾಡಿದ್ದರು ಸಿಬಿಐ ತನಿಖೆ ವಿರುದ್ಧ ಬಂಗಾಳ ಸುಪ್ರೀಂಗೆ ಮೊರೆ ಕೋಲ್ಕತಾ: ದೇಶವನ್ನೇ ಬೆಚ್ಚಿ ಬೀಳಿಸಿದ ಪಶ್ಚಿಮ ಬಂಗಾಳದ ಸಂದೇಶ್‌ಖಾಲಿ ಘಟನೆಯನ್ನು ಸಿಬಿಐ ತನಿಖೆಗೆ ವಹಿಸಿರು ವುದನ್ನು ವಿರೋಧಿಸಿ ಪಶ್ಚಿಮ ಬಂಗಾಳ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಘಟನೆಯ ತನಿಖೆಯನ್ನು ಸಿಬಿಐನಿಂದ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.

  • Sandalwood: ಮತ ಚಲಾಯಿಸಿದ ಸ್ಯಾಂಡಲ್‌ವುಡ್ ಸೆಲೆಬ್ರೆಟೀಸ್: ಸದಾಶಿವನಗರದಲ್ಲಿ ಡಾ.ರಾಜ್ ಫ್ಯಾಮಿಲಿಯಿಂದ ಮತದಾನ
    on April 27, 2024 at 4:17 am

    ಬೆಳ್ಳಂಬೆಳಗ್ಗೆ ಚಂದನವನದ ತಾರೆಯರು(Sandalwood) ಮತಗಟ್ಟೆಗೆ ತೆರಳಿ ಮತಚಲಾಯಿಸಿದ್ದಾರೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅವರು ಪುಟ್ಟೇನಹಳ್ಳಿಯ ಆಕ್ಸ್ಫರ್ಡ್ ಇಂಗ್ಲೀಷ್ ಶಾಲೆಯಲ್ಲಿ ಮತದಾನ ಮಾಡಿದರು. ನಟ ವೋಟ್ ಮಾಡಿದ ಗುರುತನ್ನು ತೋರಿಸಿದರು. ಡಾಲಿ ಧನಂಜಯ್ ತಮ್ಮೂರು ಅರಸೀಕೆರೆ ತಾಲೂಕು ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತ ತೆರಳಿ ವೋಟ್(Voting) ಮಾಡಿದ್ದಾರೆ. ನಟಿ ರಚಿತಾ ರಾಮ್ , ಸುಧಾರಾಣಿ ತಮ್ಮ ಮತಚಲಾಯಿಸಿದರು. ಎಂದಿನಂತೆ ಕ್ರೇಜಿಸ್ಟಾರ್ ರವಿಚಂದ್ರನ್(Ravichandran) ಬೆಳಗಿನ ಜಾವ ರಾಜಾಜಿನಗರದಲ್ಲಿ ತಮ್ಮ ಮತಚಲಾಯಿಸಿ  ಎಲ್ಲರೂ ವೋಟ್ ಮಾಡಲೇಬೇಕು ಎಂದು ಹೇಳಿದರು. ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಸಹ ತಂದೆಯ ಜೊತೆಗೆ ಬಂದು ಮತ ಚಲಾಯಿಸಿದರು. ರಿಯಲ್ ಸ್ಟಾರ್ ಉಪೇಂದ್ರ ,ಗೋಲ್ಡನ್ ಸ್ಟಾರ್ ಗಣೇಶ್, ಪತ್ನಿ ಶಿಲ್ಪಾ ಗಣೇಶ್, ದುನಿಯಾ ವಿಜಯ್, ನಟಿ ಅಮೂಲ್ಯ, ನಟ ಶ್ರೀಮುರಳಿ ಪತ್ನಿ ಸಮೇತರಾಗಿ ಬಂದು ಮತಚಲಾಯಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ರಾಜ್ ಫ್ಯಾಮಿಲಿ ಸದಾಶಿವನಗರದಲ್ಲಿ ಮತ ಚಲಾಯಿಸಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಯುವ ರಾಜ್‌ಕುಮಾರ್, ವಿನಯ್ ರಾಜ್‌ಕುಮಾರ್ ಆದಿಯಾಗಿ ಬಂದು ಮತ ಚಲಾಯಿಸಿದು. ಸುಮಲತಾ ಅಂಬರೀಶ್, ನಟ ಧ್ರುವ ಸರ್ಜಾ  ,ಪ್ರೇಮ್ , ರಕ್ಷಿತ ಹಾಗೂ  ನಟ ಜಗ್ಗೇಶ್ ಅವರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಸಪ್ತಮಿ ಗೌಡ,ಚಂದನ್ ಶೆಟ್ಟಿ , ನಟ ದೊಡ್ಡಣ್ಣ , ನಟ ಸೃಜನ್ ಲೋಕೇಶ್ , ನಟಿ ತಾರಾ ಅನುರಾಧ ,ಉಡುಪಿಯಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ನಟಿ ಸುಧಾರಾಣಿ ,ನಟ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಕುಟುಂಬ ಸಮೇತ ಮತ ಚಲಾಯಿಸಿದರು. ಇದನ್ನೂ ವೀಕ್ಷಿಸಿ:  Today Horoscope: ಇಂದು ಸಂಕಷ್ಟ ಹರ ಚೌತಿ ಇದ್ದು, ಈ ವ್ರತದಿಂದ ದೊರೆಯುವ ಫಲಗಳೇನು ಗೊತ್ತಾ?

  • ಇಂಡಿಯಾ ಒಕ್ಕೂಟದ ಉದ್ದೇಶವೇ ಪರಿವಾರ, ಭ್ರಷ್ಟಾಚಾರ ಬಚಾವೋ: ಜೆಪಿ ನಡ್ಡಾ ವಾಗ್ದಾಳಿ
    on April 27, 2024 at 4:15 am

    ಕಲಬುರಗಿ(ಏ.27):   ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇಂಡಿಯಾ ಒಕ್ಕೂಟಕ್ಕೆ ಕೇವಲ ಎರಡೇ ಧ್ಯೇಯಗಳಿದ್ದು ಒಂದು ಪರಿವಾರ ಬಚಾವೋ. ಎರಡನೆಯದು ಭ್ರಷ್ಟಾಚಾರ ಬಚಾವೋ ಬಿಟ್ಟರೆ ಬೇರೆ ಯಾವುದೇ ಕಾರ್ಯಕ್ರಮಗಳಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಿಜೆಪಿ ನಡ್ಡಾ ದೂರಿದರು. ಕಲಬುರಗಿಯಲ್ಲಿ ಶುಕ್ರವಾರ ಗಣೇಶ ಮಂದಿರ ಬಳಿ ನಡೆದ ರೋಡ್‌ ಷೋದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಕಲ್ಬುರ್ಗಿಯ ಖರ್ಗೆಯವರು ಮತ್ತು ಇಂಡಿಯಾ ಒಕ್ಕೂಟವು ರಾಷ್ಟ್ರದ ಹಿತಾಸಕ್ತಿಗೆ ಮತ್ತು ಅಭಿವೃದ್ಧಿಗೆ ಗಮನಕೊಡದೆ ಈ ಚುನಾವಣೆಯಲ್ಲಿ ತಮ್ಮ ಪರಿವಾರವನ್ನು ರಕ್ಷಿಸುವ ಹಾಗೂ ಭ್ರಷ್ಟಾಚಾರವನ್ನು ರಕ್ಷಣೆ ಮಾಡುವ ಎರಡೇ ಎರಡು ಅಜೆಂಡಾದ ಮೇಲೆ ಚುನಾವಣೆ ಕಣಕ್ಕಿಳಿದಿದೆ ಒಂದು ಬಲಿಷ್ಠ ಮತ್ತು ಅಭಿವೃದ್ಧಿಯ ಸರಕಾರ ಅದು ಮೋದಿಯವರ ಕನಸಿನ ಸರ್ಕಾರವಾಗಿದೆ ಎಂದು ಹೇಳಿದರು. ಅನ್ನ ಕೊಟ್ಟ ಕಾಂಗ್ರೆಸ್ ಬೇಕಾ? ಬಡವರ ಹೊಟ್ಟೆ ಮೇಲೆ ಹೊಡೆದ ಬಿಜೆಪಿ ಬೇಕಾ? : ಸಿದ್ದರಾಮಯ್ಯ ಕಾಂಗ್ರೆಸ್ ಹಗರಣಗಳ ಸರಕಾರವಾಗಿದ್ದು ನೂರಾರು ಹಗರಣಗಳಲ್ಲಿ ಸಿಲುಕಿ ಕಾಂಗ್ರೆಸ್ಸಿನ ನಾಯಕರು ಹಾಗೂ ಇಂಡಿಯಾ ಒಕ್ಕೂಟದ ಮುಖಂಡರು ಒಂದೋ ಜೈಲಿನಲ್ಲಿದ್ದಾರೆ ಇಲ್ಲವೇ ಬೇಲ್ ನಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ನೂರಾರು ಹಗರಣಗಳನ್ನು ಮಾಡಿ ದೇಶವನ್ನು ಲೂಟಿ ಹೊಡೆದಿದೆ. ಗಣಿ ಹಗರಣ, ಆಗಸ್ಟ ವೆಸ್ಟ್ ಲ್ಯಾಂಡ್ ಹಗರಣ, 2ಜಿ, 3ಜಿ ಹಗರಣ ಕಾಮನ್ವೆಲ್ತ್ ಹಗರಣ, ಬಾಹ್ಯಾಕಾಶ ಹಗರಣ ಹೀಗೆ ನೂರಾರು ಹಗರಣಗಳನ್ನು ಮಾಡಿ ಭಾರತವನ್ನು ಕೊಳ್ಳೆ ಹೊಡೆದಿದ್ದಾರೆ. ಕಾಂಗ್ರೆಸ್ ಪಕ್ಷವು ಭೂಮಿ, ಆಕಾಶ ಪಾತಾಳ ಯಾವುದನ್ನು ಬಿಡದೆ ಲೂಟಿ ಮಾಡಿದ ಪಕ್ಷವಾಗಿದೆ. ಮಮತಾ ಸರ್ಕಾರವು ಶಿಕ್ಷಕರ ನೇಮಕಾತಿ ಹಗರಣ ಭೂಮಿ ಹಗರಣ, ಆಪ್ ಸರ್ಕಾರವು ಅಬಕಾರಿ ಹಗರಣ ಹೀಗೆ ಇಂಡಿಯಾ ಒಕ್ಕೂಟದ ಪಕ್ಷಗಳಾದ ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷ ಹಗರಣಗಳನ್ನು ನಡೆಸಿ ರಾಷ್ಟ್ರದ ಸಂಪತ್ತು ಕೊಳ್ಳೆ ಹೊಡೆದ ದುಷ್ಟ ಕೂಟವಾಗಿದೆ ಎಂದರು. ಅಖಿಲೇಶ್ ಯಾದವ್, ಪಿ.ಚಿದಂಬರಂ, ಮಮತಾ ಬ್ಯಾನರ್ಜಿ ಕೇಜ್ರಿ ವಾಲ್, ಹೀಗೆ ಎಲ್ಲರೂ ಒಂದೋ ಜೈಲಿನಲ್ಲಿದ್ದಾರೆ ಇಲ್ಲವೇ ಜಾಮೀನಿನ ಮೇಲೆ ಜೀವನ ನಡೆಸುತ್ತಿದ್ದಾರೆ. ಇಂತಹ ಭ್ರಷ್ಟ ಕೂಟವನ್ನು ಕಿತ್ತೆಸೆಯಲು ಈ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಮತ್ತೆ ಅಧಿಕಾರಕ್ಕೆ ತರಲು ನಿಮ್ಮೆಲ್ಲರ ಆಶೀರ್ವಾದ ಅಗತ್ಯ ಎಂದು ಹೇಳಿದರು. ಮೋದಿಯವರ ನೇತೃತ್ವದಲ್ಲಿ ಬಲಿಷ್ಠ ಸರಕಾರ ರಚನೆಯಾದ ಪರಿಣಾಮವಾಗಿ ರಾಮಮಂದಿರ ನಿರ್ಮಾಣ, ಪಾಕಿಸ್ತಾನ ಬಾಂಗ್ಲಾ ಆಫ್ಘಾನಿಸ್ತಾನದಿಂದ ಬಂದ ಭಾರತೀಯರಿಗೆ ಪೌರತ್ವ ನೀಡುವ ಸಿ ಎ ಎ ಕಾನೂನು ಜಾರಿ ಮಾಡಿ ಅಭಿವೃದ್ಧಿಯ ಮೈಲಿಗಲ್ಲು ಸ್ಥಾಪಿಸಿದೆ.ಕಾಂಗ್ರೆಸ್ ಕಾಲದಲ್ಲಿ ಪಾಕ್ ಪರ ಭಯೋತ್ಪಾದಕರು ಮತ್ತು ಕಾಶ್ಮೀರದ ಭಯೋತ್ಪಾದಕರನ್ನು ಪ್ರಧಾನಿ ಕಾರ್ಯಾಲಯಕ್ಕೆ ಕರೆಸಿ ಮಾತುಕತೆ ನಡೆಸಿದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂತಹ ಭಯೋತ್ಪಾದಕರಿಗೆ ತಕ್ಷಣದಲ್ಲಿ ಆಕ್ರಮಣ ನಡೆಸಿ ಪಾಠ ಕಲಿಸಿದರು. ಮೋದಿಯವರ ನೇತೃತ್ವದ ಬಲಿಷ್ಠ ಸರಕಾರ ಕೇಂದ್ರದಲ್ಲಿದ್ದರೆ ಸುಭದ್ರವಾಗಿರುತ್ತದೆ. ಕಾಂಗ್ರೆಸ್ ಅಸಹಾಯಕ ಆಡಳಿತ ಅವಧಿಯಲ್ಲಿ ಭಾರತವು ಭಯೋತ್ಪಾದಕರಿಗೆ ಮಣಿದಿತ್ತು. ಈಗ ಭಾರತವು ಜಗತ್ತಿನ ಆರ್ಥಿಕ ವ್ಯವಸ್ಥೆಯಲ್ಲಿ ಐದನೇ ಸ್ಥಾನದಲ್ಲಿದ್ದು ಇನ್ನೊಮ್ಮೆ ಪ್ರಧಾನಮಂತ್ರಿ ಮೋದಿ ಅಧಿಕಾರ ನಡೆಸಿದರೆ ಮೂರನೇ ಸ್ಥಾನಕ್ಕೇರುವುದು ಖಚಿತ. ಕರೋನಾ ಸಂದರ್ಭದಲ್ಲಿ ಭಾರತವು ವಿಶ್ವಕ್ಕೆ ಔಷಧಿ ಪೂರೈಸಿ ಮಾನವೀಯತೆ ಮೆರೆದ ಮಾದರಿ ರಾಷ್ಟ್ರವಾಗಿದೆ. ಆಟೋಮೊಬೈಲ್ ಉತ್ಪಾದನೆಯಲ್ಲಿ ಭಾರತವು ಇದೀಗ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದ್ದು ಜಪಾನ್ ಗೆ ಸರಿಸಾಟಿಯಾಗಿ ನಿಂತಿದೆ. ಈ ಹಿಂದೆ ಆಟಿಕೆ ಗೊಂಬೆಗಳು ಹಾಗೂ ಮೊಬೈಲ್ ಗಳು ಚೈನಾ ಉತ್ಪನ್ನಗಳಾಗಿದ್ದುವು. ಇದೀಗ ಭಾರತವು ಇವುಗಳನ್ನು ಉತ್ಪಾದನೆ ಮಾಡಿ ಮುಂಚೂಣಿಯಲ್ಲಿ ನಿಂತಿದೆ. ಮೇಡ್ ಇನ್ ಜಪಾನ್, ಮೇಡ್ ಇನ್ ಕೊರಿಯಾ, ಮೇಡ್ ಇನ್ ಚೈನಾ ತೊಲಗಿ ಈಗ ಮೇಡ್ ಇನ್ ಇಂಡಿಯಾ ಅಥವಾ ಮೇಡ್ ಇನ್ ಭಾರತ ಆಗಿ ಬದಲಾಗಿದೆ. ಇದು ಭಾರತದ ದಿಟ್ಟ ಸಾಧನೆಯಾಗಿದೆ ಎಂದರು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ರೈಲ್ವೆ ಲೈನ್ ಅಭಿವೃದ್ಧಿ ವಿಮಾನ ನಿಲ್ದಾಣಗಳ ಅಭಿವೃದ್ಧಿಯಿಂದ ದೇಶದಲ್ಲಿ ಮೂಲಭೂತ ಸೌಲಭ್ಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿದೆ. ಇದರಿಂದಾಗಿ ಕಲ್ಬುರ್ಗಿಯಲ್ಲೂ ವಿಮಾನ ನಿಲ್ದಾಣ ನಿರ್ಮಾಣಗೊಂಡು ಎರಡು ವಿಮಾನಗಳು ನಿತ್ಯ ಹಾರಾಟ ನಡೆಸುತ್ತಿದೆ.ದೇಶದಲ್ಲಿ ಇಂಜಿನಿಯರಿಂಗ್ ಕಾಲೇಜ್, ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡಿ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ದೀನದಲಿತ, ಶೋಷಿತ, ದಲಿತ ವಂಚಿತರ, ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಮೋದಿಯವರು ಕಾರ್ಯಾನುಷ್ಠಾನಗೊಳಿಸಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿ ಮಾಡಿ ಕೃಷಿಕರಿಗೆ ನೆರವಾಗಿದ್ದಾರೆ. ಇನ್ನೊಂದು ಬಾರಿ ನರೇಂದ್ರ ಮೋದಿಯವರು ಪ್ರಧಾನಿ ಆದರೆ ದೇಶದಲ್ಲಿ ಮೂರು ಕೋಟಿ ಮನೆ ನಿರ್ಮಾಣವಾಗಲಿದೆ. 70 ವರ್ಷಗಳಿಗಿಂತಲೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ವರ್ಷಕ್ಕೆ ಐದು ಲಕ್ಷ ರೂಪಾಯಿ ವರೆಗೆ ಉಚಿತ ಔಷಧಿ ನೀಡಲಾಗುವುದು. ಗರೀಬ್ ಅನ್ನ ಕಲ್ಯಾಣ ಯೋಜನೆ ಹಸಿವು ಮುಕ್ತ ಯೋಜನೆಯಾಗಿದೆ. ದೇಶದ 25 ಕೋಟಿ ಜನರು ಬಡತನ ರೇಖೆಗಿಂತ ಮೇಲಿದ್ದಾರೆ. ಮೋದಿಯವರ ವಿಕಸಿತ ಭಾರತ ಸಂಕಲ್ಪ ಪೂರ್ಣಗೊಳ್ಳಲು ಈ ಬಾರಿ ಮತ್ತೆ ಮೇ 7ನೇ ತಾರೀಕಿಗೆ ಕಮಲದ ಗುರುತಿನ ಬಟನ್ ಒತ್ತಿ ಉಮೇಶ್ ಜಾಧವ್ ಅವರನ್ನು ದಿಲ್ಲಿಗೆ ಕಳುಹಿಸುವುದರ ಮೂಲಕ ಮೋದಿಯವರಿಗೆ ಶಕ್ತಿ ತುಂಬಬೇಕಾಗಿದೆ ಎಂದು ಅವರು ಮನವಿ ಮಾಡಿದರು. ಇಂದಿನ ರೋಡ್ ಶೋದಲ್ಲಿ ಬಿಜೆಪಿಯ ಮಹಾನ್ ಶಕ್ತಿ ಪ್ರದರ್ಶನವಾಗಿದ್ದು ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿರುವುದು ಸಂತೋಷ ತಂದಿದೆ. ಇದೇ ಉತ್ಸಾಹ, ಹುಮ್ಮಸ್ಸು ಮೇ 7ನೇ ತಾರೀಕು ಮತದಾನ ದಿನ ತೋರಿಸಿ ಮತ್ತೊಮ್ಮೆ ಕೇಂದ್ರದಲ್ಲಿ ಬಲಿಷ್ಠ ಸರಕಾರ ರಚನೆಗೆ ಎಲ್ಲರೂ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಹೇಳಿದರು. ಕೇಂದ್ರದಲ್ಲಿ ಮತ್ತೊಮ್ಮೆ ಮೋದಿ ಸರಕಾರ ಹಾಗೂ 400 ಸ್ಥಾನಗಳೊಂದಿಗೆ ಬಲಿಷ್ಠ ಸರಕಾರ ರಚನೆಯಾಗಲು ಕೈ ಜೋಡಿಸಬೇಕು ಎಂದು ಹೇಳಿದರು. ಕಾಂಗ್ರೆಸ್‌ಗೆ ಮತ ಹಾಕಲು ಮನಸಿಲ್ಲದಿದ್ರೆ ಕನಿಷ್ಟ ಪಕ್ಷ ನಾನು ಸತ್ತಾಗ ಮಣ್ಣು ಹಾಕಲು ಬನ್ನಿ: ಖರ್ಗೆ ಭಾವುಕ ನುಡಿ ಬೃಹತ್ ರೋಡ್ ಶೋ ಪೂರ್ವಭಾವಿಯಾಗಿ ಗಣೇಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಹಿಳೆಯರು ಯುವಕರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ತೆರೆದ ವಾಹನದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರನ್ನು ಗಣೇಶ ಮಂದಿರದಿಂದ ಸರಾಫ್ ಬಜಾರ್ ಮೂಲಕ ಸೂಪರ್ ಮಾರ್ಕೆಟ್ ವರೆಗೆ ಕರೆತಂದು ಸಾರ್ವಜನಿಕ ಸಭೆ ನಡೆಸಲಾಯಿತು. ನಡ್ದಾ ಅವರ ರೋಡ್ ಶೋ ವಾಹನಕ್ಕೆ ಭಾರೀ ಗಾತ್ರದ ಮಾಲೆಯನ್ನು ಕ್ರೇನ್ ಮೂಲಕ ಹಾಕಿ ಭವ್ಯ ಸ್ವಾಗತ ಕೋರಲಾಯಿತು. ರೋಡ್ ಶೋ ಕ್ರಮದಲ್ಲಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್ ವಿಧಾನ ಪರಿಷತ್ ಸದಸ್ಯರಾದ ಬಿ.ಜಿ ಪಾಟೀಲ್, ಕಲ್ಬುರ್ಗಿ ಲೋಕಸಭಾ ಬಿಜೆಪಿ ಚುನಾವಣಾ ಉಸ್ತುವಾರಿ ರಘುನಾಥ ಮಲ್ಕಾಪುರೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಂದು ಪಾಟೀಲ್ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ಶಶಿಲ್ ಜಿ ನಮೋಶಿ, ನಿತಿನ್ ಗುತ್ತೇದಾರ್ ಮತ್ತಿತರ ಅನೇಕರ ನಾಯಕರು ಭಾಗವಹಿಸಿದ್ದರು.

  • ಸಿಎಂ ಸಿದ್ದರಾಮಯ್ಯ ಮಾತು ನೋವು ತಂದಿದೆ: ಕೆ.ಎಸ್‌.ಈಶ್ವರಪ್ಪ
    on April 27, 2024 at 4:14 am

    ಶಿವಮೊಗ್ಗ (ಏ.27): ನಮ್ಮ ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಎಲ್ಲ ಸವಲತ್ತು ಕೊಡುತ್ತೇವೆ. ಸಲವತ್ತು ಕೊಡುವುದಕ್ಕೆ ಹಿಂಜರಿಯಲ್ಲ ಎಂದು ಸಿಎಂ ಸಿದ್ದರಾಮಯ್ಯ ನೀಡಿರುವ ಹೇಳಿಕೆ ನನಗೆ ನೋವು ತಂದಿದೆ ಎಂದಿದೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ವಜನಾಂಗ ಶಾಂತಿ ತೋಟ ನಮ್ಮ ಗುರಿ ಎಂದು ಕಾಂಗ್ರೆಸ್‌ನವರು ಭಾಷಣ ಬಿಗಿಯುತ್ತಾರೆ. ಇಲ್ಲಿ ಒಂದು ಧರ್ಮ ಓಲೈಕೆ ಮಾಡುತ್ತಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಎಲ್ಲ ಸವಲತ್ತು ಕೊಡುತ್ತೇವೆ ಎನ್ನುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಹಿಂದು ಯುವತಿ ನೇಹಾ ಹತ್ಯೆಯಾದಾಗ ಸಿಎಂ ಹಾಗೂ ಗೃಹ ಸಚಿವರು ಇದು ಲವ್‌ ಜಿಹಾದ್‌ ಅಲ್ಲ, ವೈಯಕ್ತಿಕ ಕೊಲೆ ಎಂದು ಹಗುರವಾಗಿ ಹೇಳಿಕೆ ಕೊಟ್ಟರು. ಪ್ರತಿಭಟನೆ ಬಳಿಕ ಸಿಐಡಿ ತನಿಖೆ ಕೊಟ್ಟಿದ್ದಾರೆ. ವರದಿ ಕೊಡುವುದಕ್ಕಿಂತ ಮುನ್ನವೇ ಸಿಎಂ, ಸಚಿವರು ಈ ರೀತಿ ಹೇಳಿಕೆ ಕೊಟ್ಟರೆ, ಸಿಐಡಿ ಸಂಸ್ಥೆ ಇದಕ್ಕೆ ವ್ಯತಿರಿಕ್ತ ಹೇಳಿಕೆ ಹೇಗೆ ಕೊಡುತ್ತದೆ. ಹೀಗಾಗಿ ಈ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು. ಕಾಂಗ್ರೆಸ್ ಗ್ಯಾರಂಟಿ ತಾತ್ಕಾಲಿಕ, ಚುನಾವಣಾ ಗಿಮಿಕ್ಸ್‌: ಬಿ.ವೈ.ವಿಜಯೇಂದ್ರ ಸಚಿವ ಸಂತೋಷ್‌ ಲಾಡ್‌ ನೇಹಾ ಮನೆ ಪ್ರವಾಸಿ ತಾಣವಾಗಿದೆ ಎಂದು ಹೇಳಿಕೆ ಕೊಟ್ಟರು. ಈಗ ಸಿಎಂ ಸಿದ್ದಾರಮಯ್ಯ ಹೋಗಿದ್ದಾರೆ. ಅವರೇನೂ ಪಿಕ್‌ನಿಕ್‌ ಹೋಗಿದ್ದಾರಾ? ಹಿಂದು ಸಮಾಜದ ಜಾಗೃತಿ ಹೆಚ್ಚಾದ ಬಳಿಕ ಚುನಾವಣೆಯಲ್ಲಿ ನಮಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈಗ ಭೇಟಿ ಕೊಡುವ ಪ್ರಯತ್ನ ಮಾಡಿದ್ದಾರೆ. ಸರ್ವಜನಾಂಗ ಶಾಂತಿ ತೋಟ ನಮ್ಮ ಗುರಿ ಎನ್ನುವ ನೀವು ಯಾಕೆ ಮುಸ್ಲಿಂ ತುಷ್ಟೀಕರಣ ಮಾಡುತ್ತಿದ್ದೀರಿ, ಇದನ್ನು ಮೊದಲು ಬಿಡಿ ಎಂದು ಕಾಂಗ್ರೆಸ್‌ ನಾಯಕರಿಗೆ ಕುಟುಕಿದರು. ಆದಷ್ಟು ಬೇಗಾ ರಾಹುಲ್‌ ಗಾಂಧಿ ಶಿವಮೊಗ್ಗಕ್ಕೆ ಬರಲಿ: ರಾಹುಲ್‌ ಗಾಂಧಿ ಎಲ್ಲಿಲ್ಲಿ ಕಾಲಿಟ್ಟದ್ದಾರೋ ಅಲ್ಲೆಲ್ಲ ಸೋತಿದ್ದಾರೆ. ಅವರು ಶಿವಮೊಗ್ಗಕ್ಕೆ ಬರಬೇಕು ಎಂಬುದು ನನ್ನ ಆಸೆ. ಆದಷ್ಟು ಬೇಗಾ ಅವರು ಬರಬೇಕು ಎಂದು ವ್ಯಂಗ್ಯವಾಡಿದರು. ಇನ್ನು ಮತದಾರರನ್ನು ಸೆಳೆಯಲು ಕಾಂಗ್ರೆಸ್‌ ಅಭ್ಯರ್ಥಿ ಪರ ನಟರನ್ನು ಕರೆಸುತ್ತಿದ್ದಾರೆ. ನಟರ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ, ನಟರನ್ನು ನೋಡಲು ಜನರನ್ನು ಬರುತ್ತಾರೆ ವಿನಾ: ಅವರು ಬಂದ ಮಾತ್ರಕ್ಕೆ ಮತ ಕೊಡುವುದಿಲ್ಲ ಎಂದರು. ರಾಜ್ಯದಲ್ಲಿ ಅಷ್ಟೇ ಅಲ್ಲ ದೇಶದಲ್ಲೂ ಬಿಜೆಪಿ ಹೆಚ್ಚು ಮತಗಳು ಬರುತ್ತಿದ್ದೇವೆ ಎಂದರೆ ಅದಕ್ಕೆ ನರೇಂದ್ರ ಮೋದಿ ಕಾರಣ.  ರಾಜ್ಯದಲ್ಲೂ ಮೋದಿ ಮುಖ ನೋಡಿಕೊಂಡು ಹೆಚ್ಚಿನ ಜನ ಮತ ಕೊಡುತ್ತಿದ್ದಾರೆ. ಒಂದು ರಾಜಕೀಯ ಪಕ್ಷ ಅಣ್ಣಮಲೈ ಅವರನ್ನು ಕರೆಸಿ ಪ್ರಚಾರ ಮಾಡಿದ್ದು ತಪ್ಪಲ್ಲ. ಆದರೆ, ಅವರನ್ನು ನೋಡಲು ಜನ ಹೋಗಲಿಲ್ಲ. ತಮಿಳು ಬೆಂಬಲ ಅವರಿಗೆ ಇಲ್ಲ ಎಂಬುದು ಬಿಜೆಪಿಗೆ ಗೊತ್ತಾಗಿದೆ. ನನ್ನ ಜೀವನದಲ್ಲಿ ಪಕ್ಷದ ನಾಯಕರು ಹೇಳಿದ ಯಾವ ಮಾತನ್ನು ನಾನು ಮೀರಿಲ್ಲ. ಅವತ್ತು ಸಂಗೊಳ್ಳಿ ರಾಯಣ್ಣ ಬ್ರೀಗೇಡ್‌ ಬಿಟ್ಟಿದ್ದರ ಪರಿಣಾಮ ಹಿಂದುಳಿದವರು, ದಲಿತರು ಎಲ್ಲ ಕಾಂಗ್ರೆಸ್‌ಗೆ ಹೋಗಿದ್ದಾರೆ ಎಂದು ಟೀಕಿಸಿದರು.  8 ವಿಧಾನಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ ಸೋಲುತ್ತದೆ ಎಂದು ಕಾಂಗ್ರೆಸ್‌ ನಾಯಕರೇ ಹೇಳುತ್ತಿದ್ದಾರೆ.  ಹಾಗಾಗಿ ನಮ್ಮ ಓಟನ್ನು ಕಾಂಗ್ರೆಸ್‌ಗೆ ಕೊಡಲ್ಲ, ಬಿಜೆಪಿಗೂ ಓಟ್‌ ಹಾಕಲ್ಲ. ನಿಮಗೆ ಕೊಡುತ್ತೇವೆ ಎಂದು ಕಾಂಗ್ರೆಸ್‌ ಕಾರ್ಯಕರ್ತರು ಹೇಳುತ್ತಿದ್ದಾರೆ. ತಮಿಳು ನಾಯಕರು ಬಿಜೆಪಿ ಸೇರಿದ್ದಾರೆ ಎಂಬುದು ಶುದ್ಧ ಸುಳ್ಳು. ಅಣ್ಣಮಲೈ ಅವರನ್ನು ಭೇಟಿ ಯಾಗಿದ್ದಾರೆ ಹೊರೆತು ಅವರು ಎಂದೂ ಬಿಜೆಪಿ ಅಭ್ಯರ್ಥಿ ಜೊತೆ ಹೋಗಿಲ್ಲ. ತಮಿಳು ಸಮಾಜದವರು ಎಂದಿಗೂ ನನಗೆ ಬೆಂಬಲ ನೀಡುತ್ತಾ ಬಂದಿದ್ದಾರೆ, ಮುಂದೆಯೂ ನೀಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು ಪತ್ರಿಕಾಗೋಷ್ಠಿಯಲ್ಲಿ ತಮಿಳು ಸಮಾಜ ಮುಖಂಡರಾದ ಗೋಪಾಲ್‌, ಮಂಜುನಾಥ್‌, ರಾಜೇಂದ್ರ, ಮಾಜಿ ಮೇಯರ್‌ ಸುವರ್ಣ ಶಂಕರ್‌, ಲತಾ ಗಣೇಶ್‌, ಆರತಿ ಆ.ಮ.ಪ್ರಕಾಶ್‌, ವಿಶ್ವಾಸ್‌ , ರಾಜಣ್ಣ, ವಿದ್ಯಾ ಪ್ರೇಮ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಗೆಲುವು ನನ್ನದೇ, 2ನೇ ಸ್ಥಾನಕ್ಕೆ ಬಿಜೆಪಿ-ಕಾಂಗ್ರೆಸ್ ಪೈಪೋಟಿ: ಕೆ.ಎಸ್‌.ಈಶ್ವರಪ್ಪ ಶಿಕಾರಿಪುರ ತಾಲೂಕಿನ ಹಿತ್ತಲ ಗ್ರಾಮದಲ್ಲಿ ನಿರೀಕ್ಷೆಗೂ ಮೀರಿ ಜನ ಸೇರಿ ಬೃಹತ್‌ ಸಮಾವೇಶ ನಡೆಯಿತು. ಸಮಾವೇಶದಲ್ಲಿ ವೀರಶೈವ, ಕುರುಬ, ಲಂಬಾಣಿ, ದಲಿತ, ಹಿಂದುಳಿದ ಸಮಾಜ ಸೇರಿ ಎಲ್ಲ ಸಮಾಜದಿಂದ ದೊಡ್ಡ ಸಂಖ್ಯೆ ಸೇರಿದ್ದರು. ಇದು ಶಿಕಾರಿಪುರ ತಾಲೂಕಿನಲ್ಲಿ ನಡೆದ 3ನೇ ಸಾರ್ವಜನಿಕ ಸಭೆ. ಮುಂದೆ ಏ.27ರಂದು ಆನಂದಪುರ, ಸಾಗರ, ಬೃಹತ್‌ ಸಮಾವೇಶ, ಏ.28ರಂದು ಸಂಜೆ 5ಕ್ಕ್ಕೆ ಶಂಕರಘಟ್ಟ ಭಾಗದಲ್ಲಿ ಸಮಾವೇಶ, ಏ.29ರಂದು ಸೋಮವಾರ ತೋಗರ್ಸಿ, ಶಿರಾಳಕೊಪ್ಪ ಭಾಗದಲ್ಲೂ ದೊಡ್ಡ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಏ.30ರಂದು ಬೆಳಗಿನಿಂದ ಸಂಜೆವರೆಗೆ ತೀರ್ಥಹಳ್ಳಿ ತಾಲೂಕಿನ ಎಲ್ಲ ಜಿಪಂ ಕ್ಷೇತ್ರದಲ್ಲಿ ಸಮಾವೇಶ ನಡೆಯಲಿದೆ. ಮೇ 1ರಂದು ಬೆಳಗ್ಗೆಯಿಂದ ಸಂಜೆವರಗೆ ಬೈಂದೂರಿನಲ್ಲಿ ಸಮಾವೇಶ ನಡೆಯಲಿದೆ ಎಂದು ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

  • ಅಬ್ಬಬ್ಬಾ..ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾಗಿಂತಲೂ ದುಬಾರಿ ಮುಕೇಶ್ ಅಂಬಾನಿಯ ಆಂಟಿಲಿಯಾ!
    on April 27, 2024 at 4:09 am

    ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಂಬಾನಿ ಫ್ಯಾಮಿಲಿ ಸದಸ್ಯರು ಭವ್ಯವಾದ 27 ಅಂತಸ್ತಿನ ಕಟ್ಟಡ ಆಂಟಿಲಿಯಾದಲ್ಲಿ ವಾಸಿಸುತ್ತಾರೆ. ಕೋಟಿ ಕೋಟಿ ನೀರಿನಂತೆ ಖರ್ಚು ಮಾಡಿರೋ ಈ ಬಂಗಲೆ, ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾಗಿಂತಲೂ ದುಬಾರಿ ಅನ್ನೋದು ನಿಮ್ಗೆ ಗೊತ್ತಿದ್ಯಾ? ಮುಕೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅಂಬಾನಿ ಫ್ಯಾಮಿಲಿ ಸದಸ್ಯರು ಬರೋಬ್ಬರಿ 15,000 ಕೋಟಿ ಮೌಲ್ಯದ ಬಹುಮಹಡಿ ಬಂಗಲೆ ಆಂಟಿಲಿಯಾದಲ್ಲಿ ವಾಸಿಸುತ್ತಾರೆ. ಆಂಟಿಲಿಯಾ ಭೂಮಿಯ ಮೇಲಿರುವ ಅತ್ಯಂತ ದುಬಾರಿ ಖಾಸಗಿ ನಿವಾಸವಾಗಿದೆ.  ಮುಕೇಶ್ ಅಂಬಾನಿ-ನೀತಾ ಅಂಬಾನಿ, ಅನಂತ್, ಆಕಾಶ್, ಶ್ಲೋಕಾ, ಪೃಥ್ವಿ ಮತ್ತು ವೇದಾ ಅಂಬಾನಿ ಅವರನ್ನು ಒಳಗೊಂಡಿರುವ ಅಂಬಾನಿ ಕುಟುಂಬವು ಈ 27 ಅಂತಸ್ತಿನ ಕಟ್ಟಡದಲ್ಲಿ ವಾಸಿಸುತ್ತಿದೆ. ಬರೋಬ್ಬರಿ 4 ಲಕ್ಷ ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಭವ್ಯವಾದ 27 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 15000 ಕೋಟಿ ರೂ. ಖರ್ಚು ಮಾಡಲಾಗಿದೆ.   ಪರ್ಕಿನ್ಸ್ & ವಿಲ್ ಮತ್ತು ಹಿರ್ಷ್ ಬೆಡ್ನಾರ್ ಅಸೋಸಿಯೇಟ್ಸ್ ಎಂದಬ ಎರಡು ಅಮೇರಿಕನ್ ಸಂಸ್ಥೆಗಳು ಆಂಟಿಲಿಯಾ ವಿನ್ಯಾಸ ಮತ್ತು ನಿರ್ಮಾಣವನ್ನು ನೋಡಿಕೊಂಡವು. ಇದರೊಳಗೆ ಸ್ವಿಮ್ಮಿಂಗ್‌ ಪೂಲ್‌, ಸ್ಪಾ, ಮಂದಿರ, ಹಾಸ್ಪಿಟಲ್, ಬಾಲ್ ರೂಂ, ಥಿಯೇಟರ್‌, ಬಾರ್‌ ಹೀಗೆ ಎಲ್ಲಾ ವ್ಯವಸ್ಥೆಯೂ ಇದೆ. ಆಂಟಿಲಿಯ 6ನೇ ಮಹಡಿಯಲ್ಲಿ ಗ್ಯಾರೇಜ್ ಇದ್ದು, ಇದರಲ್ಲಿ ಸುಮಾರು 168 ಕಾರುಗಳನ್ನು ಏಕಕಾಲದಲ್ಲಿ ನಿಲ್ಲಿಸಬಹುದಾಗಿದೆ. ಈ ಕಾರುಗಳನ್ನು ಸರ್ವೀಸ್ ಮಾಡಲು 7ನೇ ಮಹಡಿಯಲ್ಲಿ ಸರ್ವೀಸ್ ಸ್ಟೇಷನ್ ಕೂಡ ಸ್ಥಾಪಿಸಲಾಗಿದೆ. ಮುಖೇಶ್ ಅಂಬಾನಿ ಮನೆಯಲ್ಲಿ 9 ಲಿಫ್ಟ್‌ಗಳನ್ನು ಹೊಂದಿದೆ ಆಂಟಿಲಿಯಾದ ಸಂಪೂರ್ಣ ಕೆಲಸ ನಿರ್ವಹಿಸಲು ಅಂಬಾನಿ ಸುಮಾರು 600 ಜನ ಸಿಬ್ಬಂದಿಯನ್ನು ನೇಮಿಸಿದ್ದಾರೆ. ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ 828 ಮೀಟರ್ ಎತ್ತರದಲ್ಲಿ 163 ಮಹಡಿಗಳನ್ನು ಹೊಂದಿದೆ ಮತ್ತು $1.5 ಬಿಲಿಯನ್ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದು ಸುಮಾರು 12500 ಕೋಟಿ ರೂ. ಆಗಿದೆ. ಅಂದರೆ ಆಂಟಿಲಿಯಾ, ವೆಚ್ಚದಲ್ಲಿ ಬುರ್ಜ್ ಖಲೀಫಾವನ್ನು ಮೀರಿಸಿದೆ ಎಂಬುದು ಕುತೂಹಲಕಾರಿಯಾಗಿದೆ.  ಬುರ್ಜ್ ಖಲೀಫಾವನ್ನು ಪ್ರಸಿದ್ಧ ನಿರ್ಮಾಣ ಎಂಜಿನಿಯರಿಂಗ್ ಕಂಪನಿ ‘ಸ್ಕಿಡ್‌ಮೋರ್, ಓವಿಂಗ್ಸ್ ಮತ್ತು ಮೆರಿಲ್’ ನಿರ್ಮಿಸಿದೆ ಮತ್ತು ಆಡ್ರಿಯನ್ ಸ್ಮಿತ್ ನೇತೃತ್ವದ ತಂಡವು ವಿನ್ಯಾಸಗೊಳಿಸಿದೆ. ಆಂಟಿಲಿಯಾ ನಿರ್ಮಾಣವು 2004ರಲ್ಲಿ ಪ್ರಾರಂಭವಾಯಿತು ಮತ್ತು ಆರು ವರ್ಷಗಳ ನಂತರ ಪೂರ್ಣಗೊಂಡಿತು. ಬರೋಬ್ಬರಿ 15000 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಆಂಟಿಲಿಯಾ 8 ರಿಕ್ಟರ್ ಮಾಪಕ ಭೂಕಂಪವನ್ನು ಸುಲಭವಾಗಿ ತಡೆದುಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.  2011 ರಲ್ಲಿ, ಮುಖೇಶ್ ಅಂಬಾನಿ ತಮ್ಮ ಕುಟುಂಬದೊಂದಿಗೆ ‘ಆಂಟಿಲಿಯಾ’ಕ್ಕೆ ಸ್ಥಳಾಂತರಗೊಂಡರು, ಅಂದಿನಿಂದ ಅವರು ಇಲ್ಲಿಯೇ ವಾಸಿಸುತ್ತಿದ್ದಾರೆ.

  • Today Horoscope: ಇಂದು ಸಂಕಷ್ಟ ಹರ ಚೌತಿ ಇದ್ದು, ಈ ವ್ರತದಿಂದ ದೊರೆಯುವ ಫಲಗಳೇನು ಗೊತ್ತಾ?
    on April 27, 2024 at 4:03 am

    ಶ್ರೀ ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಶನಿವಾರ, ತೃತೀಯ ತಿಥಿ, ಜ್ಯೇಷ್ಠ ನಕ್ಷತ್ರ. ಈ ದಿನ ಸಂಕಷ್ಟ ಹರ ಚೌತಿ ಇದೆ. ಈ ವ್ರತವನ್ನು ಅನುಸರಿಸುವವರಿಗೆ ಗಣಪತಿ ಅನುಗ್ರಹವಿರಲಿದ್ದು, ರೋಗಗಳು ಬರುವುದಿಲ್ಲ. ಗಣಪತಿ ಆರಾಧನೆಯಿಂದ ಸರ್ವರು ನಿಮ್ಮ ವಶದಲ್ಲಿರುತ್ತಾರೆ. ಮಿಥುನ ರಾಶಿಯವರಿಗೆ ಇಂದು ಲಾಭದ ದಿನವಾಗಿದೆ. ವೃತ್ತಿಯಲ್ಲಿ ಅನುಕೂಲ. ಸಾಲದಿಂದ ಮುಕ್ತಿ. ಆರೋಗ್ಯದಲ್ಲಿ ಚೇತರಿಕೆ. ಉತ್ತಮರ ಸಹಕಾರ. ಗಣಪತಿ ಪ್ರಾರ್ಥನೆ ಮಾಡಿ. ಇದನ್ನೂ ವೀಕ್ಷಿಸಿ: ಮಕ್ಕಳಿಗೆ ಜ್ಯೂಸ್ ಕೊಡೋದು ಒಳ್ಳೆಯದಾ, ಹಣ್ಣು ಕೊಡೋದು ಬೆಸ್ಟಾ?

  • ಕಾಂಗ್ರೆಸ್ ಗ್ಯಾರಂಟಿ ತಾತ್ಕಾಲಿಕ, ಚುನಾವಣಾ ಗಿಮಿಕ್ಸ್‌: ಬಿ.ವೈ.ವಿಜಯೇಂದ್ರ
    on April 27, 2024 at 3:56 am

    ಸೊರಬ (ಏ.27): ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ತಾತ್ಕಾಲಿಕವಾಗಿದ್ದು. ಮುಂದಿನ ದಿನಗಳಲ್ಲಿ ಈ ಯೋಜನೆಗಳು ಮುಂದುವರೆಯುವುದಿಲ್ಲ. ಕೇವಲ ಚುನಾವಣಾ ಗಿಮಿಕ್ಸ್‌ಗಾಗಿ ರೂಪಿತವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಪಟ್ಟಣದ ಕೆಇಬಿ ಕಾಲೋನಿಯಿಂದ ತಾಲೂಕು ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿ ಉದ್ಘಾಟಿಸಿ ನಂತರ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಪರವಾಗಿ ಮತಯಾಚಿಸಿ ಮಾತನಾಡಿದರು. ಈಗಾಗಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ. ಚುನಾವಣೆ ನಂತರ ಸರ್ಕಾರಿ ನೌಕರರಿಗೆ ಸಂಬಳ ನೀಡಲು ಹಣ ಇಲ್ಲದ ದುಸ್ಥಿತಿ ಎದುರಾಗಲಿದೆ. ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರವಿದೆ. ಹಾಗಾಗಿ ಮತದಾರರು ಕಾಂಗ್ರೆಸ್‌ನ ಯಾವುದೇ ಗ್ಯಾರಂಟಿಗೆ ಮರುಳಾಗದೇ ದೇಶದ ಭವಿಷ್ಯದ ದೃಷ್ಠಿಯಿಂದ ಮತ್ತು ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಮೋದಿವರನ್ನು ಬೆಂಬಲಿಸುವ ಮೂಲಕ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕರನೀಡಿದರು. ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ನೀಡುವ ಕಾಂಗ್ರೆಸ್ ಸರ್ಕಾರ ರಾಜ್ಯದ ಬಡ ಜನತೆಗೆ ೧ ಕೆಜಿ ಅಕ್ಕಿ ಕೊಡಲು ಸಾಧ್ಯವಾಗಿಲ್ಲ. ಪಡಿತರಿಗೆ ಈಗ ನೀಡುತ್ತಿರುವ ೫ ಕೆಜಿ ಅಕ್ಕಿ ಕೇಂದ್ರ ಸರ್ಕಾರದ್ದು. ಎಸ್ಸಿ/ಎಸ್ಟಿಗೆ ನ್ಯಾಯುತವಾಗಿ ನೀಡಬೇಕಿದ್ದ ಅನುದಾನದ ಹಣ ಬೇರೆ ಯೋಜನೆಗಳಿಗೆ ಬಳಸಿ ದಲಿತರು ಮತ್ತು ಹಿಂದುಳಿದ ವರ್ಗಗಳಿಗೆ ವಂಚಿಸುತ್ತಿದೆ ಎಂದು ಆರೋಪಿಸಿದರು. ಗೆಲುವು ನನ್ನದೇ, 2ನೇ ಸ್ಥಾನಕ್ಕೆ ಬಿಜೆಪಿ-ಕಾಂಗ್ರೆಸ್ ಪೈಪೋಟಿ: ಕೆ.ಎಸ್‌.ಈಶ್ವರಪ್ಪ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆಯೇ ಹೊರತು ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕಂಡಿಲ್ಲ. ಸೊರಬ ತಾಲೂಕಿನಲ್ಲಿ ನೀರಾವರಿ ಯೋಜನೆಗಳಿಗೆ ಒತ್ತು ನೀಡಿದ್ದ ಯಡಿಯೂರಪ್ಪನವರು. ಜಿಲ್ಲೆ ಮತ್ತು ತಾಲೂಕು ಅಭೂತಪೂರ್ವ ಅಭಿವೃದ್ಧಿ ಕಾಣಲು ಬಿಜೆಪಿ ಸರ್ಕಾರವೇ ಬರಬೇಕಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಶಾಸಕರು ಪುಕ್ಕಟ್ಟೆ ಉದ್ದುದ್ದ ಭಾಷಣ ಬೀಗಿಯುತ್ತಾರೆಯೇ ಹೊರತು ಅಭಿವೃದ್ಧಿಯಲ್ಲಿ ಶೂನ್ಯ ಸಂಪಾದನೆಯಲ್ಲಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೆಸರು ಹೇಳದೇ ತರಾಟೆಗೆ ತೆಗೆದುಕೊಂಡರು. ಕಳೆದ ೧೦ ವರ್ಷಗಳ ಅವಧಿಯಲ್ಲಿ ಅಭಿವೃದ್ಧಿ ದೃಷ್ಠಿಯಿಂದ ತಂದೆ ಯಡಿಯೂರಪ್ಪರನ್ನು ೧೦ ಹೆಜ್ಜೆ ಹಿಂದಿಕ್ಕಿ ಮುನ್ನಡೆದಿದ್ದಾರೆ. ಈಗಾಗಲೇ ವಿಮಾನ ನಿಲ್ದಾಣ ಪ್ರಾರಂಭಗೊಂಡಿದೆ. ಜಿಲ್ಲೆಗೆ ಪ್ರತಿನಿತ್ಯ ೨೦ ರಿಂದ ೨೫ ರೈಲುಗಳು ಆಗಮಿಸಿ, ನಿರ್ಗಮಿಸುತ್ತವೆ. ರಾಘವೇಂದ್ರ ಅವರು ರೈಲ್ವೆ ಯೋಜನೆಯನ್ನು ಶಿಕಾರಿಪುರದ ಮೂಲಕ ಆನವಟ್ಟಿ, ರಾಣೆಬೆನ್ನೂರು ತಾಲೂಕಿಗೆ ಜೋಡಿಸುವ ಕನಸ್ಸು ಹೊತ್ತಿದ್ದು, ಈ ಮೂಲಕ ವಾಣಿಜ್ಯ ವ್ಯವಹಾರಗಳು ನಡೆಯುತ್ತವೆ. ಕೈಗಾರಿಕೆಗಳು ಸ್ಥಾಪನೆಯಾಗುತ್ತವೆ. ಇದರಿಂದ ನಿರುದ್ಯೋಗ ಯುವಕರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿ ೩ ಲಕ್ಷ ಅಂತರದ ಗೆಲುವು ಸಾಧಿಸುತ್ತದೆ. ಸೊರಬ ತಾಲೂಕಿನಲ್ಲಿ ಕನಿಷ್ಟ ೨೦ ರಿಂದ ೨೫ ಸಾವಿರ ಅಧಿಕ ಮತಗಳು ಚಲಾವಣೆಯಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, ಎಸ್.ಬಂಗಾರಪ್ಪ ಮಗಳಾಗಿ, ಡಾ.ರಾಜ್‌ಕುಮಾರ್ ಸೊಸೆಯಾಗಿ, ನಟ ಶಿವರಾಜ್‌ಕುಮಾರ್ ಪತ್ನಿಯಾಗಿ ಗೀತಾರನ್ನು ಗೌರವಿಸುತ್ತೇನೆ. ಡಾ.ರಾಜ್ ಕುಟುಂಬ ರಾಜಕಾರಣಕ್ಕೆ ಬಂದ ಇತಿಹಾಸವಿಲ್ಲ. ಆದರೆ ರಾಜಕೀಯದ ಪರಿಜ್ಞಾನ ಇಲ್ಲದ, ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲದ, ಸಾಮಾನ್ಯ ಜನರ ನಾಡಿ ಮಿಡಿತ ಗೊತ್ತಿಲ್ಲದ ಹಾಗೆಯೇ ತಾಲೂಕಿನಲ್ಲಿ ಎಷ್ಟು ಹೋಬಳಿ ಅಥವಾ ಕಾಂಗ್ರೆಸ್‌ನ ಅಧ್ಯಕ್ಷರು ಯಾರು ಎನ್ನುವ ಪರಿವೇ ಇಲ್ಲದ ಗೀತಾರವರು ಕಾಂಗ್ರೆಸ್ ಅಭ್ಯರ್ಥಿಯಾಗಿರುವುದು ಆ ಪಕ್ಷದ ದುಸ್ಥಿತಿ ಎತ್ತಿ ತೋರಿಸುತ್ತದೆ. ಆದ್ದರಿಂದ ಕಾಂಗ್ರೆಸ್ ಸೋಲು ಗ್ಯಾರಂಟಿ. ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಗೆಲುವು ನಿಶ್ಚಿತ. ಕೇಂದ್ರದಲ್ಲಿ ಸಚಿವರಾಗುವುದು ಖಚಿತ ಎಂದರು. ಬಳ್ಳಾರಿಯನ್ನು ಜೀನ್ಸ್‌ ರಾಜಧಾನಿ ಮಾಡುವ ಮಾತಿಗೆ ಬದ್ಧ: ರಾಹುಲ್ ಗಾಂಧಿ ಇದಕ್ಕೂ ಮೊದಲು ಶಿರಾಳಕೊಪ್ಪ ರಸ್ತೆಯ ಮೆಸ್ಕಾಂ ಕಚೇರಿ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಶ್ರೀ ರಂಗನಾಥ ದೇವಸ್ಥಾನದ ವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಪ್ರಕಾಶ್ ತಲಕಾಲುಕೊಪ್ಪ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಡಸೂರು, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಶಾಂತ್, ಮುಖಂಡರಾದ ಪಾಣಿ ರಾಜಪ್ಪ, ಎ.ಎಲ್. ಅರವಿಂದ, ಗೀತಾ ಮಲ್ಲಿಕಾರ್ಜುನ, ಜಾನಕಪ್ಪ ಯಲಸಿ, ಸಂಜಯಗೌಡ, ಹರೀಶ್, ರವಿಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಹೊಳಿಯಮ್ಮ, ಎಂ.ಆರ್. ಪಾಟೀಲ್ ಮೊದಲಾದವರು ಹಾಜರಿದ್ದರು.

  • ಗಂಗಾವತಿ: ನವವೃಂದಾವನಗಡ್ಡೆಯಲ್ಲಿ ಶ್ರೀ ವಾಗೀಶ ತೀರ್ಥರ ಆರಾಧನೆ
    on April 27, 2024 at 3:49 am

    ಗಂಗಾವತಿ(ಏ.27):  ತಾಲೂಕಿನ ಆನೆಗೊಂದಿ ಐತಿಹಾಸಿಕ ನವವೃಂದಾವನ ಗಡ್ಡೆಯಲ್ಲಿ ಮಧ್ವ ಪರಂಪರೆಯ ಶ್ರೀ ವಾಗೀಶ ತೀರ್ಥರ ಪೂರ್ವಾರಾಧನೆ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿಗಳ ಮಠದಿಂದ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ವೃಂದಾವನಗಳ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ, ಅಷ್ಟೋತ್ತರ ಪಾರಾಯಣ, ಪಂಡಿತರಿಂದ ಉಪನ್ಯಾಸ, ಭಜನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಶ್ರೀರಾ​ಘ​ವೇಂದ್ರ ಸ್ವಾಮಿಗಳ 350ನೇ ಆರಾ​ಧನಾ ಮಹೋ​ತ್ಸ​ವಕ್ಕೆ ಚಾಲನೆ ಪವನ ಅಚಾರ್, ಹೊಸಪೇಟೆ, ಗಂಗಾವತಿ ರಾಯರ ಮಠದ ವ್ಯವಸ್ಥಾಪಕ ಸಾಮವೇದ ಗುರುರಾಜ ಆಚಾರ್, ಮಂತ್ರಾಲಯ ಇಡಪನೂರ್ ಸಂಜೀವ್ ಕುಲಕರ್ಣಿ, ವಾಜಿಂದ್ರ ರಾವ್, ಸಂಪ್ರತಿ ಮೋಹನ್, ಲಕ್ಷ್ಮಣ್ ರಾಜಪುರೋಹಿತ್, ಗುರುರಾಜ್, ಪ್ರಭಾಕರ್ ರಾವ್, ಲಕ್ಷ್ಮೀಕಾಂತ ಸಲಗುಂದಿ, ನವೀನ್ ಹೈದ್ರಾಬಾದ್, ವಿಜಯ ಕುಮಾರ, ಸಂಜೀವ, ಆನೆಗುಂದಿ ರಾಯರ ಮಠದ ಅರ್ಚಕ ವಿಜೇಂದ್ರಚಾರ ಚಳ್ಳಾರಿ, ಶ್ರೀನಿವಾಸ ಆಚಾರ್ಯ, ಆನೆಗುಂದಿ ಶಾಖಾಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ ಇದ್ದರು.

  • ಅಪಘಾತವಾಗಿ ಗಂಭೀರ ಸ್ಥಿತಿಯಲ್ಲಿದ್ದವನನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯೋಪಚಾರ ನೀಡಿದ ಡಾ.ಅಂಜಲಿ ನಿಂಬಾಳ್ಕರ್
    on April 27, 2024 at 3:41 am

    ಯಲ್ಲಾಪುರ (ಏ.27): ತಾಲೂಕಿನ‌ ಹೆದ್ದಾರಿಯಲ್ಲಿ ಸ್ಕಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನ ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ್ದಷ್ಟೇ ಅಲ್ಲದೇ, ಖುದ್ದು ವೈದ್ಯೋಪಚಾರವನ್ನೂ ನೀಡುವ ಮೂಲಕ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾನವೀಯತೆ ಮೆರೆದಿದ್ದಾರೆ.  ಹಳಿಯಾಳದಲ್ಲಿ ಪ್ರಚಾರ ಕಾರ್ಯ ಮುಗಿಸಿ ರಾತ್ರಿ ಶಿರಸಿಗೆ ತೆರಳುವ ಸಂದರ್ಭದಲ್ಲಿ ಯಲ್ಲಾಪುರ- ಶಿರಸಿ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಸವಾರ ವಿನಾಯಕ ಶೆಟ್ಟರ್ ಎಂಬವರು ರಸ್ತೆಯಲ್ಲೇ‌ ಗಾಯದ ನೋವಿನಿಂದಾಗಿ ಪ್ರಜ್ಞೆ ತಪ್ಪಿದ್ದ. ರಸ್ತೆ ಬದಿಯಲ್ಲಿ ವ್ಯಕ್ತಿ ಬಿದ್ದಿರುವುದನ್ನ ಕಂಡು ಕಾರು‌ ನಿಲ್ಲಿಸಿದ ಡಾ.ಅಂಜಲಿ, ಗಾಯಾಳುವನ್ನ ಪರೀಕ್ಷಿಸಿ ತಕ್ಷಣ ತಮ್ಮದೇ ಕಾರಿನಲ್ಲಿ ಶಿರಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶಿರಸಿಯ ಪಂಡಿತ್ ಸರ್ಕಾರಿ ಆಸ್ಪತ್ರೆಗೆ ಗಾಯಾಳುವನ್ನ ದಾಖಲಿಸಿದ ಡಾ.ಅಂಜಲಿ, ಖುದ್ದು ವೈದ್ಯರಾಗಿ ವೈದ್ಯೋಪಚಾರವನ್ನೂ ನೀಡಿದ್ದಾರೆ. ಬೈಕ್ ಸವಾರನ ಕೈ ಹಾಗೂ ಕಾಲಿಗೆ ಗಂಭೀರ ಗಾಯಳಾಗಿದ್ದು, ಗಾಯಾಳುವಿಗೆ ಧೈರ್ಯ ತುಂಬಿ ವೈದ್ಯಕೀಯ ತಂಡದೊಂದಿಗೆ ತಾವೂ ತುರ್ತು ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದು ಬೈಕ್ ಸವಾರನ ಜೀವ ಉಳಿಸುವಲ್ಲಿ‌ ನೆರವಾಗಿದ್ದಾರೆ.   ಚುನಾವಣಾ ಪ್ರಚಾರ ಮುಗಿಸಿ ಪ್ರಯಾಣ ಮಾಡುತ್ತಿದ್ದ ವೇಳೆ ಯಲ್ಲಾಪುರ-ಶಿರಸಿ ಮಾರ್ಗ ಮಧ್ಯೆ ದುರಾದೃಷ್ಟವಶಾತ್‌ ಬೈಕ್‌ ಸವಾರನಿಗೆ ಅಪಘಾತವಾಗಿದ್ದು, ರಸ್ತೆ ಪಕ್ಕದಲ್ಲಿ ನೋವಿನಿಂದ ನರಳುತ್ತಿದ್ದರೂ ಯಾರು ಸಹಾಯಕ್ಕೆ ಬಂದಿರುವುದಿಲ್ಲ. ಗಾಯಾಳುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋಗುತ್ತಿದ್ದೇನೆ. ಗಾಯಾಳುವಿಗೆ ಏನು ಆಗದಂತೆ ಆ ದೇವರಲ್ಲಿ… pic.twitter.com/fr9igBVvlm — Dr. Anjali Hemant Nimbalkar (@DrAnjaliTai) April 26, 2024

  • ಈ ದಿನಾಂಕಗಳಲ್ಲಿ ಜನಿಸಿದವರಿಗೆ ಹೆಚ್ಚು ಕೋಪ
    on April 27, 2024 at 3:37 am

    ಕೆಲವು ದಿನಾಂಕಗಳಲ್ಲಿ ಜನಿಸಿದ ಜನರು ವಿಭಿನ್ನ ಭಾವನೆಗಳನ್ನು ಹೊಂದಿರುತ್ತಾರೆ. ಕೆಲವರು ತುಂಬಾ ತಣ್ಣನೆಯ ಸ್ವಭಾವವನ್ನು ಹೊಂದಿದ್ದರೆ ಕೆಲವರು ಕೋಪದ ಸ್ವಭಾವವನ್ನು ಹೊಂದಿರುತ್ತಾರೆ.   ಯಾವುದೇ ತಿಂಗಳ 9 ರಂದು ಜನಿಸಿದ ಜನರು ಕ್ರೋಧದಂತಹ ತೀವ್ರವಾದ ಭಾವನೆಗಳಿಗೆ ಒಳಗಾಗುತ್ತಾರೆ. ಭಾವೋದ್ರೇಕ ಮತ್ತು ನ್ಯಾಯದಂತಹ ಪರಿಕಲ್ಪನೆಗಳು 9 ನೇ ಸಂಖ್ಯೆಯೊಂದಿಗೆ ಸಂಬಂಧ ಹೊಂದಿವೆ. ಅದಕ್ಕಾಗಿಯೇ ಅವರು ಭಾವನಾತ್ಮಕವಾಗಿ ಬಲವಾದ ವ್ಯಕ್ತಿತ್ವಗಳಾಗಿ ಗುರುತಿಸಲ್ಪಡುತ್ತಾರೆ. ಅವರು ಸಾಮಾಜಿಕ ಸಮಸ್ಯೆಗಳು ಮತ್ತು ನೈತಿಕತೆಯ ಬಗ್ಗೆ ಬಲವಾದ ಭಾವನೆಗಳನ್ನು ಹೊಂದಿದ್ದಾರೆ. ಅದಕ್ಕಾಗಿಯೇ ಅವರು ಅನ್ಯಾಯ ಅಥವಾ ಉಲ್ಲಂಘನೆಗಳನ್ನು ಕಂಡಾಗ ಕೋಪ ಮತ್ತು ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಯಾವುದೇ ತಿಂಗಳ 18 ರಂದು ಜನಿಸಿದ ಜನರು ಬಹಳ ಬೇಗನೆ ಪ್ರತಿಕ್ರಿಯಿಸುತ್ತಾರೆ. ಬೇಗನೆ ಉತ್ಸುಕರಾಗುತ್ತಾರೆ. ಅವರು ಕೋಪದಿಂದ ಕುದಿಯುತ್ತಿರುತ್ತಾರೆ ಮತ್ತು ಇತರರ ಮೇಲೆ ತಮ್ಮ ಕೋಪವನ್ನು ತೋರಿಸುತ್ತಾರೆ. 1 ಮತ್ತು 8 ಸಂಖ್ಯೆಗಳ ಶಕ್ತಿಯು ಸ್ವತಂತ್ರ ಸಂಖ್ಯೆ 18 ಅನ್ನು ರಚಿಸುತ್ತದೆ. ಇದು ಮಹತ್ವಾಕಾಂಕ್ಷೆ ಮತ್ತು ಸ್ವಾತಂತ್ರ್ಯದ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ. ಆದರೆ ಈ ಸಂಯೋಜನೆಯು ಕಿರಿಕಿರಿ ಮತ್ತು ಅಸಹನೆಗೆ ಕಾರಣವಾಗಬಹುದು. ಆದ್ದರಿಂದ ಈ ಸಂಯೋಜನೆಯು ಕೋಪದ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಯಾವುದೇ ತಿಂಗಳ 27 ರಂದು ಜನಿಸಿದ ಜನರು ಅವರು ತುಂಬಾ ಭಾವನಾತ್ಮಕ ಸೂಕ್ಷ್ಮ ಸ್ವಭಾವವನ್ನು ಹೊಂದಿದ್ದಾರೆ. ಈ ಕಾರಣದಿಂದಾಗಿ, ಅವರು ಕೋಪವನ್ನು ಹೆಚ್ಚು ತೋರಿಸುತ್ತಾರೆ. ಸಂಖ್ಯೆ 7 ಸ್ವಾತಂತ್ರ್ಯ, ಭರವಸೆಯನ್ನು ಪ್ರತಿನಿಧಿಸುತ್ತದೆ. ಸಂಖ್ಯೆ 27 ಅನ್ನು 2 ರಿಂದ ರಚಿಸಲಾಗಿದೆ, ಇದು ಪ್ರೀತಿ ಮತ್ತು ದಯೆಯ ಸ್ವಭಾವವನ್ನು ಪ್ರತಿನಿಧಿಸುತ್ತದೆ. ಈ ಸಂಯೋಜನೆಯಿಂದ ಉಂಟಾಗುವ ಆಂತರಿಕ ತೊಂದರೆಗಳು ಭಾವನೆಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಕೋಪವನ್ನು ಉಂಟುಮಾಡುತ್ತವೆ. ಯಾವುದೇ ತಿಂಗಳ 30 ರಂದು ಜನಿಸಿದ ಜನರು ಅವರು ನವೀನ ರೀತಿಯಲ್ಲಿ ಕೋಪವನ್ನು ವ್ಯಕ್ತಪಡಿಸುತ್ತಾರೆ. ಸಂಖ್ಯೆ 30 0 ಪ್ರೀತಿ, ಕಾಳಜಿಯನ್ನು ಪ್ರತಿನಿಧಿಸುತ್ತದೆ. ಕಾಲ್ಪನಿಕ, ಅಭಿವ್ಯಕ್ತಿಶೀಲ 3 ರೂಪಗಳು ಒಟ್ಟಿಗೆ. ಈ ಸಂಯೋಜನೆಯಿಂದಾಗಿ, ಜನರು ತಮ್ಮ ಹತಾಶೆಯನ್ನು ಮೌಖಿಕವಾಗಿ ಅಥವಾ ಕಲಾತ್ಮಕವಾಗಿ ವ್ಯಕ್ತಪಡಿಸಬಹುದು.   ಯಾವುದೇ ತಿಂಗಳ 29 ರಂದು ಜನಿಸಿದ ಜನರು ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ. ಅವರು ಯೋಚಿಸದೆ ಹಠಾತ್ ಕೋಪವನ್ನು ತೋರಿಸುತ್ತಾರೆ. 2 ಮತ್ತು 9 ಸಂಖ್ಯೆಗಳ ಶಕ್ತಿಗಳು ಉರಿಯುತ್ತವೆ. ಈ ಸಂಯೋಜನೆಯಿಂದ ರೂಪುಗೊಂಡ ಸಂಖ್ಯೆ 29 ವಿಶಿಷ್ಟವಾಗಿದೆ. ಕಷ್ಟಕರ ಸಂದರ್ಭಗಳನ್ನು ಎದುರಿಸುವಾಗ, ಈ ಸಂಯೋಜನೆಯು ಆತುರ, ಭಾವನಾತ್ಮಕ ಪ್ರತಿಕ್ರಿಯೆಗಳು, ಕಿರಿಕಿರಿಯನ್ನು ಸೂಚಿಸುತ್ತದೆ.  

  • ಲೋಕಸಭಾ ಚುನಾವಣೆ 2024: ರಾಜ್ಯದಲ್ಲಿ ಕಾಂಗ್ರೆಸ್‌ಗೆ 24ಕ್ಕೂ ಹೆಚ್ಚಿನ ಸ್ಥಾನ, ಆಜಾದ್
    on April 27, 2024 at 3:35 am

    ಗಂಗಾವತಿ(ಏ.27):  ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 24 ರಿಂದ 26 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಕಾಂಗ್ರೆಸ್ ಮುಖಂಡ ಎ.ಎಚ್.ಆಜಾದ್ ಪೇಂಟರ್ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಎ.ಎಚ್.ಆಜಾದ್ ಪೇಂಟರ್ ಅವರು, 1965 ರಿಂದ ದೇಶದ ರಾಜಕೀಯ ಗಮನಿಸುತ್ತಾ ಬಂದಿರುತ್ತೇನೆ. ಕೀಳು ಮಟ್ಟದ ರಾಜಕೀಯಲ್ಲಿ ರಾಜಕೀಯ ಪಕ್ಷಗಳು ಇರುವದು ಕಾಣುತ್ತೇವೆ. ಈಗಿನ ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಅನುಷ್ಟಾನಗೊಳಿಸಿದೆ. ಅದರಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಧೀಮಂತ ನಾಯಕರಾಗಿದ್ದಾರೆ. ಇವರು ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರನ್ನು  ಸೇರಿಸಿಕೊಂಡು ಪ್ರಚಾರ ಸಮಿತಿ ಅದ್ಯಕ್ಷರನ್ನಾಗಿ ಮಾಡುವದರ ಜೊತೆಗೆ ಪ್ರಚಾರ ಕೈಗೊಂಡರೆ ರಾಜ್ಯದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಸ್ಥಾನಗಳಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ್ದಾರೆ.  ಕೊಪ್ಪಳ : ಸಂಗಣ್ಣ ಕರಡಿ ಬೆನ್ನಲ್ಲೇ 50ಕ್ಕೂ ಹೆಚ್ಚು ಮಂದಿ ಕಾಂಗ್ರೆಸ್ ಸೇರ್ಪಡೆ ದೇಶದಲ್ಲಿ ಬಿಜೆಪಿ ಪಕ್ಷ ಕೇವಲ 180 ಸ್ಥಾನಗಳನ್ನು ಗಳಿಸುವದರ ಮೂಲಕ ಹೀನಾಯವಾಗಿ ಪರಾಭವಗೊಳ್ಳುತ್ತದೆ. ಈಗಿನ ಪ್ರಧಾನ ಮಂತ್ರಿಗಳು ಈ ಹಿಂದೆ ದೇಶದ ಜನರಿಗೆ ಭರವಸೆ ನೀಡಿರುವದು ಮರೀಚಿಕೆಯಾಗಿದೆ. ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ. ವರ್ಷದಲ್ಲಿ 2 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ವಿದೇಶದಿಂದ ಕಪ್ಪು ಹಣ ತರುತ್ತೇವೆ ಎಂದು ಸುಳ್ಳು ಹೇಳಿ 10 ವರ್ಷ ರಾಜಕೀಯ ಮಾಡಿ ಕಾಲಹರಣ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.  ಹೀಗಾಗಿ ರಾಜ್ಯದ ಜನತೆ ಕಾಂಗ್ರೆಸ್‌ಗೆ ಮತ ಹಾಕಿ ಅತಿ ಹೆಚ್ಚು ಸ್ಥಾನ ಗೆಲ್ಲಿಸಬೇಕೆಂದು ಎ.ಎಚ್. ಆಜಾದ್ ಪೇಂಟರ್ ಮನವಿ ಮಾಡಿಕೊಂಡಿದ್ದಾರೆ. 

  • ಗೆಲುವು ನನ್ನದೇ, 2ನೇ ಸ್ಥಾನಕ್ಕೆ ಬಿಜೆಪಿ-ಕಾಂಗ್ರೆಸ್ ಪೈಪೋಟಿ: ಕೆ.ಎಸ್‌.ಈಶ್ವರಪ್ಪ
    on April 27, 2024 at 3:27 am

    ರಿಪ್ಪನ್‍ಪೇಟೆ (ಏ.27): ನನ್ನ ಪರವಾಗಿ ಹೋದ ಕಡೆಯಲ್ಲಿಲ್ಲ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದ ಸಾಕಷ್ಟು ಕಾರ್ಯಕರ್ತರು ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿದ್ದು, ಲಕ್ಷ ಮತಗಳ ಅಂತರದಲ್ಲಿ ಗೆಲುವುದು ಖಚಿತವಾಗಿದೆ. 2ನೇ ಸ್ಥಾನಕ್ಕಾಗಿ ಬಿಜೆಪಿ-ಕಾಂಗ್ರೆಸ್ ಪೈಪೂಟಿ ನಡೆಸುತ್ತಿದ್ದಾರೆ ಎಂದು ಲೋಕಸಭಾ ಚುನಾವಣೆ ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ರಿಪ್ಪನ್‍ಪೇಟೆ ರಾಯಲ್ ಕರ್ಫಂಟ್‍ನ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಶಿಕಾರಿಪುರ ಹಿತ್ತಲ- ಕಲ್ಮನೆಯಲ್ಲಿ ಅಪಾರ ಸಂಖ್ಯೆಯಲ್ಲಿ ಮತದಾರರು ಸಭೆಯಲ್ಲಿ ಭಾಗವಹಿಸಿರುವುದನ್ನು ನೋಡಿದರೆ ನನ್ನ 35 ವರ್ಷದ ರಾಜಕೀಯ ಜೀವನದಲ್ಲಿಯೂ ಇಷ್ಟು ಬೆಂಬಲ ಸಿಕ್ಕಿರುವುದನ್ನು ಕಂಡಿಲ್ಲ.  ಇದನ್ನು ನೋಡಿ ಅಪ್ಪ-ಮಕ್ಕಳು ತೀವ್ರ ಆಸಮದಾನ ಹೊಂದಿದ್ದಾರೆ. ನಮ್ಮ ಮನೆಗೆ ಬಂದರೆ ನಾಳೆ ನಿಮ್ಮ ವಿರುದ್ಧ ಏನಾದರೂ ಅಪ್ಪ ಮಕ್ಕಳು ಮಾಡುತ್ತಾರೆಂದು ಭಯ ಪಡುತ್ತಿದ್ದಾರೆ. ಏನೇ ಆಗಲಿ ನಿಮ್ಮಂತಹ ನೇರ ದಿಟ್ಟ ಹೋರಾಟಗಾರ ನಾಯಕರ ಅಗತ್ಯವಿದೆ ಎಂದು ಹೇಳಿ ನಮ್ಮ ಬೆಂಬಲ ನಿಮಗೆ ಎಂದು ಹೇಳುತ್ತಿದ್ದಾರೆ ಎಂದು ತಿಳಿಸಿದರು.  ನಾನು ಪಕ್ಷೇತರನಾಗಿ ಗೆದ್ದರೂ ಕೂಡಾ ಮೋದಿಜಿಯನ್ನೇ ಬೆಂಬಲಿಸುತ್ತೇನೆ. ಯಾವುದೇ ಕಾರಣಕ್ಕೂ ಹಿಂದೂ ವಿರೋಧಿ ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಗಳಿಗೆ ರಕ್ಷಣೆಯಿಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ನೇಹಾ ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ ಒಂದೊಂದು ತರಹದ ಗೊಂದಲದ ಹೇಳಿಕೆ ನೀಡಿದರು. ಇನ್ನೂ ಹೀಗೆ ಮುಂದುವರಿದರೆ ಕರ್ನಾಟಕ ರಾಜ್ಯ ಮುಸ್ಲಿಂ ರಾಜ್ಯವಾಗುವುದಲ್ಲಿ ಯಾವುದೇ ಸಂದೇಹವಿಲ್ಲ. ನನ್ನ ಉಸಿರಿರುವವರೆಗೂ ನಾನು ಹಿಂದು ಪರವಾಗಿಯೇ ಹೋರಾಟ ಮಾಡುವುದರೊಂದಿಗೆ ಹಿಂದು ರಕ್ಷಣೆಯಲ್ಲಿ ತೊಡಗಿಕೊಂಡಿರುತ್ತೇನೆ ಎಂದರು. ಬಳ್ಳಾರಿಯನ್ನು ಜೀನ್ಸ್‌ ರಾಜಧಾನಿ ಮಾಡುವ ಮಾತಿಗೆ ಬದ್ಧ: ರಾಹುಲ್ ಗಾಂಧಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ರಾಜ್ಯದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ. ಆಡಳಿತ ವ್ಯವಸ್ಥೆಯಲ್ಲಿ ಹಿಡಿತವಿಲ್ಲದೆ ನಿತ್ಯ ಒಂದಲ್ಲ ಒಂದು ಗೊಂದಲದ ಹೇಳಿಕೆ ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.. ಈ ಸಭೆಯಲ್ಲಿ ವಾಟ್‍ಗೋಡು ಸುರೇಶ್, ಮ.ನರಸಿಂಹ, ವಿಶಾಲ, ಜಯಸುಬ್ಬರಾವ್, ಲೀಲಾವತಿ, ನಿರೂಫ್ ಕುಮಾರ್ ಇನ್ನಿತರರು ಪಾಲ್ಗೊಂಡಿದ್ದರು.

  • ಜೋಡೆತ್ತು ಇಲ್ಲ ಚುನಾವಣೆ: ರಾಯಚೂರು ಗೆಲುವಿಗಾಗಿ ಬಿಜೆಪಿ- ಕಾಂಗ್ರೆಸ್ ರಣತಂತ್ರ..!
    on April 27, 2024 at 3:23 am

    ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು ರಾಯಚೂರು(ಏ.27):  ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಈಗ ರಂಗೇರುತ್ತಿದೆ. ಮೊದಲ ಹಂತದ ಚುನಾವಣೆ ಮುಗಿಸಿಕೊಂಡ ಹೈಕಮಾಂಡ್ ನಾಯಕರು ಈಗ ಉತ್ತರ ಕರ್ನಾಟಕದ ಕಡೆ ಮುಖ ಮಾಡಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸಿದ್ಧತೆ ಮಾಡಿಕೊಂಡು ಕಣಕ್ಕೆ ಇಳಿದಿದ್ದಾರೆ. ಆದ್ರೆ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಜೋಡೆತ್ತುಗಳು ಇಲ್ಲದೆ ಅಭ್ಯರ್ಥಿಗಳು ಹೊಸ ಎತ್ತುಗಳು ಇಟ್ಟುಕೊಂಡು ಚುನಾವಣೆಗೆ ಮಾಡಲು ಮುಂದಾಗಿದ್ದಾರೆ.  ಪ್ರಚಾರದಿಂದ ದೂರು ಉಳಿದ ರಾಯಚೂರು ಜೋಡೆತ್ತುಗಳು: ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ದೇವದುರ್ಗ ಮಾಜಿ ಶಾಸಕ ಕೆ.ಶಿವನಗೌಡ ನಾಯಕ ಹಾಗೂ ರಾಜುಗೌಡ ಜೋಡೆತ್ತುಗಳು ಇದ್ದಂತೆ. ಕಳೆದ 2019ರ ಚುನಾವಣೆಯಲ್ಲಿ ರಾಜಾ ಅಮರೇಶ್ವರ ನಾಯಕ ಗೆಲುವಿಗೆ ಈ ಇಬ್ಬರ ನಾಯಕ ಕೊಡುಗೆ ಅಪಾರವಾಗಿದೆ. ಈ ಇಬ್ಬರು ನಾಯಕರು ಇಡೀ ಕ್ಷೇತ್ರದ ಜವಾಬ್ದಾರಿ ಹೊತ್ತುಕೊಂಡು ರಾಜಾ ಅಮರೇಶ್ವರ ‌ನಾಯಕಗೆ ಗೆಲ್ಲಿಸಿದ್ರು. ಆದ್ರೆ ಈ ಸಲ ಇಬ್ಬರೂ ನಾಯಕರು ಲೋಕಸಭಾ ಚುನಾವಣೆ ಪ್ರಚಾರದಿಂದ ಭಾರೀ ಅಂತರ ಕಾಯ್ದುಕೊಂಡಿದ್ದಾರೆ. ಇದಕ್ಕೆ ಕಾರಣವೂ ಬಹಳಷ್ಟು ಇವೆ. ಕೆ.ಶಿವನಗೌಡ ನಾಯಕ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕ ಬೆಂಗಳೂರು ಸೇರಿ ಬಿಟ್ಟಿದ್ದಾರೆ. ಬಿಜೆಪಿಯಲ್ಲಿ ಬಂಡಾಯ ಎದ್ದಾಗ ಬಂಡಾಯ ಶಮನಕ್ಕಾಗಿ ಹೈಕಮಾಂಡ್ ನಾಯಕರು ರಾಯಚೂರಿಗೆ ಬಂದಾಗ ಕಾಣಿಸಿಕೊಂಡ ಕೆ‌.ಶಿವನಗೌಡ ‌ನಾಯಕ ಮತ್ತೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಮತ್ತೊಂದು ಕಡೆ ಸುರಪುರದಲ್ಲಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆದಿದೆ. ಆ ಉಪಚುನಾವಣೆಯಲ್ಲಿ ರಾಜುಗೌಡ ಕಣಕ್ಕೆ ಇಳಿದ್ದು, ತಮ್ಮ ಗೆಲ್ಲುವಿಗಾಗಿ ಕ್ಷೇತ್ರದಲ್ಲಿ ಸುತ್ತಾಟ ಮಾಡುತ್ತಿದ್ದಾರೆ. ಹೀಗಾಗಿ ರಾಜುಗೌಡ ಬೇರೆ ಎಲ್ಲಿಯೂ ಓಡಾಟ ಮಾಡುತ್ತಿಲ್ಲ.  ಕೇಂದ್ರದಿಂದ ಉದ್ದೇಶಪೂರಕವಾಗಿಯೇ ಕರ್ನಾಟಕಕ್ಕೆ ಅನ್ಯಾಯ: ಸಚಿವ ಬೋಸರಾಜು ಪಕ್ಷದ ಜವಾಬ್ದಾರಿ ನಿಭಾಯಿಸಲು ಜಿಲ್ಲಾಧ್ಯಕ್ಷ ಭಾರೀ ಕಸರತ್ತು ರಾಯಚೂರು ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಚುನಾವಣಾ ಗೆಲುವಿಗಾಗಿ ಎರಡು ಪಕ್ಷದ ಅಭ್ಯರ್ಥಿಗಳು ಭಾರೀ ಓಡಾಟ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ರಾಜಾ ಅಮರೇಶ್ವರ ‌ನಾಯಕಗೆ ಕ್ಷೇತ್ರದಲ್ಲಿ ವಿರೋಧಿ ಅಲೆ ಎದ್ದು ಕಾಣುತ್ತಿದೆ. ಜೆಡಿಎಸ್ ಜೊತೆಗೆ ಮೈತ್ರಿಯಾದ ಬಳಿಕ ಕಳೆದ ಚುನಾವಣೆಗಿಂತ ಡಬಲ್ ಮತಗಳಿಂದ ನಾನು ಗೆಲುವು ಸಾಧಿಸುತ್ತೇನೆ ಎಂದು ರಾಜಾ ಅಮರೇಶ್ವರ ‌ನಾಯಕ ಹೇಳುತ್ತಿದ್ದಾರೆ. ಆದ್ರೆ ಕ್ಷೇತ್ರದಲ್ಲಿ ಬೇರೆನೇ ಲೆಕ್ಕಾಚಾರವಿದೆ. ರಾಜಾ ಅಮರೇಶ್ವರ ‌ನಾಯಕ ಐದು ವರ್ಷ ಸಂಸದರು ಆಗಿದ್ರು, ಜನರ ಸಂಪರ್ಕಕ್ಕೆ ಸಿಕ್ಕಿಲ್ಲ. ಕಳೆದ‌ ಬಾರಿ ಚುನಾವಣೆ ಮಾಡಿದಂತೆ ಈ ಬಾರಿ ಚುನಾವಣಾ ಮಾಡಲು ರಾಜಾ ಅಮರೇಶ್ವರ ‌ನಾಯಕಗೆ ಆಗುತ್ತಿಲ್ಲ. ಕಳೆದ ಬಾರಿ ಮೋದಿ ಅಲೆ ಇತ್ತು. ಹೊಸ ಅಭ್ಯರ್ಥಿ ಎಂಬ ಕಾರಣಕ್ಕೆ ಇಡೀ ಕ್ಷೇತ್ರದಲ್ಲಿ ರಾಜಾ ಅಮರೇಶ್ವರ ನಾಯಕ ಪರ ಒಲವು ಇತ್ತು. ಆದ್ರೆ ಈ ಸಲ ಕಳೆದ ಬಾರಿ ಚುನಾವಣೆ ಮಾಡಿದ ನಾಯಕರು ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.  ಪಕ್ಷದ ಜವಾಬ್ದಾರಿ ನಿಭಾಯಿಸಲು ಕೆಲ ನಿಷ್ಠಾವಂತ ಕಾರ್ಯಕರ್ತರು ಮೋದಿ ಗೆಲುವಿಗಾಗಿ ರಾಜಾ ಅಮರೇಶ್ವರ ‌ನಾಯಕ ಪರ ಪ್ರಚಾರ ‌ನಡೆಸಿದ್ದಾರೆ. ಮತ್ತೊಂದು ‌ಕಡೆ ನೂತನವಾಗಿ ಆಯ್ಕೆಗೊಂಡ ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಅಮಿನ್ ರೆಡ್ಡಿ ಯಾಳಗಿ ಹಾಗೂ ರಾಯಚೂರು ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಶಿವರಾಜ್ ಪಾಟೀಲ್ ಪಕ್ಷದ ಜವಾಬ್ದಾರಿ ನಿಭಾಯಿಸಲು ‌ನಾನಾ ಕಸರತ್ತು ನಡೆಸಿದ್ದಾರೆ. ಸಭೆಗೆ ಮಾತ್ರ ಸೀಮಿತವಾದ ಮೈತ್ರಿ ಬೆಂಬಲ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಭೆಗಳು ಜೋರಾಗಿ ನಡೆದಿವೆ. ಆದ್ರೆ ಸಭೆಯಾದ ಬಳಿಕ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ‌ನಾಯಕ ಪ್ರಚಾರ ನಡೆಸಿದ್ದಾರೆ. ಆದ್ರೆ ಎಲ್ಲಿಯೂ ಜೆಡಿಎಸ್ ನಾಯಕರು ಜವಾಬ್ದಾರಿ ಹೊತ್ತುಕೊಂಡು ‌ಚುನಾವಣೆ ಪ್ರಚಾರಕ್ಕೆ ‌ಮುಂದಾಗುತ್ತಿಲ್ಲ. ಅಭ್ಯರ್ಥಿ ಆಹ್ವಾನ ಕೊಟ್ಟಾಗ ಮಾತ್ರ ಬರುವುದು, ಆ ಬಳಿಕ ಅಂತರ ಕಾಯ್ದುಕೊಳ್ಳುವುದು ಕ್ಷೇತ್ರದಲ್ಲಿ ನಡೆದಿದೆ. ಈಗಿನ ದುಬಾರಿ ಚುನಾವಣೆ ಎದುರಿಸಲು ಯಾರು ‌ಕೂಡ ಮೈಮೇಲೆ ಎಳೆದುಕೊಂಡು ಚುನಾವಣೆ ಮಾಡಲು ಮುಂದಾಗುತ್ತಿಲ್ಲ. ಇದು ಹೀಗೆ ಮುಂದುವರೆದ್ರೆ ಬಿಜೆಪಿ ಅಭ್ಯರ್ಥಿಗೆ ಭಾರೀ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಬಣರಾಜಕೀಯ ನಡುವೆ ಟಾರ್ಗೆಟ್ ರೀಚ್ ಆಗಲು ಹರಸಾಹಸ ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಕುಮಾರ್ ‌ನಾಯಕ ಕಣಕ್ಕೆ ಇಳಿದಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿಯಾದ ಜಿ.ಕುಮಾರ್ ‌ನಾಯಕ, ಕ್ಷೇತ್ರದಲ್ಲಿ ಭರ್ಜರಿಯಾಗಿ ಮತಬೇಟೆ ‌ನಡೆಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ಗ್ಯಾರಂಟಿ ‌ಘೋಷಣೆ ಮಾಡಿದೆ. ಆ ಐದು ಗ್ಯಾರಂಟಿ ಹೆಸರಿನಲ್ಲಿ ‌ಕಾಂಗ್ರೆಸ್ ಅಭ್ಯರ್ಥಿ ‌ಮತಬೇಟೆ ಶುರು ಮಾಡಿದ್ದಾರೆ.  ರಾಯಚೂರಿನ ಕಾಂಗ್ರೆಸ್ ನಲ್ಲಿ ಭಾರೀ ಬಣ ರಾಜಕೀಯವಿದೆ. ಈ ಬಣ ರಾಜಕೀಯ ನಡುವೆಯೂ ಚುನಾವಣಾ ‌ಪ್ರಚಾರ ಜೋರಾಗಿದೆ. ಹೈಕಮಾಂಡ್ ‌ನಾಯಕರ ಸೂಚನೆ ‌ಮೇರೆಗೆ ಪ್ರತಿ ವಿಧಾನಸಭಾ ‌ಕ್ಷೇತ್ರದಲ್ಲಿ ಮಾಜಿ ಮತ್ತು ಹಾಲಿ ಶಾಸಕರು ತಾವೇ ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದಾರೆ. ಅಭ್ಯರ್ಥಿ ತಾವೇ ಎಂಬಂತೆ ಕಾಂಗ್ರೆಸ್ ನಾಯಕರು ಪ್ರಚಾರ ಶುರು ನಡೆಸಿದ್ದಾರೆ. ಹೀಗಾಗಿ ದಿನೇ ದಿನೇ ಕಾಂಗ್ರೆಸ್ ಅಭ್ಯರ್ಥಿ ಜಿ.ಕುಮಾರ್ ನಾಯಕ ಅಬ್ಬರ ಜೋರಾಗಿದೆ. ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ 8 ಮಂದಿ ಸ್ಪರ್ಧೆ; ಬಿಜೆಪಿ ಬಂಡಾಯ ಅಭ್ಯರ್ಥಿ ಬಿ.ವಿ.ನಾಯಕ್ ನಾಮಪತ್ರ ತಿರಸ್ಕತ ಕಾಂಗ್ರೆಸ್‌‌ನಲ್ಲಿ ಒಂಟಿ ಸಲಗದ್ದೇ ಆರ್ಭಟ ರಾಯಚೂರು ‌ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ‌ಅಭ್ಯರ್ಥಿ ಜಿ.ಕುಮಾರ್ ‌ನಾಯಕ ನಿವೃತ್ತ ಐಎಎಸ್ ಅಧಿಕಾರಿ. 34-35 ವರ್ಷದ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ತಮ್ಮ ನಿವೃತ್ತಿ ಮುಗಿದು ಆರು ತಿಂಗಳು ಆಗಿಲ್ಲ.‌ ಲೋಕಸಭಾ ಚುನಾವಣೆ ನಿಲ್ಲಬೇಕೆಂದು ನಿರ್ಧಾರ ಮಾಡಿದ್ರು.ಆಗ ಜಿ.ಕುಮಾರ್ ‌ನಾಯಕಗೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಿಂದ ಆಹ್ವಾನ ಇತ್ತು. ಆದ್ರೆ ಯಾವ ಕ್ಷೇತ್ರದಿಂದ ನಿಲ್ಲಬೇಕು ಎಂದು ಬಂದಾಗ ಜಿ.ಕುಮಾರ್ ನಾಯಕ ಆಯ್ಕೆ ಮಾಡಿಕೊಂಡಿದ್ದು, ರಾಯಚೂರು ಲೋಕಸಭಾ ಕ್ಷೇತ್ರ. ಇದೊಂದು ಎಸ್ ಟಿ ಮೀಸಲು ಕ್ಷೇತ್ರ, ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ರಾಜಾ ಅಮರೇಶ್ವರ ‌ನಾಯಕ ಇದ್ರು. ಕಾಂಗ್ರೆಸ್ ‌ನಿಂದ ಯಾರು ಸಮರ್ಥ ಅಭ್ಯರ್ಥಿಗಳು ಇರಲಿಲ್ಲ ಎಂಬ ಮಾಹಿತಿ ಪಡೆದ ಜಿ.ಕುಮಾರ್ ‌ನಾಯಕ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ರು. ರಾಯಚೂರಿನಲ್ಲಿ ಜಿ.ಕುಮಾರ್ ನಾಯಕ 3 ವರ್ಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ಈಗ ಇಡೀ ಲೋಕಸಭಾ ಚುನಾವಣೆ ಜವಾಬ್ದಾರಿ ಸಚಿವ ಎನ್.ಎಸ್. ಬೋಸರಾಜುಗೆ ಕೈ ಹೈಕಮಾಂಡ್ ನೀಡಿದೆ.  ಹೀಗಾಗಿ ಇಡೀ ಕ್ಷೇತ್ರದಲ್ಲಿ ಸಚಿವ ಎನ್‌.ಎಸ್.ಬೋಸರಾಜು ನೇತೃತ್ವದಲ್ಲಿ ಜಿ.ಕುಮಾರ್ ‌ನಾಯಕ ಪ್ರಚಾರ ಶುರು ಮಾಡಿದ್ದಾರೆ. ಆದ್ರೆ ಬಣ ರಾಜಕೀಯ ನಡುವೆ ಕುಮಾರ್ ‌ನಾಯಕಗೆ ರಾಯಚೂರಿನ ಮತದಾರರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುವುದು ‌ಕಾದು‌ನೋಡಬೇಕಾಗಿದೆ.

  • IPL 2024: ಡೆಲ್ಲಿ ಕ್ಯಾಪಿಟಲ್ಸ್ vs ಮುಂಬೈ ಇಂಡಿಯನ್ಸ್ ನಿರ್ಣಾಯಕ ಫೈಟ್..!
    on April 27, 2024 at 3:21 am

    ನವದೆಹಲಿ(ಏ.27): 17ನೇ ಆವೃತ್ತಿ ಐಪಿಎಲ್‌ನಲ್ಲಿ ಸಾಧಾರಣ ಪ್ರದರ್ಶನ ನೀಡುತ್ತಿರುವ 2 ತಂಡಗಳಾದ ಮುಂಬೈ ಇಂಡಿಯನ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ಶನಿವಾರ ಪರಸ್ಪರ ಮುಖಾಮುಖಿಯಾಗಲಿವೆ. ಪ್ಲೇ-ಆಫ್‌ ದೃಷ್ಟಿಯಿಂದ ಎರಡೂ ತಂಡಗಳಿಗೆ ಈ ಪಂದ್ಯ ಮಹತ್ವದ್ದಾಗಿದೆ. ಅದರಲ್ಲೂ ಮುಂಬೈಗೆ ಪ್ಲೇ-ಆಫ್‌ ರೇಸ್‌ನಲ್ಲಿ ಉಳಿಯಲು ಗೆಲುವು ಅನಿವಾರ್ಯ. 5 ಬಾರಿ ಚಾಂಪಿಯನ್‌ ಮುಂಬೈ ಈ ಬಾರಿ 8 ಪಂದ್ಯಗಳನ್ನಾಡಿದ್ದು, 3ರಲ್ಲಿ ಗೆದ್ದು 6ರಲ್ಲಿ ಪರಾಭವಗೊಂಡಿದೆ. ಮತ್ತೊಂದು ಸೋಲು ತಂಡವನ್ನು ನಾಕೌಟ್‌ನಿಂದ ಬಹುತೇಕ ಹೊರಗಿಡಲಿದೆ. ಹ್ಯಾಟ್ರಿಕ್‌ ಸೋಲಿನ ಬಳಿಕ ಮುಂಬೈ ಪುಟಿದೆದ್ದರೂ ಅಸ್ಥಿರ ಆಟ ತಂಡವನ್ನು ಸೋಲಿನತ್ತ ನೂಕುತ್ತಿದೆ. ಎಲ್ಲಾ ವಿಭಾಗದಲ್ಲೂ ಸುಧಾರಿತ ಪ್ರದರ್ಶನ ನೀಡಿದರೆ ಮಾತ್ರ ಹಾರ್ದಿಕ್‌ ನಾಯಕತ್ವದ ಮುಂಬೈಗೆ ಈ ಪಂದ್ಯದಲ್ಲಿ ಗೆಲುವು ದಕ್ಕಲಿದೆ. ಕೆಕೆಆರ್ ಎದುರು 262 ರನ್‌ ಚೇಸ್‌: ಪಂಜಾಬ್ ಟಿ20 ವಿಶ್ವದಾಖಲೆ! ಮುಂಬೈ ಇಂಡಿಯನ್ಸ್ ಗೆಲುವು ಸಾಧಿಸಬೇಕಿದ್ದರೆ ರೋಹಿತ್ ಶರ್ಮಾ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ಹಾಗೂ ನೆಹಾಲ್ ವದೇರಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಬೇಕು. ಇನ್ನು ಮಹತ್ವದ ಘಟ್ಟದಲ್ಲಿ ಹಾರ್ದಿಕ್ ಪಾಂಡ್ಯ ಆಲ್ರೌಂಡ್ ಆಟ ಪ್ರದರ್ಶಿಸಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಹಾಗೂ ಗೆರಾಲ್ಡ್ ಕೋಟ್ಜೀ ಸಂಘಟಿತ ಪ್ರದರ್ಶನ ತೋರಬೇಕಿದೆ. ಮತ್ತೊಂದೆಡೆ ಡೆಲ್ಲಿ 9ರಲ್ಲಿ 4 ಪಂದ್ಯ ಗೆದ್ದಿದ್ದು, 5ರಲ್ಲಿ ಸೋಲನುಭವಿಸಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈಗೆ ಶರಣಾಗಿದ್ದ ತಂಡ ಈ ಬಾರಿ ಸೇಡಿನ ಕಾತರದಲ್ಲಿದೆ. ರಿಷಭ್‌ ಪಂತ್‌ ತಂಡದ ಆಧಾರಸ್ತಂಭ ಎನಿಸಿಕೊಂಡಿದ್ದು, ಬೌಲರ್‌ಗಳು ಮೊನಚು ದಾಳಿ ಸಂಘಟಿಸಬೇಕಿದೆ. ಜೇಕ್ ಫ್ರೇಸರ್‌, ಸ್ಟಬ್ಸ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದೆ. ಸನ್‌ರೈಸರ್ಸ್ ಬಗ್ಗುಬಡಿದು ‘ಸೈಲೆಂಟ್ ಸೆಲಿಬ್ರೇಷನ್’ ಮಾಡಿದ RCB ಫ್ಯಾನ್ಸ್..! ಬೆಂಗಳೂರು ಅಭಿಮಾನಿಗಳ ಹಾವಳಿ ವೈರಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಪ್ಲೇ ಆಫ್ ರೇಸ್‌ನಲ್ಲಿ ಉಳಿಯಬೇಕಿದ್ದರೆ, ಪ್ರೇಸರ್ ಜತೆಗೆ ಟ್ರಿಸ್ಟಿನ್ ಸ್ಟಬ್ಸ್, ನಾಯಕ ರಿಷಭ್ ಪಂತ್ ಮತ್ತೊಮ್ಮೆ ಸಿಡಿಯಬೇಕಿದೆ. ಇನ್ನು ಬೌಲಿಂಗ್‌ನಲ್ಲಿ ಮುಕೇಶ್ ಕುಮಾರ್, ಖಲೀಲ್ ಅಹಮದ್, ಕುಲ್ದೀಪ್ ಯಾದವ್ ಮಾರಕ ದಾಳಿ ನಡೆಸಬೇಕಿದೆ. ಒಟ್ಟು ಮುಖಾಮುಖಿ: 34 ಮುಂಬೈ: 19 ಡೆಲ್ಲಿ: 15 ಸಂಭವನೀಯ ಆಟಗಾರರು ಮುಂಬೈ: ಇಶಾನ್‌ ಕಿಶನ್, ರೋಹಿತ್‌ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್‌ ವರ್ಮಾ, ಹಾರ್ದಿಕ್‌ ಪಾಂಡ್ಯ(ನಾಯಕ), ಟಿಮ್ ಡೇವಿಡ್, ನೇಹಲ್‌ ವದೇರಾ, ಮೊಹಮ್ಮದ್ ನಬಿ, ಗೆರಾಲ್ಡ್ ಕೋಟ್ಜೀ, ಪೀಯೂಸ್ ಚಾವ್ಲಾ, ಜಸ್ಪ್ರೀತ್ ಬುಮ್ರಾ. ಡೆಲ್ಲಿ: ಪೃಥ್ವಿ ಶಾ, ಫ್ರೇಸರ್‌, ಅಭಿಷೇಕ್‌ ಪೊರೆಲ್, ಶಾಯ್ ಹೋಪ್‌, ರಿಷಭ್‌ ಪಂತ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ಏನ್ರಿಚ್ ನೋಕಿಯಾ, ಖಲೀಲ್‌ ಅಹಮದ್, ಮುಕೇಶ್‌ ಕುಮಾರ್. ಪಂದ್ಯ: ಮಧ್ಯಾಹ್ನ 3.30ಕ್ಕೆ ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

  • ರಾಜ್ಯದಲ್ಲಿ ಗ್ಯಾರಂಟಿ ಬಂದ್‌ ಆಗಲ್ಲ: ಸಿಎಂ ಸಿದ್ದರಾಮಯ್ಯ
    on April 27, 2024 at 3:05 am

    ವಿಜಯಪುರ(ಏ.27):  ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿಗಳನ್ನು ನಿಲ್ಲಿಸಲಾಗುತ್ತದೆ ಎಂದು ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ನಾವು ಯಾವುದೇ ಕಾರಣಕ್ಕೂ ಈ ಗ್ಯಾರಂಟಿಗಳನ್ನು ಸ್ಥಗಿತ ಮಾಡೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟ ಭರವಸೆ ನೀಡಿದರು. ನಗರದ ಸೊಲ್ಲಾಪೂರ ರಸ್ತೆಯಲ್ಲಿರುವ ಎಎಸ್‌ಪಿ ವಾಣಿಜ್ಯ ಮಹಾವಿದ್ಯಾಲಯದ ಮೈದಾನದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಮೀಸಲಾತಿ ಕೊಡಲು ಸಾಧ್ಯವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ನಾವು ಹಿಂದೂಗಳ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ಕೊಡುತ್ತಿದ್ದೇವೆ ಅಂತ ಮೋದಿ ಸುಳ್ಳು ಹೇಳುತ್ತಿದ್ದಾರೆ. ಹೀಗೆ ಹೇಳುವ ಮೂಲಕ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ಚ್ಯುತಿ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೀಳು ಮಟ್ಟಕ್ಕೆ ಇಳಿದ ಪ್ರಧಾನಿ ಮೋದಿ ಮೇಲೂ ಆಯೋಗ ಕ್ರಮ ಕೈಗೊಳ್ಳಲಿ: ಎಂ.ಬಿ.ಪಾಟೀಲ ಬಿಜೆಪಿ ಅಧಿಕಾರದಲ್ಲಿದ್ದಾಗ ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ಮುಸ್ಲಿಮರಿಗೆ ಇದ್ದ ಶೇ.4 ಮೀಸಲಾತಿ ತೆಗೆದು ಹಾಕಿದರು. ಆಗ ಇದನ್ನು ಪ್ರಶ್ನಿಸಿ ಮುಸ್ಲಿಂ ಮುಖಂಡರು ಸುಪ್ರೀಂಗೆ ಅರ್ಜಿ ಹಾಕಿದರು. ಆ ವೇಳೆ ಇದೆ ಬಿಜೆಪಿಯವರು ಕೋರ್ಟ್‌ಗೆ ಅಫಿಡವಿಟ್ ಹಾಕಿ ನಾವು ಯಥಾಸ್ಥಿತಿ ಕಾಪಾಡುತ್ತೇವೆ ಎಂದು ನ್ಯಾಯಾಲಯದಲ್ಲಿ ತಿಳಿಸಿ ನಂತರ ಅದನ್ನು ಯಥಾಸ್ಥಿತಿ ಮುಂದುವರೆಸಿದ್ದಾರೆ. ನಾವು ಅದನ್ನೇ ಮುಂದುವರಿಸಿದ್ದೇವೆ. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಹೊಸದಾಗಿ ಮೀಸಲಾತಿ ಕೊಡುತ್ತಾರೆ ಎಂಬುದು ಅತೀ ಸುಳ್ಳು. ಮೋದಿ ಸುಳ್ಳು ಹೇಳುವುದರಲ್ಲಿ ಪ್ರವೀಣರು. ಭಾರತದಲ್ಲಿ ಬಂದ ಪ್ರಧಾನಿಗಳಲ್ಲಿ ಸುಳ್ಳು ಹೇಳುವವರು ಯಾರಾದರೂ ಇದ್ರೆ ಅದು ಮೋದಿ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು. ಸಂವಿಧಾನ ವಿರೋಧಿ ಬಿಜೆಪಿ: ಈ ಚುನಾವಣೆಯಲ್ಲಿ ಸೋಲುತ್ತೇವೆ ಎಂದು ಮೋದಿ ಅವರಿಗೆ ಗೊತ್ತಾಗಿದೆ. ನಾವು 400 ಸೀಟ್ ಗೆಲ್ಲುತ್ತೇವೆ ಎಂದು ಹೇಳುತ್ತಿರುವುದು ಅವರಿಗೆ ಸಂವಿಧಾನ ಬದಲಾವಣೆ ಮಾಡಲು ಬೇಕಾಗಿವೆ. ಇವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ ಎಂದ ಅವರು, ಇದುವರೆಗೂ ಅಭಿವೃದ್ಧಿಯನ್ನೇ ಮಾಡದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರನ್ನು ಸೋಲಿಸಿ, ನಮ್ಮ‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಸಿಎಂ ಮನವಿ ಮಾಡಿದರು. ಬಿಜೆಪಿಯಿಂದ ಧರ್ಮ ರಾಜಕಾರಣ: ರಾಜ್ಯದಲ್ಲಿನ 28 ಕ್ಷೇತ್ರಗಳಲ್ಲಿ 14 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಉಳಿದ 14 ಕ್ಷೇತ್ರಗಳಿಗೆ ಮೇ 7ರಂದು ಚುನಾವಣೆ ಇದೆ. ನಾವು ನಮ್ಮ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ನಿಲ್ಲಿಸಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ಅವರು ಒಂದು ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ನಿಮಗೆ ಇದು ಮಹತ್ವದ ಚುನಾವಣೆ ಇದೆ. ಮುಂದಿನ ಐದು ವರ್ಷ ಯಾರು ಅಧಿಕಾರದಲ್ಲಿ‌ ಇರಬೇಕು ಎಂಬುದು ತೀರ್ಮಾನ ಮಾಡುತ್ತದೆ. ಮೋದಿ ಕಳೆದ 10 ವರ್ಷದಲ್ಲಿ ಬಡವರು, ಹಿಂದುಳಿದವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆಯೇ ಎಂಬುದನ್ನು ಯೋಚನೆ ಮಾಡಿ. ನೀರಾವರಿ ಯೋಜನೆ, ಅಭಿವೃದ್ಧಿ ಬಗ್ಗೆ ಏನೂ ಮಾಡಿಲ್ಲ. ಇದುವರೆಗೂ ಅವರು ಮಾಡಿದ ಅಭಿವೃದ್ದಿ ಮಾಡಿದ ವಿಚಾರ ಹೇಳಿಲ್ಲ. ಕೇವಲ ಧರ್ಮ ಧರ್ಮಗಳ ಮಧ್ಯೆ ಗಲಭೆ ಉಂಟು ಮಾಡಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಹತಾಶರಾಗಿರುವ ಮೋದಿ: ಪ್ರಧಾನಿ ಮೋದಿ ಅವರ ಇತ್ತೀಚಿನ ಭಾಷಣ ನೋಡಿದರೆ ಅವರು ಗೆಲ್ಲೋದಿಲ್ಲ ಎಂಬುವುದು ಅವರಿಗೆ ಅರಿವಾಗಿ ಹತಾಶರಾಗಿದ್ದಾರೆ. ಕಳೆದ ಚುನಾವಣೆಯಲ್ಲಿ 25 ಸಂಸದರನ್ನು ಕಳಿಸಿಕೊಟ್ಟಿದ್ದೀರಿ. 25 ಜನರಲ್ಲಿ ಒಬ್ಬರೂ ಬಾಯಿ ಬಿಡಲಿಲ್ಲ. ನಿಮ್ಮೆ ಜಿಲ್ಲೆಯವರಾದ ಜಿಗಜಿಣಗಿ ಮಂತ್ರಿಯಾದರೂ ಮಾತಾಡಿಲ್ಲ. ಇವರಿಗೆ ಮಾತಾಡಲು ಭಯವಿದೆ. ಇವರು ನಡಗುತ್ತಾರೆ. ಹಾಗಾಗಿ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡುವವರು, ಅನ್ಯಾಯದ ಬಗ್ಗೆ ಮಾತಾಡುವವರು ಲೋಕಸಭೆಗೆ ಹೋಗಬೇಕು. ಅದಕ್ಕೆ ಕಾಂಗ್ರೆಸ್ ಬೇಕು ಎಂದು ಮನವಿ ಮಾಡಿದರು. ಅದಾನಿ, ಅಂಬಾನಿ ಸಾಲಮನ್ನಾ: ಮನಮೋಹನಸಿಂಗ್ ಅವರು ಪ್ರಧಾನಿ ಇದ್ದಾಗ ₹72 ಸಾವಿರ ಕೋಟಿ ಸಾಲ‌ಮನ್ನಾ ಮಾಡಿದರು. ಕಳೆದ ಅವಧಿಯಲ್ಲಿ ನಾನು ಸಿಎಂ ಇದ್ದಾಗ ಸೊಸೈಟಿಗಳಲ್ಲಿದ್ದ ₹50 ಸಾವಿರದವರೆಗಿನ ಸಾಲ ಸೇರಿ ಒಟ್ಟು 27 ಲಕ್ಷ ರೈತರ ₹8145 ಕೋಟಿ ರೈತರ ಸಾಲ ಮನ್ನಾ ಮಾಡಿದಿನಿ. ಆದರೆ ಇವರು ಸಾಲ‌ಮನ್ನಾ ಮಾಡಿದ್ದು ಅಂಬಾನಿ, ಅದಾನಿ ಸೇರಿ ₹16 ಲಕ್ಷ ಕೋಟಿ ಸಾಲ‌ಮನ್ನಾ ಮಾಡಿದ್ದಾರೆ. ರೈತರ ಸಾಲಮನ್ನಾ ಮಾಡಿ ಅಂದರೆ ದುಡ್ಡಿಲ್ಲ‌‌ ಅಂತಾರೆ. ಬಂಡವಾಳ ಶಾಹಿಗಳ ಸಾಲ‌ಮನ್ನಾ ಮಾಡುತ್ತಾರೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು. ಬಿಜೆಪಿ ಅಧಿಕಾರದಲ್ಲಿ ಆರ್ಥಿಕ ದಿವಾಳಿ: ಈ ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ, ನಮ್ಮ ವಿ.ಎಸ್. ಉಗ್ರಪ್ಪನವರು ಕೌನ್ಸಿಲ್‌ನಲ್ಲಿ ಸಾಲ ಮನ್ನಾದ ಪ್ರಶ್ನೆ ಕೇಳಿದಾಗ ಆಗ ಯಡಿಯೂರಪ್ಪನವರು ನೋಟ್ ಪ್ರಿಂಟ್ ಮಾಡಲು ನಮ್ಮ ಬಳಿ ಮಶೀನ್ ಇಲ್ಲ‌ ಎಂದರು. ಇವರ ಬಳಿ ನೋಟು ಎಣಿಸಲು ಮಶೀನ್ ಇದೆ. ಆದ್ದರಿಂದಲೇ ರಾಜ್ಯವನ್ನು‌ಲೂಟಿ ಹೊಡೆದರು. ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಅಭಿವೃದ್ದಿ ಕೆಲಸ‌ ಮಾಡದೆ 3 ವರ್ಷ 10 ತಿಂಗಳಲ್ಲಿ ಆರ್ಥಿಕವಾಗಿ ದಿವಾಳಿ ಮಾಡಿದರು ಎಂದು ಆರೋಪಿಸಿದರು. ಪ್ರಧಾನಿಯಿಂದ ದೊಡ್ಡ ಸುಳ್ಳುಗಳು: ೧೦ ವರ್ಷ ಪ್ರಧಾನಿಯಾಗಿದ್ದ ಮೋದಿ ೨೦೧೪ ರಲ್ಲಿ ಏನು ಹೇಳಿದ್ದರೂ ನೆನಪಿಸಿಕೊಳ್ಳಿ. ವಿದೇಶದಲ್ಲಿ ಕಪ್ಪುಹಣ ಇದೆ. ಅದನ್ನು ತಂದು ಎಲ್ಲ ಕುಟುಂಬಗಳಿಗೆ ₹೧೫ ಲಕ್ಷ ಹಣ ಖಾತೆಗೆ ಹಾಕಿ ಜನರಿಗೆ ಹಂಚುತ್ತೇನೆ ಎಂದಿದ್ದರು. ೧೦ ವರ್ಷ ಆಯ್ತು ಹೇಳಿ, ೧೫ ಪೈಸೆ ಆದರೂ ಬಂದಿದೆಯಾ? ಇದು ಅವರು ಹೇಳಿದ ಮೊದಲನೇ ಸುಳ್ಳು. ನಿರುದ್ಯೋಗಿ ಯುವಕ ಯುವತಿಯರಿಗೆ ವರ್ಷಕ್ಕೆ ೨ ಕೋಟಿ ಉದ್ಯೋಗ ಸೃಷ್ಠಿ ಮಾಡುತ್ತೇನೆ ಎಂದು ಹೇಳಿದರು‌. ೧೦ ವರ್ಷದಲ್ಲಿ ೨೦ ಲಕ್ಷ ಉದ್ಯೋಗ ಮಾಡಿಲ್ಲ. ಕೆಲಸ ಕೇಳಿದರೆ ಬೋಂಡಾ, ಪಕೋಡಾ ಮಾರಲು ಹೋಗಿ ಅಂತ ಬೇಜವಾಬ್ದಾರಿಯಿಂದ ಹೇಳ್ತಾರೆ ಇದು ಎರಡನೇ ದೊಡ್ಡ ಸುಳ್ಳು. ೨೦೨೦ವೇಳೆಗೆ ರೈತರ ಆದಾಯ ೨ ಪಟ್ಟು ಹೆಚ್ಚು ಮಾಡುತ್ತೇನೆ ಎಂದರು. ೧ ಲಕ್ಷ ಆದಾಯ ಬರ್ತಿದ್ದರೆ ೨ ಲಕ್ಷ ಬರುವ ಹಾಗೆ ಮಾಡುತ್ತೇನೆ ಎಂದರು, ರೈತರ ಖರ್ಚು ಹೆಚ್ಚಾಗಿದೆ ಆದಾಯ ಆಗಲಿಲ್ಲ. ಇದು ಮೂರನೇ ಸುಳ್ಳು. ಎಲ್ಲ ವಸ್ತುಗಳ ಬೆಲೆ ಕಡಿಮೆ ಮಾಡುತ್ತೇನೆ ಅಚ್ಚೇದಿನ್‌ ಆಯೇಗಾ ಅಂದರು. ಪೆಟ್ರೋಲ್, ಗ್ಯಾಸ್, ದಿನಬಳಕೆ, ವಸ್ತುಗಳು ಕಡಿಮೆ ಆಗಲಿಲ್ಲ. ಸ್ವಾಮಿನಾಥನ ವರದಿ ಜಾರಿ ಮಾಡಲಿಲ್ಲ. ಎಂಎಸ್‌ಪಿ ಕೊಡಲಿಲ್ಲ. ನಿಮಗೆ ಮೋಸ ಮಾಡಿದ್ದಾರೆ, ದ್ರೋಹ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು‌.ವೇದಿಕೆ ಮೇಲೆ ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಕಾಂಗ್ರೆಸ್ ಉಸ್ತುವಾರಿ ರಂದೀಪ ಸುರ್ಜೆವಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ವಿನಯ ಕುಲಕರ್ಣಿ, ಶಾಸಕರಾದ ವಿಠ್ಠಲ‌ ಕಟಕದೊಂಡ, ಯಶವಂತರಾಯಗೌಡ ಪಾಟೀಲ್, ಸಿ.ಎಸ್.ನಾಡಗೌಡ, ಅಶೋಕ ಮನಗೂಳಿ, ಪ್ರಕಾಶ ರಾಠೋಡ, ಮಾಜಿ ಶಾಸಕರಾದ ಡಾ.ಮಕ್ಬುಲ್ ಬಾಗವಾನ, ಶರಣಪ್ಪ ಸುಣಗಾರ, ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಮಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಕಾಂತಾ ನಾಯಕ ಸೇರಿದಂತೆ ಇತರರು ಇದ್ದರು. ಅಕ್ಕಿಯಲ್ಲಿ ಕೇಂದ್ರದಿಂದ ಮಹಾ ಅನ್ಯಾಯ 2023ನಲ್ಲಿ ನಾವು 5 ಗ್ಯಾರಂಟಿಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದೆವು. ಅಧಿಕಾರ ಸ್ವೀಕಾರ ಮಾಡಿದ ದಿನವೇ ಆದೇಶ ಹೊರಡೆದ್ದೆವು. ಜೂನ್ 11ರಿಂದ ಇಂದಿನವರೆಗೆ ₹196 ಕೋಟಿ ಮಹಿಳೆಯರು ಫ್ರೀಯಾಗಿ ಸರ್ಕಾರಿ ಬಸ್‌ನಲ್ಲಿ ಟ್ರಾವೆಲ್ ಮಾಡಿದ್ದಾರೆ. ಅನ್ನಭಾಗ್ಯ ನಾನು ಮೊದಲ ಅವಧಿಯಲ್ಲಿ 7 ಕೆಜಿ ಪ್ರತಿ‌ ಕುಟುಂಬದ ಸದಸ್ಯರಿಗೆ ಕೊಡುತ್ತಿದ್ದೇವೆ. ಯಡಿಯೂರಪ್ಪ ಬಂದ ಮೇಲೆ ಅದನ್ನು 5 ಕೆಜಿಗೆ ಇಳಿಸಿದರು. ಆಗ ನಾನು ಯಡಿಯೂರಪ್ಪಗೆ ಕೇಳಿದೆ ಅವರು ಒಪ್ಪಲಿಲ್ಲ. ಮತ್ತೆ ನಾವು ಕಳೆದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ ಮೇಲೆ ಅವರು ಕೊಡುವ ಐದು ಕೇಜಿ ಜೊತೆಗೆ ಹೆಚ್ಚುವರಿಯಾಗಿ ಇನ್ನೂ 5 ಕೆಜಿ ಕೊಡ್ತೆವೆ ಎಂದು ಮಾತು ಕೊಟ್ಟಿದ್ದೆವು. ಅದರಂತೆ ಅಕ್ಕಿ ಕೊಡಬೇಕು ಎಂದು ಫುಡ್ ಕಾರ್ಪೊರೇಷನ್ ಇಂಡಿಯಾದವರಿಗೆ ಕೇಳಿದೆ. ಅವರು ಕೊಡುತ್ತೇವೆ ಎಂದರು. ಬಳಿಕ ಮೂರು ದಿನ ಬಿಟ್ಟು ಕೇಂದ್ರ ಸರ್ಕಾರ ನಮಗೆ ರಾಜ್ಯಕ್ಕೆ ಅಕ್ಕಿ ಕೊಡಬೇಡಿ ಎಂದಿದೆ. ಸರ್ಕಾರದ ಆಜ್ಞೆಯನ್ನು ಧಿಕ್ಕರಿಸಲು ಆಗಲ್ಲ‌ ಅಂದರು. ಇದು ಮೋದಿ ಬಡವರಿಗೆ ಮಾಡಿದ ಮಹಾ ಅನ್ಯಾಯ ಎಂದು ಗುಡುಗಿದರು. ನಾನು ಬಸವಣ್ಣನ ಅನುಯಾಯಿ ಬಸವಾದಿ ಶರಣರು ಕೊಟ್ಟ ಮಾತಿನಂತೆ ಹೇಗೆ ನಡೆದರು ನಾವು ಹಾಗೆಯೇ ನಡೆದುಕೊಂಡಿದ್ದೇವೆ. ಬಸವಾದಿ ಶರಣರ ಅನುಯಾಯಿ ಆಗಿದ್ದುಕೊಂಡು ನಾವು ಅವರಂತೆ ನುಡಿದಂತೆ ನಡೆದಿದ್ದೇವೆ. ಅದಕ್ಕಾಗಿಯೇ ನಾವು ವಿಶ್ವಗುರು ಬಸವಣ್ಣನವರನ್ನು ಸಾಂಸ್ಕ್ರತಿಕ ನಾಯಕ ಅಂತ ಮಾಡಿದೇವೆ. ಆದರೆ ಇದೇ ಯಡಿಯೂರಪ್ಪ, ಬೊಮ್ಮಾಯಿ ಸಿಎಂ ಇದ್ದಾಗ ಈ ಕೆಲಸ ಮಾಡಿಲ್ಲ ಎಂದರು. ಒಣದ್ರಾಕ್ಷಿಯ ಹಾರದಿಂದ ಸ್ವಾಗತ ಬಳಿಕ ವಾಹನದ ಮೂಲಕ ವೇದಿಕೆಗೆ ಆಗಮಿಸಿದ ರಾಹುಲಗಾಂಧಿ ಸಾರ್ವಜನಿಕ ಸಭೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿದರು. ಇದಕ್ಕೂ ಮೊದಲು ರಾಹುಲ್‌ಗಾಂಧಿ ಅವರಿಗೆ ಸಚಿವ ಎಂ.ಬಿ.ಪಾಟೀಲ್ ಹಾಗೂ ರಂದೀಪ ಸುರ್ಜೆವಾಲ್‌ಗೆ ಸಚಿವ ಶಿವಾನಂದ ಪಾಟೀಲ್ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಒಣದ್ರಾಕ್ಷಿ ಹಾರಗಳನ್ನು ಹಾಕಿ ಸ್ವಾಗತ ಮಾಡಿಕೊಂಡರು. ಲೋಕಸಭಾ ಚುನಾವಣೆ 2024: ಇಂಡಿಯಾ ಮೈತ್ರಿಕೂಟಕ್ಕೆ 400 ಸೀಟು, ಸೈಯ್ಯದ ಬರಾಹಾನುದ್ದೀನ್ ರಾಜ್ಯದಂತೆ ಎಐಸಿಸಿ ಕೂಡ 25 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು, ಅದಕ್ಕೆ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ನಾಯಕ ರಾಹುಲಗಾಂಧಿ ಅವರು ಸೈನ್ ಮಾಡಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ಕೊಡುತ್ತಿದಾರೆ. ಬಡ ಕುಟುಂಬದ ಮಹಿಳೆಗೆ ವರ್ಷಕ್ಕೆ ₹1 ಲಕ್ಷ ಕೊಡುತ್ತಿದ್ದು, ಪ್ರತಿ ತಿಂಗಳು 8500 ಬಂದಂತೆ ಆಗುತ್ತದೆ. ಅದರ ಜೊತೆಗೆ ರಾಜ್ಯ ಸರ್ಕಾರ ವರ್ಷಕ್ಕೆ ₹24 ಸಾವಿರ ಕೊಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.  ರಾಜ್ಯದಲ್ಲಿ ಕೊಟ್ಟಿರುವ ಕಾಂಗ್ರೆಸ್ ಗ್ಯಾರಂಟಿ ಮನೆ ಮನೆ ಮಾತಾಗಿದೆ. ಪ್ರತಿ ಕುಟುಂಬ ಇದರ ಉಪಯೋಗ ಪಡೆದುಕೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ದೇಶದ ಅಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ ಹೇಳಿದ್ದಾರೆ.  ಇಂದು ಮೊದಲ ಹಂತದ ಚುನಾವಣೆ ಇರುವುದರಿಂದ ನಾನು ವೋಟ್ ಹಾಕುವ ಸಲುವಾಗಿ ನಮ್ಮೂರಿಗೆ ಹೋಗಿದ್ದೆ. ನಮ್ಮೂರಲ್ಲಿ ವೋಟ್ ಹಾಕಿ ಇಲ್ಲಿಗೆ ಬರುವುದರಲ್ಲಿ ತಡವಾಗಿದೆ ಎಂದು ಸಿಎಂ ಹೇಳಿದರು.

  • ಬಳ್ಳಾರಿಯನ್ನು ಜೀನ್ಸ್‌ ರಾಜಧಾನಿ ಮಾಡುವ ಮಾತಿಗೆ ಬದ್ಧ: ರಾಹುಲ್ ಗಾಂಧಿ
    on April 27, 2024 at 2:59 am

    ಬಳ್ಳಾರಿ (ಏ.27): ಬಳ್ಳಾರಿಯನ್ನು ಜೀನ್ಸ್‌ ರಾಜಧಾನಿಯನ್ನಾಗಿ ಮಾಡುವುದಾಗಿ ಹೇಳಿದ್ದೆ. ಜೀನ್ಸ್ ಅಪರೇಲ್ ಪಾರ್ಕ್ ನಿರ್ಮಿಸುವ ಭರವಸೆ ನೀಡಿದ್ದೆ. ಮುಖ್ಯಮಂತ್ರಿ ಸಿದ್ಧರಾಮಯ್ಯರ ಬಳಿ ಚರ್ಚಿಸಿದ್ದೇನೆ. ಬಳ್ಳಾರಿಯಲ್ಲಿ ಜೀನ್ಸ್ ಅಪರೇಲ್ ಪಾರ್ಕ್ ಆಗಿಯೇ ಆಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದರು. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಅವರು ಮಾತನಾಡಿದರು. ಸಿಎಂ ಜತೆ ಚರ್ಚಿಸಿದ್ದು, ಬಳ್ಳಾರಿಯಲ್ಲಿ ಜೀನ್ಸ್ ಅಪರೇಲ್ ಪಾರ್ಕ್ ಆಗಿಯೇ ಆಗುತ್ತದೆ. ಅದನ್ನು ನಾವು ಮಾಡಿ ತೋರಿಸುತ್ತೇವೆ ಎಂದ ರಾಹುಲ್ ಗಾಂಧಿ, ಭಾರತೀಯ ಚೊಂಬು ಪಕ್ಷಕ್ಕೆ ತಕ್ಕ ಪಾಠ ಕಲಿಸಲು ಇದು ಸಕಾಲವಾಗಿದೆ. ಕ್ಷೇತ್ರದ ಜನರು ಕಾಂಗ್ರೆಸ್‌ಗೆ ಶಕ್ತಿ ನೀಡಿ. ನುಡಿದಂತೆ ನಡೆಯುವ ಕಾಂಗ್ರೆಸ್‌ನ್ನು ಚುನಾಯಿಸಿ ಎಂದು ಮನವಿ ಮಾಡಿದರು. ಬರ ಪರಿಹಾರದ ಬದಲು ರಾಜ್ಯಕ್ಕೆ ಮೋದಿ ಕೊಟ್ಟದ್ದು ಖಾಲಿ ಚೊಂಬು: ರಾಹುಲ್‌ ಗಾಂಧಿ ಬಿಜೆಪಿ ಗೆದ್ದರೆ ಸಂವಿಧಾನ ಬದಲು: ಬಿಜೆಪಿಯವರು ಸಂವಿಧಾನ ಬದಲಿಸುವುದಾಗಿ ಆಗಾಗ್ಗೆ ಹೇಳುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿಗೆ ಅಧಿಕಾರ ಸಿಕ್ಕರೆ ಖಂಡಿತ ಆ ಕೆಲಸ ಮಾಡುತ್ತಾರೆ. ದೇಶದ ರಕ್ಷಣೆಯಾಗಲು ಸಂವಿಧಾನ ರಕ್ಷಣೆ ಮಾಡಬೇಕಾಗಿದೆ. ಸಂವಿಧಾನ ರೂಪಿಸುವ ಮುಂಚೆ ದಲಿತರು, ಆದಿವಾಸಿಗಳಿಗೆ ಯಾವುದೇ ಅಧಿಕಾರ ಇರಲಿಲ್ಲ. ಸಂವಿಧಾನ ಶೋಷಿತ ಸಮುದಾಯಗಳಿಗೆ ಎಲ್ಲವನ್ನೂ ನೀಡಿದೆ. ಜನಸಾಮಾನ್ಯರೊಂದಿಗೆ ಹೋರಾಟ ನಡೆಸಿದ ಕಾಂಗ್ರೆಸ್, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವ ದಿಸೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿ, ಸಂವಿಧಾನ ಅಸ್ವಿತ್ವಕ್ಕೆ ಕಾರಣವಾಗಿದೆ. ಆದರೆ, ಬಿಜೆಪಿಯವರು ಸಂವಿಧಾನವನ್ನೇ ಬದಲಾಯಿಸುವ ಆಲೋಚನೆಯಲ್ಲಿದ್ದಾರೆ. ದೇಶದಲ್ಲಿ ಸಂವಿಧಾನವನ್ನು ಬದಲಾಯಿಸುವ ಅಥವಾ ದುರ್ಬಲಗೊಳಿಸುವವರು ಇನ್ನೂ ಹುಟ್ಟಿಲ್ಲ ಎಂದರು. ಬಡ ಕುಟುಂಬಕ್ಕೆ ₹1 ಲಕ್ಷ: ಕೇಂದ್ರದ ಬಿಜೆಪಿ ಸರ್ಕಾರ, ಅದಾನಿ ಸೇರಿದಂತೆ ಕೆಲವೇ ಜನ ಶ್ರೀಮಂತರ ಕೈಗೆ ದೇಶದ ಸಂಪತ್ತು ನೀಡುತ್ತಿದೆ. ಆದರೆ, ಕಾಂಗ್ರೆಸ್ಸಿನವರು ದೇಶದ ಬಡಜನರಿಗೆ ಸಂಪತ್ತು ಹಂಚಿಕೆ ಮಾಡುವ ಯೋಚನೆ ಮಾಡುತ್ತಿದ್ದೇವೆ. ಅವರು ಶ್ರೀಮಂತರಿಗೆ ಹಣ ನೀಡಲು ಬಯಸಿದರೆ, ನಾವು ಬಡವರಿಗೆ ಹಣ ನೀಡಲು ಬಯಸಿದ್ದೇವೆ. ಕರ್ನಾಟದಲ್ಲಿ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದೇವೆ. ಈ ರೀತಿಯ ಜನಸಾಮಾನ್ಯರ ಕಲ್ಯಾಣಕ್ಕಾಗಿನ ಯೋಜನೆಗಳು ಈ ವರೆಗೆ ದೇಶದಲ್ಲಿ ಎಲ್ಲೂ ಜಾರಿಯಾಗಿಲ್ಲ. ಮಹಾಲಕ್ಷ್ಮಿ ಯೋಜನೆ ಮೂಲಕ ದೇಶದ ಬಡ ಕುಟುಂಬಗಳನ್ನು ಗುರುತಿಸಿ, ಅವರ ಖಾತೆಗಳಿಗೆ ವರ್ಷಕ್ಕೆ ಒಂದು ಲಕ್ಷ ಹಾಕಲಾಗುವುದು. ರಾಜ್ಯ ಸರ್ಕಾರ ಈಗಾಗಲೇ ₹2 ಸಾವಿರ ನೀಡುತ್ತಿದ್ದು ಇದರೊಂದಿಗೆ ಕಾಂಗ್ರೆಸ್‌ನಿಂದ ₹8500 ನೀಡಲಾಗುವುದು. ಈ ಮೂಲಕ ದೇಶದ ಬಡಜನರನ್ನು ಲಕ್ಷಾಧೀಶರನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು. ನಿರುದ್ಯೋಗ ತಂದ ಮೋದಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕೆ ಕೋವಿಡ್ ತಂದಂತೆಯೇ ನಿರುದ್ಯೋಗವನ್ನು ತಂದಿದ್ದಾರೆ. ಕೋವಿಡ್ ಓಡಿಸಲು ಗಂಟೆ ಬಾರಿಸಿ, ಜಾಗಟೆ ಬಾರಿಸಿ ಎಂದಿದ್ದರು. ನಿರುದ್ಯೋಗಿ ಯುವಕರು ರಸ್ತೆಯಲ್ಲಿ ನಿಂತು ಪಕೋಡಾ ಮಾರಿ ಎಂದು ಹೇಳಿದ್ದರು. ಉದ್ಯೋಗ ಸೃಷ್ಟಿಗೆ ಯಾವುದೇ ಕ್ರಮ ವಹಿಸದ ನರೇಂದ್ರ ಮೋದಿ ಬರೀ ಸುಳ್ಳು ಹೇಳಿಕೊಂಡು ಬಂದಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೊಗ ಸೃಷ್ಟಿ ಮಾಡಲಾಗುವುದು. ಪದವಿಪೂರ್ಣಗೊಳಿಸಿದ ನಿರುದ್ಯೋಗಿ ಯುವಕರಿಗೆ ಮಾಸಿಕ ₹8500ಗಳಷ್ಟು ಒಂದು ವರ್ಷದವರೆಗೆ ಭತ್ಯೆ ನೀಡಲಾಗುವುದು. ಆಶಾ, ಅಂಗನವಾಡಿ ಕಾರ್ಯಕರ್ತೆಯರ ಸಂಭಾವನೆ ದ್ವಿಗುಣ ಮಾಡಲಾಗುವುದು. ರೈತರ ಸಾಲ ಮನ್ನಾ ಮಾಡಲಾಗುವುದು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲಾಗುವುದು.  ಕೇಂದ್ರ ಜಾರಿಗೆ ತಂದಿರುವ ಅಗ್ನಿವೀರ ಯೋಜನೆಯನ್ನು ರದ್ದುಗೊಳಿಸಲಾಗುವುದು. ತೆರಿಗೆ ಪದ್ಧತಿಯನ್ನು ಸರಳೀಕರಣಗೊಳಿಸಲಾಗುವುದು ಎಂದು ರಾಹುಲ್‌ ಗಾಂಧಿ ಭರವಸೆ ನೀಡಿದರು. ಕಾಂಗ್ರೆಸ್‌ನ ರಾಷ್ಟ್ರೀಯ ಮುಖಂಡ ರಣದೀಪ್ ಸುರ್ಜೆವಾಲಾ, ಬಿ.ಕೆ. ಹರಿಪ್ರಸಾದ್, ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ, ಕೊಪ್ಪಳ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್, ಸಚಿವರಾದ ನಾಗೇಂದ್ರ, ಸಚಿವ ಶಿವರಾಜ ತಂಗಡಗಿ, ಜಮೀರ್ ಅಹ್ಮದ್, ಮಾಜಿ ಸಚಿವರಾದ ಅಲ್ಲಂ ವೀರಭದ್ರಪ್ಪ, ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕರಾದ ನಾರಾ ಭರತ್ ರೆಡ್ಡಿ, ಜೆ.ಗಣೇಶ್, ಗವಿಯಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಭೀಮಾನಾಯ್ಕ ಸೇರಿದಂತೆ ಹಲವರು ಸಮಾವೇಶದಲ್ಲಿ ಉಪಸ್ಥಿತರಿದ್ದರು. ತಡವಾಗಿ ಆರಂಭ: ಸಂಜೆ 4.30ಕ್ಕೆ ಆಗಮಿಸಬೇಕಿದ್ದ ರಾಹುಲ್ ಗಾಂಧಿ ಅವರು 5.55ಕ್ಕೆ ಬಂದರು. ನಿರೀಕ್ಷೆಯಷ್ಟು ಜನರು ಸೇರದ ಹಿನ್ನಲೆಯಲ್ಲಿ ರಾಹುಲ್ ಆಗಮನ ತಡವಾಯಿತು. ನೇರವಾಗಿ ವೇದಿಕೆಗೆ ಆಗಮಿಸುತ್ತಿದ್ದಂತೆಯೇ ಭಾಷಣ ಆರಂಭಿಸಿದ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ವಿರುದ್ಧ ಹರಿಹಾಯ್ದರಲ್ಲದೆ, ಭಾಷಣ ನಡುವೆ ಖಾಲಿ ಚೊಂಬು ಪ್ರದರ್ಶಿಸಿದರು. ರಾಹುಲ್ ಆಗಮಿಸುತ್ತಿದ್ದಂತೆಯೇ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ರಾಹುಲ್ ರಾಹುಲ್ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು. ಮತದಾರರಿಗೆ ಹಣ ಕೊಡುವವರೇ ರಣಹೇಡಿಗಳು: ಡಿಕೆಶಿಗೆ ಎಚ್‌ಡಿಕೆ ತಿರುಗೇಟು ಸಿಎಂ-ಡಿಸಿಎಂ ಗೈರು: ರಾಹುಲ್ ಗಾಂಧಿ ಅವರು ಭಾಗವಹಿಸುವ ಕಾಂಗ್ರೆಸ್ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದರು. ಸಮಾವೇಶ ಶುರು ಮುನ್ನ ಮುಖ್ಯಮಂತ್ರಿ ಸೇರಿದಂತೆ ಅನೇಕ ನಾಯಕರು ಆಗಮಿಸಲಿದ್ದಾರೆ ಎಂದು ನಿರೂಪಕರು ಹೇಳುತ್ತಿದ್ದರು. ಆದರೆ, ಕೊನೆಗೆ ರಾಹುಲ್‌ ಗಾಂಧಿ ಅವರು ಮಾತ್ರ ಕಾರ್ಯಕ್ರಮಕ್ಕೆ ಆಗಮಿಸಿ, ನೇರ ಭಾಷಣಕ್ಕೆ ನಿಂತರು.

  • ಭಾರತ ಕುಸ್ತಿ ಫೆಡರೇಷನ್ ಮತ್ತೆ ವಿಶ್ವ ಕುಸ್ತಿಯ ಬ್ಯಾನ್ ಎಚ್ಚರಿಕೆ!
    on April 27, 2024 at 2:54 am

    ನವದೆಹಲಿ(ಏ.27): ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ನಿಯಂತ್ರಣಕ್ಕೆ ಮತ್ತೆ ಸ್ವತಂತ್ರ ಸಮಿತಿಯನ್ನು ನೇಮಿಸಿದರೆ ಡಬ್ಲ್ಯುಎಫ್‌ಐ ಮೇಲೆ ಮತ್ತೆ ನಿಷೇಧ ಹೇರುತ್ತೇವೆ ಮತ್ತು ಭಾರತದ ಕುಸ್ತಿಪಟುಗಳನ್ನು ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಿಡುವುದಿಲ್ಲ ಎಂದು ಕುಸ್ತಿಯ ಜಾಗತಿಕ ಸಂಸ್ಥೆ ಎಚ್ಚರಿಕೆ ನೀಡಿದೆ.  ಕಳೆದ ಡಿಸೆಂಬರ್‌ನಲ್ಲಿ ಡಬ್ಲ್ಯುಎಫ್‌ಐಯನ್ನು ಭಾರತ ಒಲಿಂಪಿಕ್ ಸಂಸ್ಥೆ(ಐಒಎ) ಅಮಾನತುಗೊಳಿಸಿದ ಬಳಿಕ ಡಬ್ಲ್ಯುಎಫ್‌ಐ ನಿಯಂತ್ರಣಕ್ಕೆ ಸ್ವತಂತ್ರ ಸಮಿತಿ ನೇಮಿಸ ಲಾಗಿತ್ತು. ಇತ್ತೀಚೆಗಷ್ಟೇ ಅದನ್ನು ತೆರವುಗೊಳಿಸಲಾಗಿತ್ತು. ಬಳಿಕ ಸ್ವತಂತ್ರ ಸಮಿತಿಯನ್ನು ವಿಸರ್ಜಿಸಿದ್ದಕ್ಕೆ ಕಾರಣಗಳನ್ನು ತಿಳಿಸಿ ಎಂದು ಐಒಎಗೆ ದೆಹಲಿ ಹೈಕೋರ್ಟ್ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಾಗತಿಕ ಸಂಸ್ಥೆ ಎಚ್ಚರಿಕೆ ನೀಡಿದೆ. ವಿಶ್ವ ಆರ್ಚರಿ: ಭಾರತಕ್ಕೆ ನಾಲ್ಕು ಪದಕಗಳು ಖಚಿತ ಶಾಂಫ್ಟ್: ಇಲ್ಲಿ ನಡೆಯುತ್ತಿರುವ ಆರ್ಚರಿ ವಿಶ್ವಕಪ್‌ನಲ್ಲಿ ಭಾರತ 4 ಪದಕಗಳನ್ನು ಖಚಿತಪಡಿಸಿಕೊಂಡಿದೆ. ಶುಕ್ರ ವಾರ ಜ್ಯೋತಿ, ಅಭಿಷೇಕ್ ಕಾಂಪೌಂಡ್ ಮಿಶ್ರ ತಂಡ ವಿಭಾಗದಲ್ಲಿ ಫೈನಲ್‌ಗೇರಿದರು. ಈಗಾಗಲೇ ಕಾಂಪೌಂಡ್‌ ಪುರುಷ, ಮಹಿಳಾ, ಪುರುಷರ ರೀಕರ್ವ್ ತಂಡಗಳು ಪದಕ ಸುತ್ತಿಗೇರಿದ್ದು, ಬೆಳ್ಳಿ ಖಚಿತಪಡಿಸಿ ಕೊಂಡಿವೆ. ಇನ್ನು ಮಹಿಳೆಯರ ರೀಕರ್ವ್ ವೈಯಕ್ತಿಕ ವಿಭಾಗದಲ್ಲಿ ದೀಪಿಕಾ ಸೆಮಿಫೈನಲ್ ಪ್ರವೇಶಿಸಿದರು. ಕೆಕೆಆರ್ ಎದುರು 262 ರನ್‌ ಚೇಸ್‌: ಪಂಜಾಬ್ ಟಿ20 ವಿಶ್ವದಾಖಲೆ! ಏಷ್ಯನ್‌ ಅಥ್ಲೆಟಿಕ್ಸ್‌: ಕರ್ನಾಟಕದ ಶ್ರೀಯಾ ರಾಜೇಶ್‌ಗೆ ಕಂಚಿನ ಪದಕ ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಅಂಡರ್‌-20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಶ್ರೀಯಾ ರಾಜೇಶ್‌ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ 59.20 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಶ್ರೀಯಾ 3ನೇ ಸ್ಥಾನ ಪಡೆದರು. ಇದು ಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಕ್ಕ 2ನೇ ಪದಕ. ಗುರುವಾರ ಪಾವನ ನಾಗರಾಜ್‌ ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕೂಟದಲ್ಲಿ ಭಾರತ 5 ಚಿನ್ನ ಸೇರಿ 15 ಪದಕ ಗೆದ್ದಿದೆ. ಶನಿವಾರ ಕೂಟ ಮುಕ್ತಾಯಗೊಳ್ಳಲಿದೆ. ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಸೆಲೆಕ್ಟ್ ಮಾಡಿದ ಸಂಜಯ್ ಮಂಜ್ರೇಕರ್; ಕೊಹ್ಲಿ, ಪಾಂಡ್ಯಗಿಲ್ಲ ಸ್ಥಾನ..! ಸೇಲಿಂಗ್‌: ಭಾರತದ ನೇತ್ರಾ ಪ್ಯಾರಿಸ್‌ ಒಲಿಂಪಿಕ್ಸ್‌ ಪ್ರವೇಶ ನವದೆಹಲಿ: ಭಾರತದ ಸೇಲಿಂಗ್‌(ಹಾಯಿ ದೋಣಿ) ಪಟು ನೇತ್ರಾ ಕುಮಾನನ್‌ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದು ಸೇಲಿಂಗ್‌ನಲ್ಲಿ ಭಾರತಕ್ಕೆ ದೊರೆತ 2ನೇ ಒಲಿಂಪಿಕ್ಸ್‌ ಕೋಟಾ. ಫ್ರಾನ್ಸ್‌ನ ಹೇರೆಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ನೇತ್ರಾ ಮಹಿಳೆಯರ ಡಿಂಘಿ(ಐಎಲ್‌ಸಿಎ 6) ವಿಭಾಗದಲ್ಲಿ ಒಟ್ಟು 67 ಅಂಕ ಸಂಪಾದಿಸಿ 5ನೇ ಸ್ಥಾನಿಯಾದರು. ಆದರೆ ಇನ್ನೂ ಒಲಿಂಪಿಕ್ಸ್‌ ಕೋಟಾ ಪಡೆಯದ ಎಮರ್ಜಿಂಗ್‌ ನೇಷನ್ಸ್‌ ಪ್ರೋಗ್ರಾಂ(ಇಎನ್‌ಪಿ) ಸ್ಪರ್ಧಿಗಳ ಪೈಕಿ ಅಗ್ರಸ್ಥಾನ ಪಡೆದ ಕಾರಣ ನೇತ್ರಾ ಒಲಿಂಪಿಕ್ಸ್‌ ಪ್ರವೇಶಿಸಿದರು. ನೇತ್ರಾ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದರು.  

24X7 ಲೈವ್ ನ್ಯೂಸ್ ಟಿವಿ/ವೆಬ್ ಪೋರ್ಟಲ್/ಲೈವ್ ಆ್ಯಪ್/ಡೈಲಿ ಇ ನ್ಯೂಸ್ ಪೇಪರ್ ಬಹುರಾಷ್ಟ್ರೀಯ ಮತ್ತು ಬಹುಭಾಷಾ ಲೈವ್ ನ್ಯೂಸ್ ಮತ್ತು ಇತ್ತೀಚಿನ ಅಪ್‌ಡೇಟ್‌ಗಳು, ಅಂತಾರಾಷ್ಟ್ರೀಯದಿಂದ ರಾಷ್ಟ್ರೀಯ ಸುದ್ದಿ, ರಾಜಕೀಯದಿಂದ ಸಾಮಾಜಿಕ, ತಾಂತ್ರಿಕ ಮತ್ತು ವ್ಯವಹಾರ, ಕ್ರೀಡಾ ಸುದ್ದಿ, ಸ್ಥಳೀಯದಿಂದ ಜಾಗತಿಕ ನಿಷ್ಪಕ್ಷಪಾತ ಸುದ್ದಿ ಪ್ರಸಾರ. ನಮ್ಮೊಂದಿಗೆ 24X7 ಲೈವ್ ನ್ಯೂಸ್ ಟಿವಿಯಲ್ಲಿ ನವೀಕೃತವಾಗಿರಿ! ನಿಷ್ಪಕ್ಷಪಾತ, ಬೌದ್ಧಿಕ, ಅಂತರರಾಷ್ಟ್ರೀಯ, IOB ಸುದ್ದಿ ನೆಟ್‌ವರ್ಕ್‌ನೊಂದಿಗೆ ನವೀಕರಿಸಿ